ಬಿಗ್ಬಾಸ್ಗೆ ಬೀಗ ಮುದ್ರೆ, ಸರಕಾರದಿಂದ ಭ್ರಷ್ಟಾಚಾರ : ಸುನಿಲ್ ಕುಮಾರ್

ಬೆಂಗಳೂರು : ಆಡಳಿತ ಯಂತ್ರವೊಂದು ಭ್ರಷ್ಟಗೊಂಡಾಗ, ನೆಲದ ಕಾನೂನು ಹಾಗೂ ನಿಯಮಗಳನ್ನು ಗಾಳಿಗೆ ತೂರಿದಾಗ ಏನೇನಾಗಬಹುದು ಎನ್ನುವುದಕ್ಕೆ ಬಿಗ್ ಬಾಸ್ (Bigg Boss Kannada Season 12) ಮನೆಗೆ ಏಕಾಏಕಿ ಬೀಗಮುದ್ರೆ ಹಾಕಿದ್ದು, ಏಕಾಏಕಿ ತೆರವು ಮಾಡಿರುವ ಘಟನೆಯೇ ಸಾಕ್ಷಿ ಎಂದು ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಬಿಗ್ ಬಾಸ್ ಚಿತ್ರೀಕರಣ ನಡೆಯುತ್ತಿರುವ ಜಾಲಿವುಡ್ ಪಾರ್ಕ್ ನಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆಯ ಮೇರೆಗೆ ಅಕ್ಟೋಬರ್ 9 ರಂದು ಸ್ಥಳೀಯ ತಹಶೀಲ್ದಾರ್ ನೇತೃತ್ವದಲ್ಲಿ ಬಿಗ್ಬಾಸ್ ಮನೆಗೆ ಬೀಗ ಹಾಕಿದ್ದರು.
ಆದರೆ ಮರುದಿನ ತಡರಾತ್ರಿ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರೆಂಬ ಕಾರಣಕ್ಕೆ ಖುದ್ದು ರಾಮನಗರ ಡಿಸಿಯೇ ಮುಂದೆ ನಿಂತು ಬೀಗಮುದ್ರೆ ತೆರೆಸಿದರು.
ಎರಡು ದಿನಗಳ ಕಾಲ ನಡೆದ ಈ ಹೈಡ್ರಾಮ ಮೇಲ್ನೋಟಕ್ಕೆ ದೆಹಲಿಯಿಂದ ದೇವಗಿರಿಗೆ, ದೇವಗಿರಿಯಿಂದ ದೆಹಲಿಗೆ ರಾಜಧಾನಿಯನ್ನು ಬದಲಿಸಿದ ” ಹುಚ್ಚು ದೊರೆ” ತುಘಲಕ್ ನ ಆಡಳಿತಕ್ಕಿಂತ ಕಿಂಚಿತ್ ಭಿನ್ನವಾಗಿರಲಿಲ್ಲ. ಹಾಗಾದರೆ ಒಟ್ಟಾರೆ ಈ ಪ್ರಕರಣದ ಸೃಷ್ಟಿಕರ್ತರು ಯಾರು ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಹಾಸನಾಂಬೆ ದರ್ಶನ : ಸಚಿವ ಕೃಷ್ಣ ಬೈರೇಗೌಡ ಮಹತ್ವದ ಸೂಚನೆ
ಬಿಗ್ಬಾಸ್ಗೆ ನೋಟೀಸ್ ನಾಟಕ
ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ನರೇಂದ್ರಸ್ವಾಮಿ ಕೀಲುಗೊಂಬೆಯ ರೀತಿ ಯಾರದೋ ಇಶಾರೆಗೆ ಒಳಪಟ್ಟು ಬಿಗ್ ಬಾಸ್ ನಟ್ಟು ಬೋಲ್ಟ್ ಟೈಟ್ ಮಾಡಲು ಮುಂದಾದರೋ ? ಅಥವಾ ಮಾಲಿನ್ಯ ನಿಯಂತ್ರಣ ಮಂಡಳಿಯೂ ಸರ್ಕಾರದ ರೀತಿ 80% ಪರ್ಸೆಂಟ್ ಕಮಿಷನ್ ಹೊಡೆಯುವುದಕ್ಕಾಗಿ ಬಿಗ್ ಬಾಸ್ ಗೆ ನೋಟಿಸ್ ಕೊಡುವ ನಾಟಕ ಮಾಡಿತೋ ? ಎಂದಿದ್ದರೆ.
ಬೆಂಗಳೂರು ಗಾರ್ಬೇಜ್ ನಗರವಾಗಿ ಪರಿವರ್ತನೆಯಾಗಿದೆ. ಇಡೀ ರಾಜ್ಯಕ್ಕೆ ಸೂಕ್ತ ತ್ಯಾಜ್ಯ ವಿಲೇವಾರಿ ನೀತಿ ಇಲ್ಲ. ಹೀಗೆ ಇರುವಾಗ ನರೇಂದ್ರ ಸ್ವಾಮಿ ಅವರು ಗ್ರೇಟರ್ ಬೆಂಗಳೂರು ಕೇಂದ್ರ ಕಚೇರಿಗೆ ನೋಟಿಸ್ ನೀಡಲು ಧೈರ್ಯ ಪ್ರದರ್ಶಿಸಬಲ್ಲರೇ ? ಖಂಡಿತಾ ಇಲ್ಲ. ಯಾಕೆಂದ್ರೆ ಮಾಲಿನ್ಯ ನಿಯಂತ್ರಣ ವಿಚಾರವೂ ಈ ಸರ್ಕಾರಕ್ಕೆ ಕಪ್ಪ ಸಂಗ್ರಹದ ದಂಧೆಯಾಗಿದೆ ಎಂಬ ಆರೋಪ ಈಗ ಸಾರ್ವಜನಿಕ ವಲಯದಲ್ಲಿ ಜಗಜ್ಜಾಹಿರಾಗಿದೆ.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಔತಣಕೂಟ : ಯಾರಿಗೆ ಬೀಳ್ಕೊಡುಗೆ ?
ಕಾಳರಾತ್ರಿಯ ವ್ಯವಹಾರಕ್ಕೆ ಎಷ್ಟು ಪರ್ಸೆಂಟ್ ?
ಬಿಗ್ ಬಾಸ್ ಬೀಗಮುದ್ರೆ ಬಳಿಕ ಕಾಳರಾತ್ರಿಯಲ್ಲಿ ನಡೆದ ವ್ಯವಹಾರಕ್ಕೆ ಎಷ್ಟು ಪರ್ಸೆಂಟ್ ಕಪ್ಪ ನಿಗದಿ ಮಾಡಲಾಗಿತ್ತು ಎಂದು ಇಡಿ ರಾಜ್ಯ ಕೇಳುತ್ತಿದೆ. ಇದಕ್ಕೆ ಉತ್ತರಿಸುವವರು ಯಾರು ? ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಯೋ ?, ಹಾಲಿ ಮುಖ್ಯಮಂತ್ರಿಯೋ ಅಥವಾ ರಾತ್ರೋರಾತ್ರಿ ರಿಲೀಫ್ ಕೊಟ್ಟ ಉಪಮುಖ್ಯಮಂತ್ರಿಯೋ ? ಎಂದು ಶಾಸಕ ಸುನಿಲ್ ಕುಮಾರ್ ಅವರು ಪ್ರಶ್ನಿಸಿದ್ದಾರೆ.
Bigg Boss Kannada Season 12 house Lock, BJP MLA Sunil Kumar makes serious allegations against Karnataka Government



