ಬುರುಡೆ ಪ್ರಕರಣ : ಚಿನ್ನಯ್ಯ ಪತ್ನಿ, ಸಹೋದರಿ ಎಸ್ಐಟಿ ಕಚೇರಿಗೆ ಹಾಜರು
Dharmasthala Case : ಧರ್ಮಸ್ಥಳ ಬುರುಡೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಸದ್ಯ ಬುರುಡೆ ಪ್ರಕರಣ ಸಂಬಂಧ ಆರೋಪಿ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿನಲ್ಲಿ ಇರಿಸಲಾಗಿದೆ. ಈ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ಪೊಲೀಸರು ಎಲ್ಲಾ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಚಿನ್ನಯ್ಯನ ಪತ್ನಿ ಮಲ್ಲಿಕಾಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಇಂದು ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಚಿನ್ನಯ್ಯ ಪತ್ನಿ ಮಲ್ಲಿಕಾ ಆಗಮಿಸಿದ್ದಾರೆ. ಪ್ರಕರಣದ ಕುರಿತು ಇಂದು ಎಸ್ಐಟಿ ಪೊಲಿಸರು ಮಲ್ಲಿಕಾ ವಿಚಾರಣೆ ನಡೆಸಲಿದ್ದಾರೆ. ಚಿನ್ನಯ್ಯಗೆ ಫಂಡಿಂಗ್ ಆಗಿರುವ ಬಗ್ಗೆ ಪೊಲೀಸರು ಮಲ್ಲಿಕಾರನ್ನು ಪ್ರಶ್ನಿಸುವ ಸಾಧ್ಯತೆಯಿದೆ.
ಆರೋಪಿ ಚಿನ್ನಯ್ಯ ಪತ್ನಿ ಮಲ್ಲಿಕಾ ಜೊತೆ ಸಹೋದರಿ ರತ್ನಾಗೂ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಇಂದು ರತ್ನಾ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹಾಜರಾಗಿದ್ದಾರೆ. ಮಾಧ್ಯಮಗಳನ್ನು ನೋಡುತ್ತಿದ್ದಂತೆಯೇ ರತ್ನಾ ಎಸ್ಐಟಿ ಕಚೇರಿ ಒಳಕ್ಕೆ ಓಡಿ ಹೋಗಿದ್ದಾರೆ. ರತ್ನಾ ಬಳಿಯೂ ಪೊಲೀಸರು ಫಂಡಿಂಗ್ ವಿಚಾರವಾಗಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
Dharmasthala Case: Chinnayya wife sister appear at SIT office Belthangady



