ಆಭರಣ ಮಳಿಗೆಯಲ್ಲಿ ಮಹಿಳೆಯ ಜಟಾಪಟಿ : ಗಾಜು ಒಡೆದು ರೋಷಾವೇಶ, ಪೊಲೀಸರ ಮೇಲೂ ಹಲ್ಲೆ, ವಿಡಿಯೋ ವೈರಲ್
Viral News: ಮಹಿಳೆಯರು ಆಭರಣ ಪ್ರಿಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ಆಭರಣ ಅಂಗಡಿಗೆ ತೆರಳಿ ತನ್ನಿಷ್ಟದ ಆಭರಣ ಕೊಳ್ಳುವ ಬದಲು ಆಭರಣ ಅಂಗಡಿಯ ಗಾಜುಗಳನ್ನು ಪುಡಿ ಮಾಡಿದ್ದು ಮಾತ್ರವಲ್ಲದೇ ಪೊಲೀಸ್ ಸಿಬ್ಬಂದಿಯ ಕೈಯನ್ನೇ ಕಚ್ಚಿ ಆಕ್ರೋಶ ಹೊರಹಾಕಿದ ವಿಚಿತ್ರ ಘಟನೆಯೊಂದು ಸಂಭವಿಸಿದೆ. ಇಂದೋರ್ನ ಆಭರಣ ಅಂಗಡಿಯೊಂದರಲ್ಲಿ ಈ ಘಟನೆ ಸಂಭವಿಸಿದೆ.
ಸರಫಾ ಮಾರುಕಟ್ಟೆಯಲ್ಲಿ ಉದ್ಯಮಿ ಸುಮಿತ್ ಜೈನ್ ಎಂಬವರು ಕಳೆದ ಅನೇಕ ವರ್ಷಗಳಿಂದ ಆಭರಣದ ಅಂಗಡಿಯನ್ನು ಹೊಂದಿದ್ದರು. ಈ ಅಂಗಡಿಯ ದೀರ್ಘಕಾಲದ ಗ್ರಾಹಕಿಯಾಗಿದ್ದ ಮಹಿಳೆಯು ಅಂಗಡಿಗೆ ಬಂದು ಕೇವಲ ಐದು ಸಾವಿರ ರೂಪಾಯಿಗಳ ಹಣಕಾಸಿನ ವ್ಯವಹಾರ ಸಂಬಂಧ ರಾದ್ಧಾಂತ ಎಸಗಿದ್ದಾಳೆ ಎನ್ನಲಾಗಿದೆ. ಹಣಕಾಸಿನ ವ್ಯವಹಾರ ಸಂಬಂಧ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಕೈ ಮೀರಿದೆ ಎಂದು ತಿಳಿದುಬಂದಿದೆ.
ಆಭರಣ ಮಳಿಗೆಯಲ್ಲಿ ಬೇರೆ ಗ್ರಾಹಕರು ಇದ್ದ ಸಂದರ್ಭದಲ್ಲಿಯೇ ಆಗಮಿಸಿದ ಗ್ರಾಹಕಿ ಅಂಗಡಿ ಮಾಲೀಕರೊಂದಿಗೆ ವಾದಕ್ಕೆ ಇಳಿದಿದ್ದಳು ಎನ್ನಲಾಗಿದೆ. ಆದರೆ ಕೋಪ ನಿಯಂತ್ರಣ ತಪ್ಪಿದ ಪರಿಣಾಮ ತನ್ನ ಕೈನಿಂದ ಅಂಗಡಿಯ ಗಾಜಿನ ಡಿಸ್ಪ್ಲೇ ಕುಟ್ಟಿ ಪುಡಿ ಮಾಡಿದ್ದಾಳೆ. ಇದನ್ನು ನೋಡಿ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ.
Also Read: ಕೇವಲ ಹಣ್ಣು ಮಾತ್ರ ತಿಂದು ಬದುಕುತ್ತೇನೆಂದು ಹೊರಟಿದ್ದ ಯುವತಿ 27ರ ಹರೆಯದಲ್ಲೇ ಸಾವು
ಪ್ರೇಕ್ಷಕರು ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಂತೆ, ಕೀರ್ತಿ ತನ್ನ ಆಕ್ರೋಶವನ್ನು ಮುಂದುವರೆಸಿದಳು, ಸಿಬ್ಬಂದಿಯ ಮೇಲೆ ಕೂಗಾಡುತ್ತಾ ವ್ಯವಹಾರಕ್ಕೆ ಅಡ್ಡಿಪಡಿಸಿದಳು ಎಂದು ವರದಿಯಾಗಿದೆ.
ಕೂಡಲೇ ಸರಾಫಾ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮಹಿಳಾ ಕಾನ್ಸ್ಟೇಬಲ್ ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನದಲ್ಲಿ ಮಧ್ಯಪ್ರವೇಶಿಸಿದ ಸಂದರ್ಭದಲ್ಲಿಯೇ ಕೋಪದಲ್ಲಿದ್ದ ಮಹಿಳೆ ಕಾನ್ಸ್ಟೇಬಲ್ ಕೈಯನ್ನೇ ಕಚ್ಚಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹರಸಾಹಸ ಪಟ್ಟು ಪರಿಸ್ಥಿತಿ ನಿಯಂತ್ರಣಕ್ಕೆ ತಂದ ಪೊಲೀಸರು ಆರೋಪಿ ಮಹಿಳೆ ಕೀರ್ತಿಯನ್ನುಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಆಕೆಯನ್ನು ಪೊಲೀಸ್(Police) ಠಾಣೆಗೆ ಕರೆದೊಯ್ದಿದ್ದಾರೆ.
Also Read: Delhi Viral News: 40 ಲಕ್ಷ ರೂಪಾಯಿ ಮೌಲ್ಯದ ದೇಗುಲದ ಕಳಶ ಕದ್ದ ಕಿರಾತಕ : ಕಳ್ಳತನದ ವಿಡಿಯೋ ವೈರಲ್
ಆರೋಪಿ ಮಹಿಳೆ ಕೀರ್ತಿ ವಿರುದ್ಧ ಹಲ್ಲೆ, ವಿಧ್ವಂಸಕ ಕೃತ್ಯ , ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವುದು ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಸರಾಫಾ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.



