ಪ್ರೇಯಸಿಯೊಂದಿಗೆ ಲಾಡ್ಜ್ನಲ್ಲಿದ್ದ ಪುತ್ತೂರಿನ ಯುವಕ ನಿಗೂಢ ಸಾವು
ಬೆಂಗಳೂರು: mysterious death: ಪ್ರೇಯಸಿಯೊಂದಿಗೆ ಬೆಂಗಳೂರಿನ ಲಾಡ್ಜ್ನಲ್ಲಿ 8 ದಿನಗಳಿಂದ ಪ್ರೇಯಸಿಯೊಂದಿಗೆ ತಂಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಯುವಕನನ್ನು 20 ವರ್ಷದ ತಕ್ಷತ್ ಎಂದು ಗುರುತಿಸಲಾಗಿದೆ. 8 ದಿನಗಳ ಕಾಲ ಪ್ರೇಯಸಿಯೊಂದಿಗೆ ಬೆಂಗಳೂರಿನ ಮmಡಿವಾಳದ ಗ್ರ್ಯಾಂಡ್ ಚಾಯ್ಸ್ ಎಂಬ ಲಾಡ್ಜ್ನಲ್ಲಿ ತಂಗಿದ್ದ ತಕ್ಷಿತ್ 9ನೇ ದಿನ ಶವವಾಗಿ ಪತ್ತೆಯಾಗಿದ್ದಾನೆ.
ಮೈಸೂರಿಗೆ ವ್ಯಾಸಂಗ ಮಾಡಲು ತೆರಳುತ್ತೇನೆ ಎಂದು ಮನೆಯವರನ್ನು ನಂಬಿಸಿದ್ದ ತಕ್ಷತ್ ವಿರಾಜಪೇಟೆಯ ಯುವತಿಯೊಂದಿಗೆ ಬೆಂಗಳೂರಿನ ಲಾಡ್ಜ್ಗೆ ಆಗಮಿಸಿದ್ದ ಎನ್ನಲಾಗಿದೆ. 8 ದಿನಗಳ ಕಾಲವೂ ಇಬ್ಬರೂ ಸ್ವಿಗ್ಗಿಯಿಂದ ಫುಡ್ ತರಿಸಿಕೊಂಡು ತಿನ್ನುತ್ತಿದ್ದರು ಎನ್ನಲಾಗಿದೆ.
Also Read: ಬೆಂಗಳೂರಿನಿಂದ ತೆರಳುತ್ತಿದ್ದ ಖಾಸಗಿ ಬಸ್ನಲ್ಲಿ ಅಗ್ನಿ ದುರಂತ
ಊಟ ತಿಂದ ಬಳಿಕ ಇಬ್ಬರಿಗೂ ಫುಡ್ ಪಾಯಿಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರೂ ಮಾತ್ರೆ ತರಿಸಿಕೊಂಡು ತಿಂದಿದ್ದು ಮಾತ್ರೆ ಸೇವಿಸಿದ ಬಳಿಕ ಯುವತಿ ಲಾಡ್ಜ್ನಿಂದ ಹೊರಗೆ ತೆರಳಿದ್ದರೆ ಈತ ಲಾಡ್ಜ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಯುವಕ ಹಾಗೂ ಯುವತಿ ಇಬ್ಬರೂ ಪಣಂಬೂರಿನ ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದ್ದರು ಎನ್ನಲಾಗಿದೆ. ಅಕ್ಟೋಬರ್ 9ರಂದು ಲಾಡ್ಜ್ನಲ್ಲಿ ಚೆಕ್ ಇನ್ ಆಗಿದ್ದ ಈ ಜೋಡಿ ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡುತ್ತಿದ್ದರು ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೇಶವ ಕೃಪಾ ಮುಂದೆ ಎನ್ಎಸ್ಯುಐ, ಯೂತ್ ಕಾಂಗ್ರೆಸ್ ಪ್ರತಿಭಟನೆ : ಬಿಜೆಪಿ ನಿಯೋಗದಿಂದ ಆಯುಕ್ತರಿಗೆ ದೂರು
ಎಷ್ಟೇ ಬಾಗಿಲು ಬಡಿದರೂ ಯಾರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಲಾಡ್ಜ್ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ತಕ್ಷತ್ ಶವವಾಗಿ ಮಲಗಿರುವುದು ಬೆಳಕಿಗೆ ಬಂದಿದೆ. ಬಳಿಕ ಲಾಡ್ಜ್ ಸಿಬ್ಬಂದಿ ಮಡಿವಾಳ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.



