ನವರಾತ್ರಿ ೬ ನೇ ದಿನ – ಜ್ಞಾನಚಕ್ರ( third eye) ದಲ್ಲಿ ನೆಲೆ ನಿಂತಿದ್ದಾಳೆ ಕಾತ್ಯಾಯಿನಿ- ಪೂಜಿಸಿದ್ರೆ ಮಾಂಗಲ್ಯ ಭಾಗ್ಯ ಪ್ರಾಪ್ತಿ
Navaratri : ನವರಾತ್ರಿಯಂದು ತಾಯಿಯನ್ನು ವಿವಿಧ ರೀತಿಯಲ್ಲಿ ಅಲಂಕಾರದಲ್ಲಿ ಪೂಜಿಸಿ ಆರಾಧಿಸುತ್ತೀವೆ. ಆಕೆಯ ಪ್ರತಿಯೊಂದು ರೂಪಕ್ಕೆ ಅದರದೇ ಆದ ಅರ್ಥವಿದೆ ಜೊತೆಗೆ ಮಹತ್ವವಿದೆ. ನವರಾತ್ರಿಯ ೬ ನೇ ದಿನವಾದ ಇಂದು ಮಹಾದುರ್ಗೆಯನ್ನು ಕಾತ್ಯಾಯಿನಿ(Katyayini) ರೂಪವಾಗಿ ಆರಾಧಿಸುತ್ತೇವೆ.
ತಾಯಿ ಕಾತ್ಯಾಯಿನಿ ಶಕ್ತಿಯ ಪ್ರತಿರೂಪವಾಗಿ ಇಲ್ಲಿ ನಮಗೆ ದರ್ಶನ ನೀಡುತ್ತಾಳೆ . ನಿನ್ನೆಯವರೆಗೆ ಶಾಂತ ಹಾಗೂ ಸೌಮ್ಯ ರೂಪ ಹೊಂದಿದ್ದ ತಾಯಿಯ ಸ್ವರೂಪ , ಈ ರೂಪದ ಮೂಲಕ ದೈತ್ಯ ಸಂಹಾರ ಮಾಡುವ ಶಕ್ತಿ ಶಾಲಿಯಾದ ಶಕ್ತಿಯ ಪರಿಚಯ ಮಾಡುತ್ತೆ. ಈಕೆಯನ್ನು ಸಂಮೃಧಿ ಹಾಗೂ ಸಂಪತ್ತಿನ ಪ್ರತೀಕ ಅಂತ ಹೇಳಲಾಗುತ್ತದೆ.
ಅವತಾರದ ಕಥೆ
ತಾಯಿ ಜಗನ್ಮಾತೆ ಈ ರೂಪದಲ್ಲಿ ದೈತ್ಯನಾದ ಮಹಿಷಾಸುರನನ್ನು ಸಂಹಾರ ಮಾಡಿದ ಕಥೆಯನ್ನು ನಾವು ಕೇಳುತ್ತೇವೆ. ಅಸುರನಾದ ಮಹಿಷಾಸುರ ಎಂಬ ರಾಕ್ಷಸನು ಬ್ರಹ್ಮನಲ್ಲಿ ತಾನಗೆ ಯಾವುದೇ ದೇವರು , ದೇವತೆಗಳು, ಅಥವಾ ಭೂಮಿಯ ಮೇಲಿನ ಯಾವುದೇ ಪ್ರಾಣಿ ಪಕ್ಷಿ ಕ್ರಿಮಿ ಕೀಟದಿಂದ ಸಾವು ಬರಬಾರದು ಎಂದು ವರ ಬೇಡಿದನಂತೆ. ವರ ಪಡೆದ ನಂತರ ದೇವಾನುದೇವತೆಗಳಿಗೆ, ಋಷಿ ಮುನಿಗಳಿಗೆ ಹಿಂಸಿಸೋಕೆ ಪ್ರಾರಂಬಿಸಿದನಂತೆ.
ಆಗ ದೇವತೆಗಳು ತ್ರಿ ಮೂರ್ತಿಗಳ ಬಳಿ ತಮ್ಮ ಕಷ್ಟ ಹೇಳಿಕೊಂಡರು , ತ್ರಿಮೂರ್ತಿಗಳು ಮಾಹಾತಪಸ್ವಿ ಕಾತ್ಯಾಯನ ಋಷಿಯ ಬಳಿ ಬಂದು ಚರ್ಚಿಸಿದರಂತೆ. ತ್ರಿಮೂರ್ತಿಗಳು ಕಾತ್ಯಾಯನ ಸಮೇತರಾಗಿ ಜಗಜ್ಜನನಿಯಲ್ಲಿ ಅಸುರನನ್ನು ವಧೆ ಮಾಡುವಂತೆ ಬೇಡಿಕೊಂಡರಂತೆ, ಜೊತೆಗೆ ತ್ರಿಮೂರ್ತಿಗಳು ತಮ್ಮಲ್ಲಿನ ಶಕ್ತಿಯನ್ನೆಲ್ಲಾ ಆ ತಾಯಿಗೆ ನೀಡಿ ಆಕೆ ಆವೀರ್ಭವಿಸುವಂತೆ ಮಾಡಿದರಂತೆ . ಆಗ ಜಗನ್ಮಾತೆ ಕ್ಯತ್ಯಾಯನ ಋಷಿಯ ಪುತ್ರಿಯಾಗಿ ಬಂದು ಸಂದ್ಯಾಕಾಲದಲ್ಲಿ ಮಹಿಷನನ್ನು ಸಂಹರಿಸಿದಳು ಎಂಬ ಕಥೆ ಇದೆ. ಇಲ್ಲಿ ತಾಯಿ ಕಾತ್ಯಾಯನ ಋಷಿಯ ಪುತ್ರಿಯಾಗಿ ಬಂದ ಕಾರಣ ಕಾತ್ಯಾಯಿನಿ ಎಂಬ ಹೆಸರು ಬಂತು
ತಾಯಿಯ ರೂಪ
ಶಕ್ತಿ ಸ್ವರೂಪಿಣಿಯಾದ ಈ ರೂಪ ಅತ್ಯಂತ ಮನೋಹರ ಮತ್ತು ಸುಂದರವಾದ ರೂಪ. ತಾಯಿ ನಾಲ್ಕು ಭುಜವನ್ನು ಹೊಂದಿದ್ದು ಸಿಂಹರೂಢಳಾಗಿ ದರ್ಶನ ನೀಡುತ್ತಾಳೆ . ಎರಡು ಕೈಗಳಲ್ಲಿ ಅಭಯ ಮುದ್ರೆ , ಮತ್ತೊಂದು ಕೈಯಲ್ಲಿ ಕಮಲ ಹಾಗೂ ನಾಲ್ಕನೇ ಕೈಯಲ್ಲಿ ಖಡ್ಗವನ್ನು ಧರಿಸಿ ನಿಂತಿದ್ದಾಳೆ. ಇನ್ನು ಈಕೆ ಗುರು ಗ್ರಹದ ಅಧಿಪತಿಯಾಗಿದ್ದಾಳೆ.
ಇದನ್ನೂ ಓದಿ : ನವರಾತ್ರಿಯ ೫ ನೇ ದಿನ – ಸ್ಕಂದನ ತಾಯಿಯಾಗಿ ಜಗನ್ಮಾತೆ ದರ್ಶನ- ಮಕ್ಕಳಿಗೆ ಬಾಳೆಹಣ್ಣು ನೀಡಿದ್ರೆ ದೇವಿ ಅನುಗ್ರಹ
ಹಿಂದುಧರ್ಮದಲ್ಲಿ ಸಾಧರಣ ಎಲ್ಲರಿಗೂ ಗೊತ್ತಿರುವಂತೆ ಗುರು ಗ್ರಹಕ್ಕೆ ಹೆಚ್ಚಿನ ಮಹತ್ವವಿದೆ. ಗುರುವಿನ ಕೃಪೆ ಇಲ್ಲ ಅಂದ್ರೆ ಯಾವುದೇ ಕೆಲಸ ಸಾಧವಿಲ್ಲ ಎಂಬುವುದು ಗೊತ್ತೇ ಇದೆ. ಹೀಗಾಗಿ ಈ ತಾಯಿಯನ್ನು ಪೂಜಿಸಿದ್ರೆ ಗುರುವಿನ ಅನುಗ್ರಹ ನಮ್ಮ ರಾಶಿಯಲ್ಲಿ ಪ್ರಾಪ್ತವಾಗುತ್ತೆ ಅನ್ನೋ ನಂಬಿಕೆ ಇದೆ. ಇನ್ನು ಈಕೆಯನ್ನು ಪೂಜಿಸೋದ್ರಿಂದ ಸರ್ಪದೋಷ ನಿವಾರಣೆ, ರಾಹು ದೋಷ ನಿವಾರಣೆಯಾಗುತ್ತಂತೆ
ಆರಾಧನಾ ರೀತಿ:
ನವರಾತ್ರಿಯ ಎಲ್ಲಾ ದಿನದಂತೆ ಇಂದು ಕೂಡಾ ಕಾತ್ಯಾಯಿನಿಯನ್ನು ಮುಂಜಾನೆ ಅಥವಾ ಸಂದ್ಯಾಕಾಲದಲ್ಲಿ ಪೂಜಿಸಿ ಆರಾಧಿಸುವ ಪದ್ದತಿ ಇದೆ. ತಾಯಿಗೆ ಕೆಂಪು ಹೂವು ಇಷ್ಟವಾದುದರಿಂದ ಕೆಂಪುಗುಲಾಬಿ ಹೂವನ್ನು ಅರ್ಪಿಸಿ ಪೂಜಿಸಬಹುದು. ಇನ್ನು ನೈವೇದ್ಯವಾಗಿ ಜೇನು ತುಪ್ಪವನ್ನು ಸಮರ್ಪಿಸಿದ್ರೆ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ. ತಾಯಿಗೆ ಇಷ್ಟವಾದ ಬಣ್ಣ ಬೂದು ಬಣ್ಣವಾಗಿದ್ದು , ಈ ಬಟ್ಟೆಗಳನ್ನು ಇಟ್ಟು ಪೂಜೆ ಮಾಡುವ ಪದ್ದತಿಯೂ ನಮ್ಮಲ್ಲಿದೆ.
ಇದನ್ನೂ ಓದಿ : Navaratri: ನವರಾತ್ರಿ ೪ ನೇ ದಿನ – ಬ್ರಹ್ಮಾಂಡವನ್ನೇ ಒಡಲಲ್ಲಿ ಧರಿಸಿ ನಿಂತಿದ್ದಾಳೆ ತಾಯಿ- ಕುಷ್ಮಾಂಡ ದೇವಿಗೆ ಕುಂಬಳ ಕಾಯಿಯೇ ಪ್ರಿಯ
ಇನ್ನು ಮದುವೆ ಯಾಗದ ಕನ್ಯೆಯರು ಕಾತ್ಯಾಯಿನಿಯನ್ನು ಪ್ರಾರ್ಥಿಸಿದ್ರೆ ಮಾಂಗಲ್ಯ ಭಾಗ್ಯ ಒಲಿಯುತ್ತೆ ಅನ್ನೋ ನಂಬಿಕೆ ಇದೆ. ಇನ್ನು ಮಾಂಗಲ್ಯ ದೋಷ ಹಾಗೂ ಪತಿಯ ದೀರ್ಘಾಯುಷ್ಯಕ್ಕಾಗಿ ಮಹಿಳೆಯರು ಕಾತ್ಯಾಯನಿ ದೇವಿಯನ್ನು ಆರಾಧಿಸುತ್ತಾರೆ. ದ್ವಾಪರಯುಗದಲ್ಲಿ ಕೂಡಾ ಕೃಷ್ಣನ್ನನ್ನು ಪತಿಯಾಗಿ ಪಡೆಯೋಕೆ ಗೋಪಿಕೆಯರು ತಾಯಿ ಕಾತ್ಯಾಯಿನಿಯನ್ನು ಪೂಜಿಸಿದ್ರು ಎನ್ನುವ ಮಾತಿದೆ . ಇನ್ನು ತಂತ್ರದ ಮೂಲಕ ದೇವಿಯನ್ನು ಆರಾಧಿಸುವರ ಪಾಲಿಗೆ ಕಾತ್ಯಾಯನಿ ದೇವಿಯು ಆಜ್ಞಾ ಚಕ್ರ , ಜ್ಞಾನ ಚಕ್ರ ಅಥವಾ third eye ನಲ್ಲಿ ನೆಲೆ ನಿಂತಿರುತ್ತಾಳೆ . ಈ ಚಕ್ರವನ್ನು ಊರ್ಜಿತ ಮಾಡುದರಿಂದ ಜ್ಞಾನದ ಚಕ್ಷು ಅಥವಾ ನೇತ್ರ ತೆರೆಯಲ್ಪಡುತ್ತದೆ ಎಂದು ಹೇಳಲಾಗುತ್ತೆ. ಇದನ್ನು ಥರ್ಡ್ ಐ ಓಪನಿಂಗ್ ಅಂತಾನು ಕರೆಯುತ್ತಾರೆ.



