Veg biryani murder : ವೆಜ್​ ಬಿರಿಯಾನಿ ಬದಲು ಮಾಂಸಾಹಾರಿ ಬಿರಿಯಾನಿ ನೀಡಿದ್ದಕ್ಕೆ ಹೋಟೆಲ್​ ಮಾಲೀಕನ ಹ*ತ್ಯೆ

Veg biryani murder : ಬಿರಿಯಾನಿ ಬಹುತೇಕರ ಪ್ರಿಯವಾದ ಭಕ್ಷ್ಯ. ಆದರೆ ಇದೇ ಬಿರಿಯಾನಿ ಹೋಟೆಲ್​ ಮಾಲೀಕರೊಬ್ಬರ ಪ್ರಾಣವನ್ನೇ ಬಲಿ ಪಡೆದಿದೆ. ಸಸ್ಯಾಹಾರಿಯಾಗಿದ್ದ ಗ್ರಾಹಕನಿಗೆ ಮಾಂಸಾಹಾರಿ ಬಿರಿಯಾನಿ ಬಡಿಸಿದ ಆರೋಪದ ಹಿನ್ನೆಲೆಯಲ್ಲಿ 47 ವರ್ಷ ಪ್ರಾಯದ ಹೋಟೆಲ್​ ಮಾಲೀಕನನ್ನು ಗುಂಡಿಕ್ಕಿ ಕೊಂದ ಘಟನೆಯು ರಾಂಚಿಯಲ್ಲಿ ಸಂಭವಿಸಿದೆ.

ಕಾಂಕೆ – ಪಿಥೋರಿಯಾ ರಸ್ತೆಯಲ್ಲಿರುವ ಹೋಟೆಲ್​​ನಿಂದ ಶನಿವಾರ ರಾತ್ರಿ 11:30ರ ಸುಮಾರಿಗೆ ಗ್ರಾಹಕರೊಬ್ಬರು ಸಸ್ಯಾಹಾರಿ ಬಿರಿಯಾನಿ ಆರ್ಡರ್​ ಮಾಡಿದ್ದರು. ಹೋಟೆಲ್​ನಿಂದ ಬಿರಿಯಾನಿ ಪಡೆದು ಹೋಟೆಲ್​ನಿಂದ ತೆರಳಿದ್ದರು.

ಇದಾಗಿ ಸ್ವಲ್ಪ ಸಮಯದ ಬಳಿಕ ಪುನಃ ಹೋಟೆಲ್​ಗೆ ಆಗಮಿಸಿದ ಗ್ರಾಹಕ ತನಗೆ ನೀವು ಮಾಂಸಾಹಾರಿ ಬಿರಿಯಾನಿ ನೀಡಿದ್ದೀರಾ ಎಂದು ಗಲಾಟೆ ಶುರು ಮಾಡಿದ್ದಾರೆ. ಮೃತ ರೆಸ್ಟಾರೆಂಟ್​ ಮಾಲೀಕ ವಿಜಯ್​ ಕುಮಾರ್ ನಾಗ ಎಂಬವರು ಈ ಸಂದರ್ಭದಲ್ಲಿ ಹೋಟೆಲ್​ನ ಟೇಬಲ್​ ಒಂದರಲ್ಲಿ ಕುಳಿತು ಊಟ ಮಾಡುತ್ತಿದ್ದರು ಎನ್ನಲಾಗಿದೆ.

Also Read : ಕೇವಲ ಹಣ್ಣು ಮಾತ್ರ ತಿಂದು ಬದುಕುತ್ತೇನೆಂದು ಹೊರಟಿದ್ದ ಯುವತಿ 27ರ ಹರೆಯದಲ್ಲೇ ಸಾವು

ಏಕಾ ಏಕಿ ಇವರ ಎದೆಯನ್ನು ಬಂದೂಕಿನ ಗುಂಡು ಸೀಳಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯ್ತಾದರೂ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ರೆಸ್ಟೋರೆಂಟ್ ಮಾಲೀಕ ಕಾಂಕೆ ಪೊಲೀಸ್ ಠಾಣೆ ವ್ಯಾಪ್ತಿಯ ಭಿತ್ತ ನಿವಾಸಿಯಾಗಿದ್ದರು.

ಭಾನುವಾರದಂದು ಈ ಕೊಲೆ ನಡೆದಿದ್ದು ಮೃತದೇಹವನ್ನು ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದು ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಆರೋಪಿ ತಲೆಮರೆಸಿಕೊಂಡಿದ್ದು ಆತನನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ಅದೇನೆ ಇರಲಿ, ಕೇವಲ ಒಂದು ಬಿರಿಯಾನಿಗಾಗಿ ವ್ಯಕ್ತಿಯ ಪ್ರಾಣಪಕ್ಷಿಯೇ ಹಾರಿ ಹೋಗುವಂತಾಗಿದ್ದು ದುರಂತವೇ ಸರಿ.

Also Read : ಆಭರಣ ಮಳಿಗೆಯಲ್ಲಿ ಮಹಿಳೆಯ ಜಟಾಪಟಿ : ಗಾಜು ಒಡೆದು ರೋಷಾವೇಶ, ಪೋಲೀಸರ ಮೇಲೆ ಹಲ್ಲೆ ವಿಡಿಯೋ ವೈರಲ್‌

Veg biryani murder : Hotel owner murdered for serving non-vegetarian biryani instead of veg biryani in Kannada News

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories