Railway Department: SSLC ಮತ್ತು ITI ಪಾಸಾದವರಿಗೆ ಶುಭ ಸುದ್ದಿ : ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Railway Department: 10ನೇ ತರಗತಿ ಹಾಗೂ ITI ಉತ್ತೀರ್ಣರಾದವರಿಗೆ ಶುಭ ಸುದ್ದಿ ಕಾದಿದೆ. ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಈ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳಿಗೆ ಈಶಾನ್ಯ ರೈಲ್ವೆ ಇಲಾಖೆಯಿಂದ ದೇಶಾದ್ಯಂತ ಒಟ್ಟೂ 1104 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆ ಗಳಿಸಲು ಇಚ್ಛಿಸುವವರು ನವೆಂಬರ್ 15ರ ಒಳಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಖಾಲಿ ಇರುವ ಹುದ್ದೆಗಳ ವಿವರವನ್ನು ನೋಡುವುದಾದರೆ ಸಿಗ್ನಲ್ ವರ್ಕ್ಶಾಪ್ 63, ಬಿಡ್ಜಿ ವರ್ಕ್ಶಾಪ್ 35,ಮೆಕ್ಯಾನಿಕಲ್ ವರ್ಕ್ಶಾಪ್ 390, ಸಿಗ್ನಲ್ ವರ್ಕ್ಶಾಪ್ 63,ಡೀಸೆಲ್ ಶೆಡ್ 60, ಕ್ಯಾರೇಜ್ ಮತ್ತು ವ್ಯಾಗನ್ 64, ಕ್ಯಾರೇಜ್ ಮತ್ತು ವ್ಯಾಗನ್/ಲಕ್ನೋ 149, ಮೆಕ್ಯಾನಿಕಲ್ ವರ್ಕ್ಶಾಪ್ 142, ಕ್ಯಾರೇಜ್ ಮತ್ತು ವ್ಯಾಗನ್ ವಾರಣಾಸಿ 73, ಡೀಸೆಲ್ ಶೆಡ್/ಗೊಂಡಾ 88 ಹಾಗೂ ವಾರಣಾಸಿಯ ಟಿಆರ್ಡಿಯಲ್ಲಿ ಖಾಲಿ ಇರುವ 40 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
Also Read: ಕ್ರೀಡಾಪಟುಗಳಿಗೆ ಶುಭ ಸುದ್ದಿ! ಬಿಎಸ್ಎಫ್ನಲ್ಲಿ ಕಾನ್ಸ್ಟೇಬಲ್ನ ಜನರಲ್ ಡ್ಯೂಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಹತೆ :
ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಇಚ್ಛಿಸುವವರು 10ನೇ ತರಗತಿ ಅಥವಾ ಐಟಿಐನಲ್ಲಿ ಉತ್ತೀರ್ಣರಾಗಿರಬೇಕು. 2025ರ ಅಕ್ಟೋಬರ್ 16ಕ್ಕೆ ಅನ್ವಯವಾಗುವಂತೆ 24 ವರ್ಷದ ಒಳಗಿನ ಪ್ರಾಯವಾಗಿರಬೇಕು. ವಯಸ್ಸಿನ ಮಿತಿಯಲ್ಲಿ ಎಸ್ಸಿ, ಎಸ್ಟಿಗಳಿಗೆ 5 ವರ್ಷಗಳು, ಒಬಿಸಿಗೆ 3 ವರ್ಷಗಳು ಮತ್ತು ಪಿಎಚ್ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ :
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವವರು 100 ರೂಪಾಯಿಯನ್ನು ಶುಲ್ಕದ ರೂಪದಲ್ಲಿ ಪಾವತಿ ಮಾಡಬೇಕು. ಆದರೆ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದ್ದು ಯಾವುದೇ ಶುಲ್ಕ ಪಾವತಿಯ ಅಗತ್ಯವಿರುವುದಿಲ್ಲ.
Also Read: ಇಸ್ರೋದಲ್ಲಿ ಸೈಂಟಿಸ್ಟ್ ಆಗುವ ಸುರ್ಣಾವಕಾಶ: 141 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆಯ್ಕೆ ಪ್ರಕ್ರಿಯೆ :
ಈ ಹುದ್ದೆಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.



