ಬೈಂದೂರಿನಲ್ಲಿ ವಿಚಿತ್ರ ಕಳವು ಪ್ರಕರಣ : ಕಳವಾದ ಬೈಕ್‌ ಪತ್ತೆ, 2ನೇ ಬಾರಿ ಮತ್ತೆ ಬೈಕ್‌ ಕಳವು

Byndur News (ಬೈಂದೂರು) : ವ್ಯಕ್ತಿಯೋರ್ವನ ಬೈಕ್‌ ಒಂದೇ ತಿಂಗಳಿನಲ್ಲಿ ಎರಡು ಬಾರಿ ಕಳವು ಆಗಿರುವ ವಿಚಿತ್ರ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ಈ ಕುರಿತು ಬೈಂದೂರು ಪೊಲೀಸ್‌ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯ ಬೈಂದೂರು (Byndur) ತಾಲೂಕಿನ ಯಡ್ತರೆ ಗ್ರಾಮದ ನಿವಾಸಿ ಕೆ.ಅಬ್ದುಲ್‌ ಖಾದರ್‌ (61 ವರ್ಷ) ಎಂಬವರೇ ಬೈಕ್‌ ಕಳೆದುಕೊಂಡವರು. ಅಬ್ದುಲ್‌ ಖಾದರ್‌ ಅವರಿಗೆ ಸೇರಿದ KA-15-ED-0827 ನೋಂದಣಿ ಸಂಖ್ಯೆಯ ಟಿವಿಎಸ್‌ ರೆಡಾನ್‌ ಮೋಟಾರ್ ಸೈಕಲ್ ಎರಡು ಬಾರಿ ಕಳವು ಆಗಿದೆ.

ಸೆಪ್ಟೆಂಬರ್‌ 07 ರಂದು ಅಬ್ದುಲ್‌ ಖಾದರ್ ತಮ್ಮ ಮೋಟಾರ್ ಸೈಕಲ್ ಅನ್ನು ಮನೆಯ ಕಾಂಪೌಂಡ್ ಒಳಗೆ ಕೀ ಸಮೇತ ನಿಲ್ಲಿಸಿದ್ದರು. ಅದೇ ದಿನ ಅದನ್ನು ಯಾರೋ ಕಿಡಿಗೇಡಿಗಳು ತೆಗೆದುಕೊಂಡು ಹೋಗಿದ್ದು, ದೂರುದಾರರು ಹುಡುಕಾಡಿದಾಗ, ಸೆಪ್ಟೆಂಬರ್‌ 8 ರಂದು ಬೈಂದೂರು ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಪತ್ತೆಯಾಗಿತ್ತು.

ಇದನ್ನೂ ಓದಿ : ಉಡುಪಿ: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ₹17 ಲಕ್ಷ ರೂ. ವಂಚನೆ

Byndur : ಎರಡನೇ ಬಾರಿ ಬೈಕ್ ಕಳವು‌

ರೈಲ್ವೆ ನಿಲ್ದಾಣದಿಂದ ಮರಳಿ ತಂದಿದ್ದ ಮೋಟಾರ್ ಸೈಕಲ್ ಅನ್ನು ದಿನಾಂಕ ಸೆಪ್ಟೆಂಬರ್‌ 21ರ ರಂದು ರಾತ್ರಿ 11:45 ಗಂಟೆಗೆ ಅಬ್ದುಲ್ ಖಾದರ್ ಅವರು ಮತ್ತೆ ಮನೆಯ ಕಾಂಪೌಂಡ್‌ನಲ್ಲಿ ಇಟ್ಟಿದ್ದರು.

ಆದರೆ, ಮಾರನೇ ದಿನ ಸೆಪ್ಟೆಂಬರ್‌ 22 ರಂದು ಬೆಳಿಗ್ಗೆ 6:00 ಗಂಟೆಗೆ ನೋಡಿದಾಗ ಮೋಟಾರ್ ಸೈಕಲ್ ಇದ್ದ ಜಾಗದಲ್ಲಿ ಇರಲಿಲ್ಲ. ಯಾರೋ ಕಳ್ಳರು ಅದನ್ನು ಎರಡನೇ ಬಾರಿಗೆ ಕಳವು ಮಾಡಿಕೊಂಡು ಹೋಗಿರುವುದು ದೃಢಪಟ್ಟಿದೆ.

ಇದನ್ನೂ ಓದಿ: ಕಾರ್ಕಳ: ಲಿವಿಂಗ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಗೆ ಗರ್ಭಪಾತ ಹಲ್ಲೆ

ಈ ಸರಣಿ ಕಳವು ಕುರಿತು ಕೆ. ಅಬ್ದುಲ್ ಖಾದರ್ ಅವರು ನೀಡಿದ ದೂರಿನನ್ವಯ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(1) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories