ಬೆಳ್ಳುಳ್ಳಿ ಕೆಂಪು ಖಾರದ ಚಟ್ನಿ: ಪರೋಟಾ, ರೋಟಿಗೆ ಇದು ಬೆಸ್ಟ್‌ ಕಾಂಬಿನೇಷನ್‌

Garlic Chutney Recipe: ಬೆಳಗಿನ ತಿಂಡಿಗೆ ಏನು ಮಾಡುವುದು ಎಂಬ ಚಿಂತೆ ಒಂದಾದರೆ, ಅದಕ್ಕೆ ಕಾಂಬಿನೇಷನ್‌ ಆಗಿ ಏನು ಮಾಡುವುದು ಅನ್ನೋದು ಇನ್ನೊಂದು ಚಿಂತೆ.

ಇದು ಪ್ರತಿದಿನದ ತಪ್ಪದ ಗೋಳು. ಬೆಳಗ್ಗಿನ ಗಡಿಬಿಡಿಯಲ್ಲಿ ಎಲ್ಲಾ ದಿನವೂ ಪಲ್ಯ, ಬಾಜಿ, ಕರಿ ಎಂದೆಲ್ಲಾ ಮಾಡಲು ಸಾಧ್ಯವಿಲ್ಲ. ಆಗ ಸುಲಭದಲ್ಲಿ ತಯಾರಿಸಬಹುದಾದ ಅಡುಗೆಯನ್ನು ಹುಡುಕುತ್ತೇವೆ.

ಅದಕ್ಕೆ ಸುಲಭವಾಗಿ ಸಿಗುವ ಉತ್ತರ ಚಟ್ನಿ. ಆದರೆ ಹೆಚ್ಚಿನ ಚಟ್ನಿಗಳು ಬೇಗನೆ ಕೆಡುತ್ತವೆ. ಬೆಳಿಗ್ಗೆ ಮಾಡಿದ್ದು ಮಧ್ಯಾಹ್ನಕ್ಕೆ ತಿನ್ನಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಬಹಳ ಸಮಯದವರೆಗೆ ಇಟ್ಟು ತಿನ್ನಬಹುದಾದ ಚಟ್ನಿ ತಯಾರಿಸುವುದು ಉತ್ತಮ.

ಅದಕ್ಕೆ ಬೆಸ್ಟ್ ಚಟ್ನಿ ಎಂದರೆ ಬೆಳ್ಳುಳ್ಳಿ ಕೆಂಪು ಖಾರದ ಚಟ್ನಿ. ಇದು ಪರೋಟಾ, ರೋಟಿ, ಚಪಾತಿ, ದೋಸೆಗೂ ಉತ್ತಮ ಕಾಂಬಿನೇಷನ್‌ ಆಗಿದೆ.

ಹಾಗಾದರೆ ಸುಲಭವಾಗಿ ಮತ್ತು ಕೆಡದಂತೆ ಬೆಳ್ಳುಳ್ಳಿ ಕೆಂಪು ಖಾರದ ಚಟ್ನಿ ತಯಾರಿಸುವುದು ಹೇಗೆ ಎಂದು ನೋಡೋಣ.

ಬೆಳ್ಳುಳ್ಳಿ ಕೆಂಪು ಖಾರದ ಚಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳುಗಳು: 10 – 12
ಒಣಗಿದ ಕೆಂಪು ಮೆಣಸಿನಕಾಯಿಗಳು: 5 – 6
ಜೀರಿಗೆ: ಅರ್ಧ ಟೀ ಚಮಚ
ಹುಣಸೆ ಹಣ್ಣು : ಸ್ವಲ್ಪ
ಉಪ್ಪು: ರುಚಿಗೆ ತಕ್ಕಂತೆ
ಬೆಲ್ಲ: ಸ್ವಲ್ಪ
ಎಣ್ಣೆ: 3 ಚಮಚ

ಇದನ್ನೂ ಓದಿ: ಒಂದೇ ರೀತಿಯ ಪುಲಾವ್ ತಿಂದು ಬೇಜಾರಾಗಿದ್ರೆ, ಡಿಫರೆಂಟ್ ಆಗಿ ಟೊಮೊಟೊ ಪುಲಾವ್ ತಯಾರಿಸಿ

ಬೆಳ್ಳುಳ್ಳಿ ಕೆಂಪು ಖಾರದ ಚಟ್ನಿ ತಯಾರಿಸುವ ವಿಧಾನ

– ಮೊದಲು ಒಣ ಕೆಂಪು ಮೆಣಸಿನಕಾಯಿಗಳನ್ನು 10-15 ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ.

– ಈಗ ಚಿಕ್ಕ ಮಿಕ್ಸರ್ ಜಾರ್ ತೆಗೆದುಕೊಂಡು, ಅದಕ್ಕೆ ನೆನೆಸಿದ ಕೆಂಪು ಮೆಣಸಿನಕಾಯಿ, ಸಿಪ್ಪೆ ಸುಲಿದ ಬೆಳ್ಳುಳ್ಳಿ, ಜೀರಿಗೆ, ಹುಣಸೆ ಹಣ್ಣು, ಬೆಲ್ಲ ಮತ್ತು ಉಪ್ಪು ಸೇರಿಸಿ.

– ಇದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಚಟ್ನಿ ದಪ್ಪವಾಗಿರಲಿ. ಜಾಸ್ತಿ ನೀರು ಸೇರಿಸಬೇಡಿ.

– ಈಗ ಒಂದು ಸಣ್ಣ ಪ್ಯಾನ್‌ ತೆಗೆದುಕೊಂಡು ಅದಕ್ಕೆ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ.

– ಎಣ್ಣೆ ಬಿಸಿಯಾದ ನಂತರ, ರುಬ್ಬಿಟ್ಟುಕೊಂಡ ಚಟ್ನಿಯನ್ನು ಸೇರಿಸಿ. ಸುಮಾರು 2-3 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ.

– ಚಟ್ನಿ ಎಣ್ಣೆ ಬಿಡಲು ಪ್ರಾರಂಭಿಸಿದಾಗ, ಗ್ಯಾಸ್ ಆಫ್ ಮಾಡಿ.

ಸುಲಭವಾಗಿ ತಯಾರಿಸಬಹುದಾದ ಈ ಬೆಳ್ಳುಳ್ಳಿ ಕೆಂಪು ಖಾರದ ಚಟ್ನಿ ಜೋಳದ ರೊಟ್ಟಿಗಂತೂ ಸೂಪರ್‌ ಕಾಂಬಿನೇಷನ್‌ ಆಗಿದೆ.

ಇದನ್ನೂ ಓದಿ: Tomato Dosa Recipe : ಟೊಮ್ಯಾಟೋ ದೋಸೆ ರೆಸಿಪಿ ಎಂದಾದ್ರೂ ತಿಂದಿದ್ರಾ? ಒಮ್ಮೆಟ್ರೈ ಮಾಡಿ ಹೊಸ ರೆಸಿಪಿ

(How to make quick and easy Garlic Chutney Recipe best combination for paratha roti)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories