ಉಡುಪಿ: ಅಕ್ರಮ ಮರಳು ಸಾಗಣೆ; ಟೆಂಪೋ ವಶ

Udupi illegal Sand transport : ಉಡುಪಿ: ಕರಾವಳಿ ಭಾಗದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಇದೀಗ ಅಕ್ರಮ ಮರಳು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ನಯಂಪಳ್ಳಿಯಲ್ಲಿ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.

ಪುತ್ತೂರು ತಾಲೂಕಿನ ನಯಂಪಳ್ಳಿ ಗ್ರಾಮದ ರೋಬೋಸಾಫ್ಟ್ ಬಳಿಯಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಟೆಂಪೋವನ್ನು ಉಡುಪಿ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಉಡುಪಿ ನಗರ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಪರಮೇಶ್ವರ ಕೆ. ಅವರು ಸಿಬ್ಬಂದಿಗಳ ಜೊತೆಗೆ ರೌಂಡ್ಸ್‌ನಲ್ಲಿದ್ದರು. ಸಂತೆಕಟ್ಟೆ ಕಡೆಯಿಂದ ಬರುತ್ತಿದ್ದ KA 20 D 8838 ನೋಂದಣಿ ಸಂಖ್ಯೆಯ 407 ಟೆಂಪೋ ವಾಹನವನ್ನು ತಡೆದು ಪರಿಶೀಲಿಸಿದ್ದಾರೆ.

Also Read : ಬೈಂದೂರು: ಕಾಲೇಜು ವಿದ್ಯಾರ್ಥಿನಿ ನಾಪತ್ತೆ, ಪ್ರಕರಣ ದಾಖಲು

ವಾಹನದಲ್ಲಿ 1.5 ಯೂನಿಟ್ ಅಂದಾಜು ₹3,500 ಮೌಲ್ಯದ ಮರಳು ಇರುವುದು ಪತ್ತೆಯಾಗಿದ್ದು, ಮರಳು ಸಾಗಣೆಗೆ ( Udupi illegal Sand transport ) ಯಾವುದೇ ಪರವಾನಿಗೆ ಇರಲಿಲ್ಲ.

ಈ ಮರಳನ್ನು ಮಣಿಪಾಲದ ಅರುಣ್ ಅವರ ಸೂಚನೆಯಂತೆ ಉಪ್ಪೂರು ಅಪ್ಪಣ್ಣ ಕುದ್ರುವಿನ ನದಿಯ ತೀರದ ಸರ್ಕಾರಿ ಜಾಗದಲ್ಲಿ ರಾಶಿ ಹಾಕಿದ್ದರಿಂದ ಕಳವು ಮಾಡಿಕೊಂಡು ಉಡುಪಿಗೆ ಸಾಗಿಸುತ್ತಿರುವುದಾಗಿ ವಾಹನ ಚಾಲಕ ತಿಳಿಸಿದ್ದಾನೆ.

ಈ ಬಗ್ಗೆ ಟೆಂಪೋ ವಾಹನದ ಮಾಲಕ ಅರುಣ್ ಮತ್ತು ಚಾಲಕನ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Also Read : ಉಡುಪಿ : ಅಂಬಲಪಾಡಿ ದೇವಸ್ಥಾನದಲ್ಲಿ ಸರಗಳ್ಳತನ ಯತ್ನ: ಇಬ್ಬರು ಮಹಿಳೆಯರ ಬಂಧನ

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories