GST 2.0 ನಂತರ ಗ್ರಾಹಕರ ಬೇಡಿಕೆಯಿಂದ ನಂ.1 ಸ್ಥಾನಕ್ಕೇರಿದ್ದ ಸ್ಕೋಡಾ ಕಾರುಗಳ ಬೆಲೆ ಎಷ್ಟು? ಇಲ್ಲಿದೆ ಪಟ್ಟಿ

Skoda Kylaq: ಇದೇ ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿರುವ GST 2.0 ರ ಪರಿಷ್ಕೃತ ದರವು ಸ್ಕೋಡಾ ಕಾರುಗಳ ದರದ ಮೇಲೂ ಕಂಡು ಬರಲಿದೆ. ಈ ಹೊಸ ತೆರಿಗೆ ಕಡಿತದ ನಂತರ, ಕಂಪನಿಯ ಪೋರ್ಟ್‌ಪೋಲಿಯೋದಲ್ಲಿ ಆರಂಭಿಕ ಹಂತದ ಕಿಲಾಕ್‌ SUV ಕಾರುಗಳ ಮೇಲೂ ಕಾಣಿಸಿಕೊಳ್ಳಲಿದೆ.

ವಾಸ್ತವವಾಗಿ, ಕಂಪನಿಯು ಈ SUV ಯ ಎಲ್ಲಾ ರೂಪಾಂತರಗಳ ಹೊಸ ಎಕ್ಸ್-ಶೋರೂಂ ಬೆಲೆಗಳನ್ನು ಘೋಷಿಸಿದೆ. ಹೊಸ GST ಕಡಿತದ ನಂತರ, ಈ ಕಾರಿನ ಬೆಲೆಯು 1.20 ಲಕ್ಷ ರೂ.ಗಳವರೆಗೆ ಅಗ್ಗವಾಗಲಿದೆ.

ಹೊಸ ದರ ಕಡಿತದ ಪರಿಣಾಮವು ಕಿಲಾಕ್‌ನ ಎಲ್ಲಾ 7 ರೂಪಾಂತರಗಳಲ್ಲಿಯೂ ಕಂಡುಬರುತ್ತದೆ. ಇದು ಬಿಡುಗಡೆಯಾದಾಗಿನಿಂದ ಅತ್ಯುತ್ತಮ ಮಾರಾಟವಾದ ಕಾರು ಕೂಡ ಆಗಿದೆ.

ಈಗ ನೀವು ಈ ಕಾರನ್ನು ಬುಕ್ ಮಾಡಲು ಹೋದರೆ, ಅದರ ಎಲ್ಲಾ ರೂಪಾಂತರಗಳಲ್ಲಿ ನೀವು ಎಷ್ಟು ಪ್ರಯೋಜನವನ್ನು ಪಡೆಯುತ್ತೀರಿ ಎಂದು ನೋಡೋಣ.

ಸ್ಕೋಡಾ ಕಿಲಾಕ್‌ ಕ್ಲಾಸಿಕ್‌ ಟ್ರಿಮ್‌ನ ವೈಶಿಷ್ಟ್ಯಗಳು

ಈ ಕಾರು 16-ಇಂಚಿನ ಅಲಾಯ್‌ ಚಕ್ರಗಳು, 6 ಏರ್‌ಬ್ಯಾಗ್‌ಗಳ‌, ಸೆಂಟ್ರಲ್ ಲಾಕಿಂಗ್, ಮ್ಯಾನುವಲ್ ಡೇ/ನೈಟ್ IRVM, ISOFIX ಆಂಕರ್‌ಗಳು, ಎಲ್ಲಾ ಪ್ರಯಾಣಿಕರಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್ ಗಳು, ಎಲ್ಲಾ ಪ್ರಯಾಣಿಕರಿಗೆ ಹೊಂದಾಣಿಕೆ ಮಾಡಬಹುದಾದ ಹೆಡ್‌ರೆಸ್ಟ್ಗಳು, ಟ್ರಾಕ್ಷನ್ ಕಂಟ್ರೋಲ್, ಆಟೋ ಎಂಜಿನ್ ಸ್ಟಾರ್ಟ್-ಸ್ಟಾಪ್, ಪವರ್ ವಿಂಡೋಸ್, ಮ್ಯಾನುವಲ್ AC, ರಿಯರ್ AC ವೆಂಟ್‌ಗಳು, ಡಿಜಿಟಲ್ MID ಯೊಂದಿಗೆ ಅನಲಾಗ್ ಡಯಲ್‌ಗಳು, ಫ್ರಂಟ್ ಸೆಂಟರ್ ಆರ್ಮ್ ರೆಸ್ಟ್, 12V ಚಾರ್ಜಿಂಗ್ ಸಾಕೆಟ್ (ಪ್ರಂಟ್), ಸ್ಟೀರಿಂಗ್ ಅಡ್ಡಸ್ಟ್, ಪವರ್ಡ್ ವಿಂಗ್ ಮಿರರ್‌ಗಳು, ಫ್ಯಾಬ್ರಿಕ್ ಸೀಟ್‌ಗಳು ಮತ್ತು 4 ಸ್ಪೀಕರ್‌ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ಓದಿ: ಜಿಎಸ್‌ಟಿ ದರ ಕಡಿತ : ಟಾಟಾ ಕಾರು ಖರೀದಿಸುವವರಿಗೆ ಗುಡ್ ನ್ಯೂಸ್!

ಸ್ಕೋಡಾ ಕಿಲಾಕ್‌ ಸಿಗ್ನೆಚ‌ರ್ ಟ್ರಿಮ್‌ನ ವೈಶಿಷ್ಟ್ಯಗಳು

ಈ ಟ್ರಿಮ್‌ನ ಕಾರುಗಳುಕೂಡಾ ಕ್ಲಾಸಿಕ್‌ನಂತೆಯೇ 16-ಇಂಚಿನ ಅಲಾಯ್ ವೀಲ್‌ಗಳು, ಟೈ‌ರ್ ಪ್ರೆಶ‌ರ್ ಮಾನಿಟರ್, ರಿಯರ್ ಡಿಫಾಗರ್, ಡ್ಯಾಶ್‌ ಬೋರ್ಡ್‌ನಲ್ಲಿ ಡ್ಯುಯಲ್-ಟೋನ್ ಫಿನಿಶ್, ಡೋರ್ ಪ್ಯಾನೆಲ್‌ಗಳು ಮತ್ತು ಫ್ಯಾಬ್ರಿಕ್ ಸೀಟುಗಳು, 5-ಇಂಚಿನ ಟಚ್‌ಸ್ಟ್ರೀನ್‌ ಇನ್ಫೋಟೈನ್‌ಮೆಂಟ್, ಸ್ಟೀರಿಂಗ್-ಮೌಂಟೆಡ್‌ ಕಂಟ್ರೋಲ್‌ಗಳು, ಎಸಿ ವೆಂಟ್‌ಗಳು ಮತ್ತು ಡೋರ್ ಹ್ಯಾಂಡಲ್‌ಗಳಲ್ಲಿ ಕ್ರೋಮ್ ಗಾರ್ನಿಶ್, ಯುಎಸ್‌ಬಿ ಟೈಪ್-ಸಿ ಸ್ಲಾಟ್ (ಮುಂಭಾಗ), ರಿಯರ್ ಪಾರ್ಸೆಲ್ ಶೆಲ್ಫ್ ಗಳು ಮುಂತಾದ ವೈಶಿಷ್ಟ್ಯಗಳು ಸೇರಿವೆ.

ಸ್ಕೋಡಾ ಕಿಲೋಕ್ ಪ್ರೆಸ್ಟೀಜ್ ಟ್ರಿಮ್‌ನ ವೈಶಿಷ್ಟ್ಯಗಳು

ಇದು 17-ಇಂಚಿನ ಮಿಶ್ರಲೋಹಗಳ ಚಕ್ರಗಳು, ಹಿಂಭಾಗದ ವೈಪರ್, ಆಟೋ-ಡಿಮ್ಮಿಂಗ್ IRVM, ಆಟೊಮೆಟಿಕ್‌ ಸನ್‌ರೂಫ್, ವೆಂಟಿಲೇಟೆಡ್ ಸೀಟುಗಳು, ಮುಂಭಾಗದಲ್ಲಿ ಅಡ್ಜೆಸ್ಟ್‌ ಮಾಡಬಹುದಾದ ಸೀಟುಗಳು, ಮುಂತಾದ ಸಿಗ್ನೆಚರ್+ ನ ಎಲ್ಲಾ ವೈಶಿಷ್ಟ್ಯಗಳನ್ನು ಈ ಟ್ರಿಮ್‌ ಕಾರುಗಳು ಹೊಂದಿರುತ್ತವೆ. ಇದರ ಆರಂಭಿಕ ಎಕ್ಸ್-ಶೋರೂಂ ಬೆಲೆ ರೂ. 7.89 ಲಕ್ಷ. ಇದು ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ಹುಂಡೈ ವೆನ್ಯೂ, ಮಹೀಂದ್ರಾ XUV 3XO, ಕಿಯಾ ಸೋನೆಟ್‌ನಂತಹ ಮಾದರಿಗಳೊಂದಿಗೆ ಸ್ಪರ್ಧಿಸುತ್ತದೆ.

ಇದನ್ನೂ ಓದಿ: ಮಹೀಂದ್ರಾ XUV 700 ಖರೀದಿಯಲ್ಲಿ 1 ಲಕ್ಷಕ್ಕೂ ಅಧಿಕ ಉಳಿತಾಯ: ಹೊಸ ಜಿಎಸ್‌ಟಿ ದರದಿಂದ ಭಾರಿ ಲಾಭ

(Skoda Kylaq price after GST 2.0 how much benefits will get customer here is the list)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories