ಪರೀಕ್ಷೆಯಿಲ್ಲದೇ ನೇರವಾಗಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗುವ ಸುರ್ವಣಾವಕಾಶ
Indian Army Jobs 2025: ಭಾರತದ ಹೆಮ್ಮೆಯ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇವೆ ಮಾಡಲು ಬಯಸುವ ಯುವಕರಿಗೆ ಅತ್ಯುತ್ತಮ ಅವಕಾಶ ಒದಗಿ ಬಂದಿದೆ.
ಅದೇನೆಂದರೆ ಭಾರತೀಯ ಸೇನೆಯು 143ನೇ ಟೆಕ್ನಿಕಲ್ ಗ್ರಾಜ್ಯುವೇಟ್ ಕೋರ್ಸ್ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಸೇನಾ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯು ಅಕ್ಟೋಬರ್ 8 ರಿಂದ ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವು ನವೆಂಬರ್ 6, 2025 ಆಗಿದೆ. ಅರ್ಹ ಅಭ್ಯರ್ಥಿಗಳು ಸರಿಯಾದ ಮಾಹಿತಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಟೆಕ್ನಿಕಲ್ ಗ್ರಾಜ್ಯುವೇಟ್ ಕೋರ್ಸ್ ಅನ್ನುವುದು ಸೈನ್ಯದ ಒಂದು ರೀತಿಯ ವಿಶೇಷ ಪ್ರವೇಶವಾಗಿದೆ. ಅದರ ಮೂಲಕ ಎಂಜಿನಿಯರ್ ವಿದ್ಯಾರ್ಥಿಗಳನ್ನು ಸೈನ್ಯದಲ್ಲಿ ನೇಮಕಮಾಡಿಕೊಳ್ಳಲಾಗತ್ತದೆ.
ತರಬೇತಿ ಪೂರ್ಣಗೊಂಡ ನಂತರ ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಸೇನೆಯ ಈ ವಿಶೇಷ ನೇಮಕಾತಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಎಂದು ತಿಳಿಯೋಣ.
ಟೆಕ್ನಿಕಲ್ ಗ್ರಾಜ್ಯುವೇಟ್ ಕೋರ್ಸ್ಗೆ ಸೇರಲು ಅಗತ್ಯವಿರುವ ಅರ್ಹತೆಗಳು
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಇತರೆ ಎಂಜಿನಿಯರಿಂಗ್ ಸ್ಟ್ರೀಮ್ಗಳಲ್ಲಿ ಎಂಜಿನಿಯರಿಂಗ್ ಪದವಿ ಕೋರ್ಸ್ ಪೂರ್ಣಗೊಳಿಸಿರಬೇಕು.
ಎಂಜಿನಿಯರ್ ಕೋರ್ಸ್ನ ಅಂತಿಮ ವರ್ಷದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರು. ಆದರೆ, ಅವರು ಜುಲೈ 1, 2026 ರೊಳಗೆ ಎಲ್ಲಾ ಸೆಮಿಸ್ಟರ್/ವರ್ಷಗಳ ಅಂಕಪಟ್ಟಿಗಳೊಂದಿಗೆ ಎಂಜಿನಿಯರಿಂಗ್ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುರಾವೆಯನ್ನು ಸಲ್ಲಿಸಬೇಕು.
ಭಾರತೀಯ ಮಿಲಿಟರಿ ಅಕಾಡೆಮಿ (IMA) ನಲ್ಲಿ ತರಬೇತಿ ಪ್ರಾರಂಭವಾದ ದಿನಾಂಕದ 12 ವಾರಗಳ ಒಳಗೆ ಎಂಜಿನಿಯರಿಂಗ್ ಪದವಿಯನ್ನು ಸಲ್ಲಿಸಬೇಕು.
ವಯೋಮಿತಿ
ಅಭ್ಯರ್ಥಿಗಳು ಜುಲೈ 1, 2026 ಕ್ಕೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 27 ವರ್ಷ ವಯೋಮಿತಿಯಲ್ಲಿರಬೇಕು.
ಇದನ್ನೂ ಓದಿ: 12ನೇ ತರಗತಿ ಪಾಸಾದ ಪುರುಷರಿಗೆ ಗುಡ್ ನ್ಯೂಸ್! 737 ಕಾನ್ಸ್ಟೇಬಲ್ ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸಿ
ದೈಹಿಕ ಅರ್ಹತೆ
ಈ ನೇಮಕಾತಿ ಅರ್ಜಿಸಲ್ಲಿಸಲು ಅಭ್ಯರ್ಥಿಗಳಿಗೆ ಈ ಕೆಳಗಿನವು ತಿಳಿದಿರಬೇಕು.
2.4 ಕಿ.ಮೀ ಓಟ (10 ನಿಮಿಷ 30 ಸೆಕೆಂಡ್)
40 ಪುಷ್ಅಪ್ಗಳು
06 ಪುಲ್ಅಪ್ಗಳು
80 ಸಿಟ್ಅಪ್ಗಳು
30 ಸ್ಕ್ವಾಟ್ಗಳು (2 ಸೆಟ್)
10 ಲಂಜೆಸ್ (2 ಸೆಟ್) ಹಾಗೂ
ಈಜು
ಟೆಕ್ನಿಕಲ್ ಗ್ರಾಜ್ಯುವೇಟ್ ಕೋರ್ಸ್ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ.
ಅರ್ಜಿ ಸಲ್ಲಿಕೆ ಹೇಗೆ?
- ಈ ನೇಮಕಾತಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಮೊದಲು ಸೇನೆಯ ಅಧಿಕೃತ ವೆಬ್ಸೈಟ್ joinindianarmy.nic.in ಗೆ ಭೇಟಿ ನೀಡಬೇಕು.
- ಅಲ್ಲಿ, ಆಫೀಸರ್ ಎಂಟ್ರಿ ಅಪ್ಲೈ/ಲಾಗಿನ್ ಮೇಲೆ ಕ್ಲಿಕ್ ಮಾಡಿ. ನಿಮ್ಮದು ಹೊಸ ನೋಂದಣಿಯಾಗಿದ್ದರೆ ನೋಂದಣಿ ಮೇಲೆ ಕ್ಲಿಕ್ ಮಾಡಿ.
- ಬಳಿಕ ಎಲ್ಲಾ ಸೂಚನೆಗಳನ್ನು ಓದಿದ ನಂತರ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
- ಈಗ ಡ್ಯಾಶ್ಬೋರ್ಡ್ನಲ್ಲಿ ‘ಅಪ್ಲೈ ಆನ್ಲೈನ್’ ಮೇಲೆ ಕ್ಲಿಕ್ ಮಾಡಿ. ಆಫೀಸರ್ ಸೆಲೆಕ್ಷನ್ ಎಲಿಜಿಬಿಲಿಟಿ ವಿಂಡೋ ತೆರೆದುಕೊಳ್ಳುತ್ತದೆ. ಟೆಕ್ನಿಕಲ್ ಗ್ರಾಜ್ಯುವೇಟ್ ಕೋರ್ಸ್ ಪಕ್ಕದಲ್ಲಿರುವ ‘ಅಪ್ಲೈ’ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ.
- ಕೊನೆಯ ದಿನದಂದು ಆನ್ಲೈನ್ ಅರ್ಜಿ ಸಲ್ಲಿಸಿ, 30 ನಿಮಿಷಗಳ ನಂತರ ಅಭ್ಯರ್ಥಿಗಳು ತಮ್ಮ ರೋಲ್ ಸಂಖ್ಯೆ ಹೊಂದಿರುವ ಅರ್ಜಿ ನಮೂನೆಯ ಎರಡು ಪ್ರತಿಗಳು ದೊರೆಯುತ್ತವೆ. ಅದರ ಪ್ರಿಂಟ್ಔಟ್ ತೆಗೆದುಕೊಳ್ಳಿ.
ಇದನ್ನೂ ಓದಿ: ಗುಡ್ ನ್ಯೂಸ್! ಪರೀಕ್ಷೆ ಬರೆಯದೇ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ
(Indian Army TGC 143 Recruitment 2025 apply for technical graduate course)



