ಚಂದನವನ ನಿರ್ಮಾಪಕ ಕೆ.ಗೋವಿಂದ್ ವಿಧಿವಶ
K. Govind: ಚಂದನವನದ ಖ್ಯಾತ ನಿರ್ಮಾಪಕ ಕೆ.ಗೋವಿಂದ್ ಇಂದು ನಿಧನರಾಗಿದ್ದಾರೆ. ಗಂಟಲು ಕ್ಯಾನ್ಸರ್ನಿಂದ ಬಳಲುತ್ತಿದ್ದ ನಿರ್ಮಾಪಕ ಕೆ. ಗೋವಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಚಂದನವನಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದ ಕೆ.ಗೋವಿಂದ ಅವರು ಹುಲಿಯಾ, ಚಲಿಸುವ ಮೋಡಗಳು ಸೇರಿದಂತೆ ಹಲವು ಸಿನಿಮಾಗಳಿಗೆ ಬಂಡವಾಳ ಹೂಡಿದ್ದರು.
ಕೆ.ಗೋವಿಂದ ಅವರ ಪಾರ್ಥಿವ ಶರೀರವನ್ನು ಕೆಲ ಕಾಲ ಸಾರ್ವಜನಿಕರ ದರ್ಶನಕ್ಕೆ ಇರಿಸಿ ಬಳಿಕ ಬನಶಂಕರಿ ಚಿತಾಗಾರದಲ್ಲಿ ಅಂತಿಮ ವಿಧಿ ವಿಧಾನ ನಡೆಸುವ ಬಗ್ಗೆ ಕೆ.ಗೋವಿಂದ ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ
Also Read: Suhana Syed wedding: ಮಂತ್ರ ಮಾಂಗಲ್ಯದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟ, ಸರಿಗಮಪ ಖ್ಯಾತಿಯ ಸುಹಾನಾ ಸೈಯದ್



