ಟೆರಿಟೋರಿಯಲ್ ಆರ್ಮಿ ನೇಮಕಾತಿ ರ್‍ಯಾಲಿ ವೇಳಾಪಟ್ಟಿ ಬಿಡುಗಡೆ: ಕರ್ನಾಟಕದಲ್ಲಿ ಯಾವಾಗ?
Territorial Army Recruitment 2025: ಸೇನೆಗೆ ಸೇರುವ ಮೂಲಕ ದೇಶ ಸೇವೆ ಮಾಡಲು ಬಯಸುವ ಯುವ ಅಭ್ಯರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್! ಟೆರಿಟೋರಿಯಲ್ ಆರ್ಮಿ ವಿವಿಧ ಹುದ್ದೆಗಳ ನೇಮಕಾತಿ ರ್‍ಯಾಲಿಯನ್ನು ಘೋಷಿಸಿದೆ.
ಅದರ ಪ್ರಕಾರ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಈ ನೇಮಕಾತಿ ರ್‍ಯಾಲಿಯು ನಡೆಯಲಿದೆ. ಇದರಲ್ಲಿ ಖಾಲಿ ಇರುವ 792 ಸೋಲ್ಜರ್ ಮತ್ತು ಸೋಲ್ಜರ್ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಇದರಲ್ಲಿ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳು ಒಳಗೊಂಡಿರುತ್ತವೆ. ಈ ಹಂತದಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು ನಂತರ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಬೇಕಾಗುತ್ತದೆ.
ಆಸಕ್ತ, ಅರ್ಹ ಅಭ್ಯರ್ಥಿಗಳು ರಾಜ್ಯವಾರು ದಿನಾಂಕಗಳ ಪ್ರಕಾರ ನೇಮಕಾತಿ ರ್‍ಯಾಲಿಯಲ್ಲಿ ಭಾಗವಹಿಸುವ ಮೂಲಕ ಸೇನೆಗೆ ಸೇರಬೇಕೆಂಬ ಆಸೆಯನ್ನು ನನಸಾಗಿಸಿಕೊಳ್ಳಬಹುದು.
ಯಾವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ?
ಈ ನೇಮಕಾತಿ ಅಭಿಯಾನದಲ್ಲಿ ಟೆರಿಟೋರಿಯಲ್ ಆರ್ಮಿಯು ಒಟ್ಟು 792 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.
ರಾಜ್ಯವಾರು ನೇಮಕಾತಿ ರ್‍ಯಾಲಿ ದಿನಾಂಕ
ಮೊದಲ ಹಂತದ ಪ್ರಾದೇಶಿಕ ಸೇನಾ ನೇಮಕಾತಿ ಪ್ರಕ್ರಿಯೆಯು ರಾಜ್ಯಗಳ ಪ್ರಕಾರ ವಿಭಿನ್ನ ದಿನಾಂಕಗಳಲ್ಲಿ ನಡೆಯಲಿದೆ. ಅದರ ವಿವರಗಳು ಈ ರೀತಿಯಾಗಿವೆ:
ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಒಡಿಶಾ, ರಾಜಸ್ಥಾನ: ನವೆಂಬರ್ 15 ರಿಂದ ಡಿಸೆಂಬರ್ 14, 2025
ದೆಹಲಿ ಮತ್ತು ಹರಿಯಾಣ ರಾಜ್ಯಗಳು: ನವೆಂಬರ್ 28 ರಿಂದ ಡಿಸೆಂಬರ್ 10, 2025 ರವರೆಗೆ
ಗುಜರಾತ್, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ, ಗೋವಾ, ತೆಲಂಗಾಣ, ದಮನ್ ಮತ್ತು ದಿಯು, ದಾದ್ರಾ ನಗರ ಹವೇಲಿ, ಪುದುಚೇರಿ, ಲಕ್ಷದ್ವೀಪ: ನವೆಂಬರ್ 15 ರಿಂದ ಡಿಸೆಂಬರ್ 1, 2025 ರವರೆಗೆ.
ಇದನ್ನೂ ಓದಿ: ಗುಡ್ ನ್ಯೂಸ್! ಪರೀಕ್ಷೆ ಬರೆಯದೇ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ
ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ?
ಈ ನೇಮಕಾತಿಯಲ್ಲಿ, ಪೂರ್ವನಿರ್ಧರಿತ ದಿನಾಂಕಗಳಂದು ರ್‍ಯಾಲಿ ನಡೆಯುತ್ತದೆ. ಇದರಲ್ಲಿ ಅಭ್ಯರ್ಥಿಗಳಿಗೆ ದೈಹಿಕ ದಕ್ಷತೆ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ಈ ಹಂತದಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಮುಂದಿನ ಹಂತದ ನೇಮಕಾತಿಗೆ ಅರ್ಹರೆಂದು ಪರಿಗಣಿಸಲಾಗುತ್ತದೆ. ಅಂದರೆ ಲಿಖಿತ ಪರೀಕ್ಷೆ. ನಂತರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಇದರಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಗಳನ್ನು ನೀಡಲಾಗುತ್ತದೆ. ನೇಮಕಾತಿ ಕುರಿತು ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು ಟೆರಿಟೊರಿಯಲ್ ಆರ್ಮಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬಹುದಾಗಿದೆ.
ಇದನ್ನೂ ಓದಿ: ಪರೀಕ್ಷೆಯಿಲ್ಲದೇ ನೇರವಾಗಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗುವ ಸುರ್ವಣಾವಕಾಶ
(state wise army rally date released for Territorial Army Recruitment 2025)



