ಗುಡ್ ನ್ಯೂಸ್! ಪರೀಕ್ಷೆ ಬರೆಯದೇ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ
IPPB GDS Recruitment 2025: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗ್ರಾಮೀಣ ಡಾಕ್ ಸೇವಕರ(GDS) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಉತ್ತಮ ಅವಕಾಶ ಒದಗಿಸಿದೆ.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) 300 ಕ್ಕೂ ಹೆಚ್ಚು ಖಾಲಿ ಇರುವ GDS ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 9 ರಂದು ಪ್ರಾರಂಭವಾಗಿದ್ದು, ಅಭ್ಯರ್ಥಿಗಳು ಅಕ್ಟೋಬರ್ 29, 2025 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ippbonline.com ಗೆ ಭೇಟಿನ ನೀಡಿ ಅರ್ಜಿ ಸಲ್ಲಿಸಬೇಕು. ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಇರುವ ಅರ್ಹತೆ ಮತ್ತು ಮಾನದಂಡಗಳೇನು ಎಂದು ತಿಳಿಯೋಣ.
ಹುದ್ದೆಯ ಹೆಸರು
ಗ್ರಾಮೀಣ ಡಾಕ್ ಸೇವಕ (ಕಾರ್ಯನಿರ್ವಾಹಕ)
ಒಟ್ಟು ಹುದ್ದೆಗಳು
ಈ ನೇಮಕಾತಿಯಲ್ಲಿ 348 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.
ವಯೋಮಿತಿ
ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಹಾಗೂ ಗರಿಷ್ಠ ವಯಸ್ಸು 35 ವರ್ಷಗಳು.
ವೇತನ
ಮಾಸಿಕ 30,000 ರೂ.
ವಿದ್ಯಾರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ.
ಇದನ್ನೂ ಓದಿ: ರೈಲ್ವೆಯಲ್ಲಿದೆ ಅತಿ ದೊಡ್ಡ ಅವಕಾಶ : 11,813 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಶುಲ್ಕ
ಆಯ್ಕೆ ಪ್ರಕ್ರಿಯೆ
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 750 ರೂ.ಗಳಾಗಿದೆ.
ಈ ಹುದ್ದೆಗೆ ಯಾವುದೇ ಪರೀಕ್ಷೆಗಳಿರುವುದಿಲ್ಲ. ಪದವಿಯಲ್ಲಿ ಪಡೆದ ಅಂಕದ ಅರ್ಹತೆಯ ಮೇಲೆ ಆಯ್ಕೆ ನಡೆಸಲಾಗುತ್ತದೆ.
ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಕ್ಕಿಸಿ.
ಅರ್ಜಿ ಸಲ್ಲಿಕೆ ಹೇಗೆ?
- ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲಿಗೆ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬೇಕು.
- ಅಲ್ಲಿ ಪ್ರಸ್ತುತ ಉದ್ಯೋಗಾವಕಾಶಗಳ ವಿಭಾಗದಲ್ಲಿ, ಅಂಚೆ ಇಲಾಖೆಯಿಂದ IPPB ಗೆ ಕಾರ್ಯನಿರ್ವಾಹಕರಾಗಿ ‘ಗ್ರಾಮೀಣ ಡಾಕ್ ಸೇವಕ’ ಮೇಲೆ ಕ್ಲಿಕ್ಕಿಸಿ.
- ಇದು IBPS ಅರ್ಜಿ ಸಲ್ಲಿಕೆ ವೆಬ್‌ಸೈಟ್‌ಗೆ ಮರುನಿರ್ದೇಶಿಸುತ್ತದೆ.
- ನೀವು ಈಗಾಗಲೇ ಇಲ್ಲಿ ನೋಂದಾಯಿಸಿಕೊಂಡಿದ್ದರೆ, ನೇರವಾಗಿ ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ ಲಾಗಿನ್ ಆಗಬಹುದಾಗಿದೆ.
- ಇಲ್ಲವಾದರೆ, ಹೊಸ ನೋಂದಣಿ ಆಯ್ಕೆ ಆಯ್ದುಕೊಳ್ಳಿ. ಅಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿಯನ್ನು ಭರ್ತಿ ಮಾಡಿದ ನಂತರ, ಭದ್ರತಾ ಕೋಡ್ ಅನ್ನು ಸಹ ನಮೂದಿಸಿ.
- ಈಗ ನೋಂದಣಿ ಸಂಖ್ಯೆಯ ಮೂಲಕ ಲಾಗಿನ್ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಬಳಿಕ ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ವಿಭಾಗದಲ್ಲಿ ಸರಿಯಾದ ಗಾತ್ರದಲ್ಲಿ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
ಈಗ ಅರ್ಜಿ ಶುಲ್ಕ ಪಾವತಿಸಿ ಮತ್ತು ಅಂತಿಮವಾಗಿ ಇನ್ನೊಮ್ಮೆ ಫಾರ್ಮ್ ಪರಿಶೀಲಿಸಿ ಸಲ್ಲಿಸಿ.
ಇದನ್ನೂ ಓದಿ: RRB NTPC ಗ್ರಾಜುಯೇಟ್ ಲೆವಲ್ ಸಿಬಿಟಿ 2 ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ: ಡೌನ್‌ಲೋಡ್ ಮಾಡುವುದು ಹೇಗೆ?
(IPPB GDS Recruitment 2025 invites application from degree holders for 348 posts)



