ಉದ್ಯಾಕಾಂಕ್ಷಿಗಳಿಗೆ ಸಿಹಿಸುದ್ದಿ : ಫಾಕ್ಸ್ಕಾನ್ ಕಂಪನಿಯಿಂದ 14 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಉದ್ಯೋಗಾವಕಾಶ
Job vacancy: ಉದ್ಯೋಗಾಕಾಂಕ್ಷಿಗಳಿಗೆ ಐಫೋನ್ ತಯಾರಕ ಫಾಕ್ಸ್ಕಾನ್ ಕಂಪನಿಯು ಸಿಹಿ ಸುದ್ದಿ ನೀಡಿದೆ. ಫಾಕ್ಸ್ಕಾನ್ ಕಂಪನಿಯು ತಮಿಳುನಾಡಿನಲ್ಲಿ 15 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು 14 ಸಾವಿರ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ತಮಿಳುನಾಡು ಸರ್ಕಾರ ಮಾಹಿತಿ ನೀಡಿದೆ.
ತಮಿಳುನಾಡು ರಾಜ್ಯದಲ್ಲಿ ಫಾಕ್ಸ್ಕಾನ್ ಕಂಪನಿಯಿಂದಾಗಿ ಬಹುದೊಡ್ಡ ಉದ್ಯೋಗ ಕ್ರಾಂತಿಯೇ ನೆರವೇರಲಿದೆ. ಇದು ತಮಿಳುನಾಡಿಗೆ ದೊರಕಿರುವ ಅತೀದೊಡ್ಡ ಉಡುಗೊರೆ ಎಂದು ರಾಜ್ಯ ಕೈಗಾರಿಕಾ ಸಚಿವ ಟಿಆರ್ಬಿ ರಾಜಾ ಸಂತಸ ವ್ಯಕ್ತಪಡಿಸಿದ್ದಾರೆ.
Also Read: ಪರೀಕ್ಷೆಯಿಲ್ಲದೇ ನೇರವಾಗಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗುವ ಸುರ್ವಣಾವಕಾಶ
ಎಕ್ಸ್ನಲ್ಲಿ ಈ ಸಂಬಂಧ ಪೋಸ್ಟ್ ಹಂಚಿಕೊಂಡಿರುವ ತಮಿಳುನಾಡು ಸಚಿವ ಟಿಆರ್ಬಿ ರಾಜಾ ಉದ್ಯೋಗಾಕಾಂಕ್ಷಿಗಳಿಗಾಗಿ ತಮಿಳುನಾಡು ಸರ್ಕಾರ ಬದ್ಧತೆ ಪ್ರದರ್ಶಿಸಿದೆ. ತಮಿಳುನಾಡಿನಲ್ಲಿ ಇದುವರೆಗೆ ನಡೆದ ಅತೀ ದೊಡ್ಡ ಉದ್ಯೋಗಾವಕಾಶ ಇದಾಗಿರಲಿದೆ. 14 ಸಾವಿರಕ್ಕೂ ಅಧಿಕ ಇಂಜಿನಿಯರ್ಗಳು ಸಿದ್ಧರಾಗಿ ಎಂದು ಕರೆ ನಿಡಿದ್ದಾರೆ.
ಇದಲ್ಲದೆ, ರಾಜ್ಯದ ಹೂಡಿಕೆ ಪ್ರಚಾರ ಸಂಸ್ಥೆ ಗೈಡೆನ್ಸ್ ತಮಿಳುನಾಡು ತ್ವರಿತ ನಿಯಂತ್ರಕ ಅನುಮೋದನೆಗಳಿಗಾಗಿ ತೈವಾನೀಸ್ ಕಂಪನಿಗೆ ಪ್ರತ್ಯೇಕ ಡೆಸ್ಕ್ ಅನ್ನು ಸ್ಥಾಪಿಸುತ್ತದೆ ಎಂದು ಸಚಿವ ಟಿಆರ್ಬಿ ರಾಜಾ ಮಾಹಿತಿ ನೀಡಿದ್ದಾರೆ.
Also Read: ಗುಡ್ ನ್ಯೂಸ್! ಪರೀಕ್ಷೆ ಬರೆಯದೇ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ
ತಮಿಳುನಾಡಿನಲ್ಲಿ ಸೃಷ್ಟಿಯಾಗುತ್ತಿರುವ ಈ ಉದ್ಯೋಗಾವಕಾಶವು ಎಲೆಕ್ಟ್ರಾನಿಕ್ಸ್ ಹಾಗೂ ಉತ್ಪಾದನಾ ವಲಯಕ್ಕೆ ಬಹುದೊಡ್ಡ ಕೊಡುಗೆ ನೀಡಲಿದೆ. ಇದರಿಂದ ನಿರುದ್ಯೋಗಿತನದ ಪ್ರಮಾಣದಲ್ಲಿ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬರುವ ಸಾಧ್ಯತೆ ಇದೆ.



