Robo Shankar : ಜನಪ್ರಿಯ ಹಾಸ್ಯನಟ ರೋಬೋ ಶಂಕರ್ ಇನ್ನಿಲ್ಲ : ಕಂಬಿನಿ ಮಿಡಿದ ಚಿತ್ರರಂಗ
Robo Shankar : ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ರೋಬೋ ಶಂಕರ್ ನಿಧನರಾಗಿದ್ದಾರೆ. ಅವರಿಗೆ 46ನೇ ವಯಸ್ಸಾಗಿತ್ತು. ಸೆಪ್ಟೆಂಬರ್ 18ರಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಟ ವಿಜಯ್, ಧನುಷ್ ಸೇರಿದಂತೆ ಖ್ಯಾತ ನಟರ ಜೊತೆಯಲ್ಲಿ ರೋಬೋ ಶಂಕರ್ ನಟಿಸಿದ್ದರು. ಸೆಪ್ಟೆಂಬರ್ 16ರಂದು ಸಿನಿಮಾ ಸೆಟ್ನಲ್ಲಿ ಅವರು ಮೂರ್ಚೆ ಹೋಗಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಕೆಲವು ವರ್ಷಗಳಿಂದ ಕಾಮಾಲೆ (jaundice) ಕಾಯಿಲೆಯಿಂದ ಬಳಲುತ್ತಿದ್ದರು. ದೂರದರ್ಶನದಲ್ಲಿ ತಮ್ಮ ಮಿಮಿಕ್ರಿ ಹಾಗೂ ಹಾಸ್ಯ ಕಾರ್ಯಕ್ರಮಗಳಿಂದ ಜನಪ್ರಿಯರಾದ ಶಂಕರ್, ನಂತರ ಸಿನಿಮಾ ರಂಗಕ್ಕೆ ಪ್ರವೇಶಿಸಿದರು.
ಧನುಷ್, ವಿಜಯ್ ಸೇರಿದಂತೆ ಹಲವು ಪ್ರಮುಖ ನಟರೊಂದಿಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಅವರ ಅನಿರೀಕ್ಷಿತ ಸಾವು ತಮಿಳು ಚಿತ್ರರಂಗಕ್ಕೆ ದೊಡ್ಡ ಆಘಾತ ಉಂಟುಮಾಡಿದ್ದು, ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಂಕರ್ (Robo Shankar) ಅವರ ಹಾಸ್ಯ ಪ್ರಜ್ಞೆ ಮತ್ತು ರೋಬೋಟ್ ತರಹದ ನೃತ್ಯ ಶೈಲಿ ಅವರಿಗೆ “ರೋಬೋ ಶಂಕರ್” ಎಂಬ ಅಡ್ಡಹೆಸರನ್ನು ತಂದುಕೊಟ್ಟಿತು. ಅವರ ನಿಧನಕ್ಕೆ ಚಿತ್ರರಂಗದಾದ್ಯಂತ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ : ಹಾಸ್ಯನಟ ಚಿಕ್ಕಣ್ಣ ಕೈ ಹಿಡಿಯಲಿದ್ದಾರೆ ಉದ್ಯಮಿ ಪಾವನಾ
ರೋಬೋ ಶಂಕರ್ ಅವರು ಅನೇಕ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಕೆಲವು ಪ್ರಮುಖ ಸಿನಿಮಾಗಳು ಇಲ್ಲಿವೆ:
ಮಾರಿ (Maari), ವೇಲೈನು ವಂದುತ್ತಾ ವೆಲ್ಲೈಕಾರನ್ (Velainu Vandhutta Vellaikaaran, ಮಾರಿ 2 (Maari 2), ವಿಶ್ವಾಸಂ (Viswasam), ಇಧಾರ್ಕುತಾನೆ ಆಸೈಪಟ್ಟೈ ಬಾಲಕುಮಾರ (Idharkuthane Aasaipattai Balakumara),ಇರುಂಬು ತಿರೈ (Irumbu Thirai,ಮನ್ನಾರ್ ವಗೈಯಾರ (Mannar Vagaiyara),ವೇಲೈಕಾರನ್ (Velaikkaran), ಸಿಂಗಂ 3 (Singam 3)
ಇದನ್ನೂ ಓದಿ : 72 ಗಂಟೆಗಳ ಕಾಲ ನಾಯಕನ್ನನು ಚುಂಬಿಸಿದ ಖ್ಯಾತ ನಟಿ
ಭಾರ್ಕ ಒರು ರಾಸ್ಕಲ್ (Bhaskar Oru Rascal), ಮಿ. ಲೋಕಲ್ (Mr. Local), ಹೀರೋ (Hero), ಯುತ್ತ ಸತಮ್ (Yutha Satham), ಕೋಬ್ರಾ (Cobra),ಅಲ್ಲದೆ, ಅವರು ಅನಿಮೇಟೆಡ್ ಚಲನಚಿತ್ರ ‘ದಿ ಲಯನ್ ಕಿಂಗ್’ ನ ತಮಿಳು ಅವತರಣಿಕೆಯಲ್ಲಿ ಪುಂಬಾ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.



