ಅಮೆಜಾನ್‌, ಫ್ಲಿಪ್‌ಕಾರ್ಟ್‌ನಲ್ಲಿ ವರ್ಷದ ಅತಿದೊಡ್ಡ ಹಬ್ಬದ ಮಾರಾಟ ಪ್ರಾರಂಭ

Amazon-Flipkart Festival Sale 2025: ಭಾರತದ ಅತಿ ದೊಡ್ಡ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಹಬ್ಬದ‌ ಮಾರಾಟವನ್ನು ಪ್ರಾರಂಭಿಸಿವೆ.

ಅಮೆಜಾನ್‌ನ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಮತ್ತು ಫ್ಲಿಪ್‌ಕಾರ್ಟ್‌ನ ಬಿಗ್‌ ಬಿಲಿಯನ್‌ ಡೇಸ್‌ ಸೆಪ್ಟೆಂಬರ್‌ 23ರಿಂದ ಮಾರಾಟ ಆರಂಭಿಸುವುದರ ಮೂಲಕ ಅತಿದೊಡ್ಡ ಶಾಪಿಂಗ್‌ ಸೀಸನ್‌ಗೆ ವೇದಿಕೆ ಸಿದ್ಧಪಡಿಸಿದೆ.

ಈ ಎರಡೂ ವೇದಿಕೆಗಳು ಅವರ ಪ್ರೈಮ್‌ ಸದಸ್ಯರಿಗೆ ಸೆಪ್ಟೆಂಬರ್‌ 22 ರಂದೇ ಆರಂಭಿಕ ಪ್ರವೇಶವನ್ನು ಕಲ್ಪಿಸಿವೆ. ಈ ಎರಡೂ ಫ್ಲಾಟ್‌ಫಾರ್ಮ್‌ಗಳು ವ್ಯಾಪಕ ಶ್ರೇಣಿಯ ಅತ್ಯಾಕರ್ಷಕ ಡೀಲ್‌ಗಳು, ಕೊಡುಗೆ ಹಾಗೂ ರಿಯಾಯಿತಿಗಳನ್ನು ತನ್ನ ಗ್ರಾಹಕರಿಗೆ ನೀಡಲಿವೆ. ಇದರ ಜೊತೆಗೆ ಬ್ಯಾಂಕ್‌ ಕೊಡುಗೆಗಳು ಸಹ ಲಭ್ಯವಿರುತ್ತವೆ.

ಹೊಸ ಜಿಎಸ್‌ಟಿ ಪದ್ಧತಿ ಜಾರಿಗೆ ಬಂದು ನಂತರ ಈ ವರ್ಷದ ಮಾರಾಟವು ಆರಂಭವಾಗಿದೆ. ಹವಾನಿಯಂತ್ರಕಗಳು, ಟೆಲಿವಿಷನ್‌ ಮತ್ತು ಡಿಶ್‌ವಾಶರ್‌ನಂತಹ ದೊಡ್ಡ ಉಪಕರಣಗಳ ಮೇಲಿನ ದರವು 28% ರಿಂದ 18% ಇಳಿಕೆಯಾಗಿದೆ.

ಇದರಿಂದ ಈ ಹಬ್ಬದ ಮಾರಾಟದಲ್ಲಿ ಕೈಗೆಟಕುವ ಬೆಲೆಯನ್ನು ನೀರಿಕ್ಷಿಸಬಹುದಾಗಿದೆ.

ಮೊಬೈಲ್‌ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ಕೊಡುಗೆಗಳು

ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಈ ಎರಡೂ ವೇದಿಕೆಗಳು ಹಬ್ಬದ ಮಾರಾಟದ ಸಮಯದಲ್ಲಿ ಮೊಬೈಲ್‌ ಮತ್ತು ಉಪಕರಣಗಳ ಮೇಲೆ ಬಂಪರ್‌ ಕೊಡುಗೆಗಳನ್ನು ನೀಡುತ್ತಿವೆ. ಇಯರ್‌ಫೋನ್‌ಗಳು, ಚಾರ್ಜರ್ ಅಡಾಪ್ಟರ್‌ ಮುಂತಾದ ಉಪಕರಣಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

ಟಿವಿ, ಎಸಿ, ರೆಫ್ರಿಜರೇಟರ್‌, ಕೂಲರ್‌ ಮುಂತಾದ ಎಲೆಕ್ಟ್ರಾನಿಕ್‌ ಉಪಕರಣಗಳ ಮೇಲೆ ಹೆಚ್ಚಿನ ಡೀಲ್‌ ಅನ್ನು ನೀಡುತ್ತಿವೆ. ಈ ಹಬ್ಬದ ಮಾರಾಟದ ಸಮಯವು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಸುವರ್ಣಾವಕಾಶ ನೀಡಿದೆ.

ಇದನ್ನೂ ಓದಿ: ಟ್ರಾನ್ಸ್‌ಪರಂಟ್‌ ಡಿಸೈನ್‌ನೊಂದಿಗೆ ಬರಲಿದೆ ನಥಿಂಗ್ ಇಯ‌ರ್ 3: ವೈಶಿಷ್ಟ್ಯಗಳೇನಿರಬಹುದು?

ಇವಷ್ಟೇ ಅಲ್ಲದೇ ಈ ಆನ್‌ಲೈನ್‌ ಮಾರಾಟದ ಸಮಯದಲ್ಲಿ ಇತರ ಹಲವು ಉತ್ಪನ್ನಗಳ ಮೇಲೂ ರಿಯಾಯಿತಿಗಳು ಲಭ್ಯವಿರುತ್ತವೆ. ಚಿಕ್ಕ ಪುಟ್ಟ ವಸ್ತುಗಳ ಮೇಲೂ ಆಫರ್‌ ಇರುವುದನ್ನು ಗಮನಿಸಬಹುದಾಗಿದೆ. ಬಟ್ಟೆ, ಮನೆಯ ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳು ಇತ್ಯಾದಿ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

ಯಾವೆಲ್ಲ ಬ್ಯಾಂಕ್‌ ಆಫರ್‌ಗಳಿವೆ?

ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಮಾರಾಟವು ಬ್ಯಾಂಕ್‌ ಕೊಡುಗೆಗಳನ್ನು ಸಹ ನೀಡುತ್ತವೆ. ಅದೇನೆಂದರೆ ಈ ಎರಡೂ ಫ್ಲಾಟ್‌ಫಾರ್ಮ್‌ಗಳು 10% ರವರೆಗೆ ತ್ವರಿತ ಕ್ಯಾಶ್‌ ಬ್ಯಾಕ್‌ ಕೊಡುಗೆ ನೀಡುತ್ತವೆ. ಈ ಕೊಡುಗೆ ಪಡೆಯಲು ಅಮೆಜಾನ್‌ ಇಂಡಿಯಾದಲ್ಲಿ ಎಸ್‌ಬಿಐ ಕಾರ್ಡ್‌ ಬಳಸುಬಹುದು. ಅದೇ ರೀತಿ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡುವುದಿದ್ದರೆ ಐಸಿಐಸಿಐ ಮತ್ತು ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ ಬಳಸಿ 10% ತ್ವರಿತ ಕ್ಯಾಶ್‌ಬ್ಯಾಕ್‌ ಪಡೆದುಕೊಳ್ಳಬಹುದು.

ಇದನ್ನೂ ಓದಿ: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 24 ಅಲ್ವಾ ಫೋನ್‌ ದರದಲ್ಲಿ ಭಾರಿ ಕಡಿತ! ಪ್ರೀಮಿಯಂ ಆಂಡ್ರಾಯ್ಡ್ ಫೋನ್ ಖರೀದಿಗೆ ಸಕಾಲ

(amazon flipkart festival sale 2025 started buy smartphones electronic items with low price)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories