ಸ್ವತಃ ಖರ್ಚಿನಲ್ಲಿ ಅಶಕ್ತ ಕುಟುಂಬಕ್ಕೆ ಸೂರು ಕಲ್ಪಿಸಿದ ಶಾಸಕ ವಿ. ಸುನಿಲ್‌ ಕುಮಾರ್‌

ಹೆಬ್ರಿ : ಕಳೆದ ಕೆಲವು ವರ್ಷಗಳಿಂದಲೂ ಕುಸಿಯುವ ಭೀತಿಯಲ್ಲಿದ್ದ ಮನೆಯಲ್ಲಿಯೇ ಆ ಕುಟುಂಬ ವಾಸವಾಗಿತ್ತು. ಸರಕಾರಿ ಸೌಲಭ್ಯ ಪಡೆಯಲು ದಾಖಲೆಗಳ ಸಮಸ್ಯೆ ಆಗಿತ್ತು. ಆದ್ರೆ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ (Karkala MLA V Sunil Kumar ) ತಮ್ಮ ಸ್ವತಃ ಖರ್ಚಿನಿಂದ ಮನೆಯೊಂದನ್ನು ನಿರ್ಮಿಸಿ, ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

Karkala MLA V Sunil Kumar provided a roof for a family

ಉಡುಪಿ ಜಿಲ್ಲೆಯ ಹೆಬ್ರಿಯ ಬಡಾಗುಡ್ಡೆಯ ಚುಕ್ರಿ ಕೊರಗ ಅವರ ಮನೆಯಲ್ಲಿಂದು ಹಬ್ಬದ ಸಂಭ್ರಮ. ದೀಪಾವಳಿಗೆ ಒಂದು ದಿನ ಮೊದಲು ಚುಕ್ರಿ ಕೊರಗ ಕುಟುಂಬಸ್ಥರು ಹೊಸ ಮನೆಯ ಗ್ರಹಪ್ರವೇಶ ಮಾಡಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆಯಷ್ಟೆ ಚುಕ್ರಿ ಕೊರಗ ಕುಟುಂಬಸ್ಥರು ಕಾರ್ಕಳ ಶಾಸಕರಾದ ಸುನಿಲ್‌ ಕುಮಾರ್‌ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಸುನಿಲ್‌ ಕುಮಾರ್‌ ಸ್ಥಳಕ್ಕೆ ಆಗಮಿಸಿ ಅವರ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದರು.

Karkala MLA V Sunil Kumar provided a roof for a family

ತಮ್ಮದೇ ಖರ್ಚಿನಲ್ಲಿ ಚುಕ್ರಿ ಕೊರಗ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಇದೀಗ ಸುಸಜ್ಜಿತ ಮನೆಯೊಂದನ್ನು ನಿರ್ಮಾಣ ಮಾಡಿದ್ದು, ಶೌಚಾಲಯದ ವ್ಯವಸ್ಥೆಯನ್ನೂ ಕಲ್ಪಿಸಿಕೊಟ್ಟಿದ್ದಾರೆ.

Also Read : ಬೈಂದೂರು : ಶಾಲಾ ವಾಹನಕ್ಕೆ ನಕಲಿ ವಿಮಾ ಪಾಲಿಸಿ, ಪ್ರಕರಣ ದಾಖಲು

ಮನೆಯ ಪಕ್ಕದಲ್ಲಿರುವ ದೈವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ದೈವಸ್ಥಾನದಲ್ಲಿ ಬೆಳಗಿಸಿ ದೀಪ ಹಾಗೂ ದೇವರ ಪೋಟೋವನ್ನು ತಂದು ಮನೆಯಲ್ಲಿ ಇರಿಸಿದ್ದಾರೆ. ಮನೆಯವರಿಂದಲೇ ದೀಪ ಬೆಳಗಿಸುವ ಮೂಲಕ ಮನೆಯನ್ನು ಉದ್ಘಾಟಿಸಿದ್ದಾರೆ.

Karkala MLA V Sunil Kumar provided a roof for a family

ಮನೆಯ ಕೀಲಿಕೈಯನ್ನು ಹಸ್ತಾಂತರಿಸುವ ಮೂಲಕ ಮನೆಯವರ ಖುಷಿಯನ್ನು ಕಂಡು ತಾವೂ ಸಂಭ್ರಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಂದಲೂ ಅಹವಾಲು ಸ್ವೀಕರಿಸಿದ್ದು, ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.

Also Read : ಪ್ರೇಯಸಿಯ ಜೊತೆಗೆ ಲಾಡ್ಜ್‌ನಲ್ಲಿದ್ದ ಪುತ್ತೂರಿನ ಯುವಕ ನಿಗೂಢ ಸಾವು

ಜನಸೇವೆಯಲ್ಲಿಯೇ ಸಾರ್ಥಕತೆ ಕಾಣುವವರು ಮಾತ್ರವೇ ನಿಜವಾದ ಜನನಾಯಕ ಎನಿಸಿಕೊಳ್ತಾರೆ. ಇದೇ ಹಾದಿಯಲ್ಲಿಯೇ ಶಾಸಕ ಸುನಿಲ್‌ ಕುಮಾರ್‌ ಸಾಗುತ್ತಿದ್ದಾರೆ.

ತನ್ನ ಸ್ವತಃ ಖರ್ಚಿನಿಂದ ಅಶಕ್ತ ಕುಟುಂಬಕ್ಕೆ ಸೂರು ಕಲ್ಪಿಸಿದ್ದಾರೆ. ಈ ಮೂಲಕ ಕಾರ್ಕಳದ ಶಾಸಕರು ಇತರರಿಗೆ ಮಾದರಿಯಾಗಿದ್ದಾರೆ. ಮನೆ ಹಸ್ತಾಂತರ ವೇಳೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು, ಗ್ರಾಮಸ್ಥರು, ಗ್ರಾಮ ಪಂಚಾಯತ್‌ ಅಧ್ಯಕ್ಷರು ಉಪಸ್ಥಿತರಿದ್ದರು.

Karkala MLA V Sunil Kumar provided a roof for a family

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories