TISS ನಲ್ಲಿ ಪ್ರೋಗ್ರಾಮ್ ಕೋರ್ಡಿನೇಟರ್, ಡೇಟಾ ಅನಾಲಿಸ್ಟ್ ಸೇರಿ 4 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆ ದಿನ!
TISS Recruitment 2025: ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS) ಪ್ರೋಗ್ರಾಮ್ ಕೋರ್ಡಿನೇಟರ್, ಡೇಟಾ ಅನಾಲಿಸ್ಟ್, ಫೀಲ್ಡ್ ಇನ್ವೆಸ್ಟಿಗೇಟರ್, ಅಕೌಂಟೆಂಟ್ ಹಾಗೂ ರಿಸರ್ಚ್ ಆಫೀಸರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ.
ಖಾಲಿ ಇರುವ ಒಟ್ಟು 42 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 22 ಕೊನೆಯ ದಿನವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೂಕ್ತ ಮಾಹಿತಿಗಳೊಂದಿಗೆ TISS ಗೆ ಅರ್ಜಿ ಸಲ್ಲಿಸಬಹುದು.
ಎಲ್ಲಾ ಅಭ್ಯರ್ಥಿಗಳು ಈ ಕೊನೆಯ ಅವಕಾಶದ ಉಪಯೋಗ ಪಡೆದುಕೊಂಡು, ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಗಮನಿಸಬೇಕಾದ ಮಾನದಂಡಗಳೇನು ಎಂದು ತಿಳಿಯೋಣ.
ಹುದ್ದೆಗಳ ವಿವರ
ಪ್ರೋಗ್ರಾಮ್ ಕೋರ್ಡಿನೇಟರ್ – 10 ಹುದ್ದೆಗಳು
ಡೇಟಾ ಅನಾಲಿಸ್ಟ್ – 1 ಹುದ್ದೆ
ಫೀಲ್ಡ್ ಇನ್ವೆಸ್ಟಿಗೇಟರ್ – 29 ಹುದ್ದೆಗಳು
ಅಕೌಂಟೆಂಟ್ – 1 ಹುದ್ದೆ
ರಿಸರ್ಚ್ ಆಫೀಸರ್ – 1 ಹುದ್ದೆ
ವೇತನ ಎಷ್ಟು?
ಅಭ್ಯರ್ಥಿಗಳಿಗೆ ಅವರ ಹುದ್ದೆಗೆ ಅನುಗುಣವಾಗಿ ವೇತನ ನೀಡಲಾಗುತ್ತದೆ.
ಪ್ರೋಗ್ರಾಮ್ ಕೋರ್ಡಿನೇಟರ್ – 65,000 ರೂ.
ಡೇಟಾ ಅನಾಲಿಸ್ಟ್ – 60,000 ರೂ.
ಫೀಲ್ಡ್ ಇನ್ವೆಸ್ಟಿಗೇಟರ್ – 35,000 ರೂ.
ಅಕೌಂಟೆಂಟ್ – 45,000 ರೂ.
ರಿಸರ್ಚ್ ಆಫೀಸರ್ – 45,000 ರೂ.
ಇದನ್ನೂ ಓದಿ: ಡಿಪ್ಲೊಮಾ, ಐಟಿಐ ಮಾಡಿದವರಿಗೆ ಗುಡ್ ನ್ಯೂಸ್! BEL ನಿಂದ 162 ಹುದ್ದೆಗಳಿಗೆ ಅರ್ಜಿ ಆಹ್ವಾನ
ಶೈಕ್ಷಣಿಕ ಅರ್ಹತೆ
ಪ್ರೋಗ್ರಾಮ್ ಕೋರ್ಡಿನೇಟರ್ ಹುದ್ದೆಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಆರೋಗ್ಯ ವಿಜ್ಞಾನ, ಆಸ್ಪತ್ರೆ ಆಡಳಿತ ಇತ್ಯಾದಿಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಇಂಗ್ಲಿಷ್ ನಲ್ಲಿ ಉತ್ತಮವಾಗಿ ಮಾತನಾಡುವ ಮತ್ತು ಬರೆಯುವ ಕೌಶಲ್ಯವನ್ನು ಹೊಂದಿರಬೇಕು.
ಡೇಟಾ ಅನಾಲಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಅಂಕಿಅಂಶಗಳು, ಭೂಗೋಳ, ಡೇಟಾ ವಿಜ್ಞಾನ ಮುಂತಾದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.
ಫೀಲ್ಡ್ ಇನ್ವೆಸ್ಟಿಗೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ಅಕೌಂಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ವಾಣಿಜ್ಯ, ಅಕೌಂಟೆನ್ಸಿ ಅಥವಾ ಅಲೈಡ್ ಸೈನ್ಸ್ನಲ್ಲಿ ಪದವಿ ಪಡೆದಿರಬೇಕು .
ರಿಸರ್ಚ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು, ಅಂಕಿಅಂಶಗಳು, ಭೂಗೋಳ ಅಥವಾ ಡೇಟಾ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
ಅರ್ಜಿ ಪ್ರಕ್ರಿಯೆ ಹೇಗೆ?
ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ತಮ್ಮ ರೆಸ್ಯೂಮ್ಗಳನ್ನು ಇಮೇಲ್ ಮಾಡಬೇಕಾಗಿದೆ. ಇಮೇಲ್ ಮಾಡುವಾಗ ವಿಷಯದ ಸಾಲಿನಲ್ಲಿ ಹುದ್ದೆಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಿ ಇಮೇಲ್ ವಿಳಾಸ imsphc.uk@gmail.com ಗೆ ಕಳುಹಿಸಬೇಕು. ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
ಇದನ್ನೂ ಓದಿ: ಕ್ರೀಡಾಪಟುಗಳಿಗೆ ಶುಭ ಸುದ್ದಿ! ಬಿಎಸ್ಎಫ್ನಲ್ಲಿ ಕಾನ್ಸ್ಟೇಬಲ್ನ ಜನರಲ್ ಡ್ಯೂಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ
(TISS Recruitment 2025 tomorrow is the last date to apply for program coordinator data analysist account research office job)



