ಸಾರಾ ತೆಂಡೂಲ್ಕರ್ ಇನ್ ಸ್ಟಾಗ್ರಾಂ ನಲ್ಲಿ ಗಳಿಸಿದ್ದೇಷ್ಟು ? ಇದು ತೆಂಡೂಲ್ಕರ್ ಪುತ್ರಿಯ ಸಾಧನೆ

Sara Tendulkar Instagram earn : ಸೋಷಿಯಲ್ ಮೀಡಿಯಾ ಇವತ್ತು ಪವರ್ ಫುಲ್ ಮಾಧ್ಯಮ. ಊರಿಗೆ ಬಂದೋರು ನೀರಿಗೆ ಬರಲ್ವಾ ಅನ್ನೋ ಹಾಗೇ ಜಗತ್ತಿನಲ್ಲಿ ಇರೋರೆಲ್ಲ ಬಹುತೇಕ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕೇ ಸಿಗ್ತಾರೆ.

ಹೀಗೆ ಸೋಷಿಯಲ್ ಮೀಡಿಯಾಗೆ ಬಂದೋರೆಲ್ಲ ಸುಮ್ನೇ ಸ್ಕ್ರೋಲ್ ಮಾಡಿ ಟೈಂ ವೇಸ್ಟ್ ಮಾಡ್ತಾರೆ ಅಂತ ನೀವಂದುಕೊಂಡಿದ್ರೇ ಅದು ನಿಮ್ಮ ತಪ್ಪು ಕಲ್ಪನೆ. ಸೋಷಿಯಲ್ ಮೀಡಿಯಾದಲ್ಲೇ ಲಕ್ಷ ಲಕ್ಷ ದುಡಿತಿದ್ದಾರೆ ಹೈಕಳು.
ಇದಕ್ಕೆ ಹೊಸ ಉದಾಹರಣೆ ನಮ್ಮ ಕ್ರಿಕೆಟ್ ದೇವರು ಎನ್ನಿಸಿಕೊಂಡಿರೋ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್. ನೋಡೋಕೆ ಬಿಳಿ ಮಲ್ಲಿಗೆ ಹೂವಿನಂತಿರೋ ಸಾರಾ ತೆಂಡೂಲ್ಕರ್ ಯಾವ ಬಾಲಿವುಡ್ ಹಿರೋಯಿನ್ ಕಡಿಮೆ ಇಲ್ಲದಂತ ಸುಂದರಿ.
ಮನಸ್ಸು ಮಾಡಿದ್ರೇ ಬಾಲಿವುಡ್ ಬೆಳ್ಳಿತೆರೆಯನ್ನೇ ಆಳಬಹುದಾಗಿದ್ದ ಸಾರಾ ತೆಂಡೂಲ್ಕರ್ ಅತ್ತ ಕಡೆ ಮುಖಮಾಡಲಿಲ್ಲ ಅನ್ನೋದು ಈಗ ಹಳೆ ವಿಚಾರ. ಇಂತಿಪ್ಪ ಸಾರಾ ತೆಂಡೂಲ್ಕರ್ ಈಗ ಸೋಷಿಯಲ್ ಮೀಡಿಯಾದ ಮೂಲಕ ಸುದ್ದಿಯಲ್ಲಿದ್ದಾರೆ.

ಸಾರಾ ತೆಂಡೂಲ್ಕರ್ ಇನ್ ಸ್ಟಾಗ್ರಾಂನಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಸದಾ ಬ್ರಾಡಿಂಗ್ ಹಾಗೂ ಜಾಹೀರಾತುಗಳಲ್ಲಿ ಆಕ್ಟಿವ್ ಆಗಿರೋ ಸಾರಾ ಬೋಲ್ಡ್ ಪೋಟೋಶೂಟ್ ಗಳಿಗೂ ಸೈ ಅಂತಾರೆ.
ಸದ್ಯ ಸಾರಾ ತೆಂಡೂಲ್ಕರ್ ತಮ್ಮ ಸೋಷಿಯಲ್ ಮೀಡಿಯಾ ಅದರಲ್ಲೂ ಇನ್ ಸ್ಟಾಗ್ರಾಂ ನಲ್ಲಿ ಬರೋಬ್ಬರಿ 8.7 ದಶಲಕ್ಷ ಪಾಲೋವರ್ಸ್ ಹೊಂದಿದ್ದಾರೆ.
ಇದರಿಂದಾಗಿ ಸಾರಾ ತಮ್ಮ ಪ್ರತಿ ಪೇಯ್ಡ್ ಪೋಸ್ಟ್ ಗೆ ಬರೋಬ್ಬರಿ 25 ರಿಂದ 30 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾರಂತೆ. ಇದು ದೇಶದ ಗರಿಷ್ಠ ಸೋಷಿಯಲ್ ಮೀಡಿಯಾ ಗಳಿಕೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
28 ವರ್ಷದ ಸಾರಾ ತೆಂಡೂಲ್ಕರ್ ಫ್ಯಾಶನ್,ಲೈಫ್ ಸ್ಟೈಲ್ ಹಾಗೂ ಜಾಹೀರಾತು ಲೋಕದ ಐಕಾನ್ ಎನ್ನಿಸಿದ್ದು, ಪ್ರತಿಷ್ಠಿತ ಬ್ರ್ಯಾಂಡ್ ಗಳು ಸಾರಾರನ್ನು ತಮ್ಮ ಮಾಡೆಲ್ ಮಾಡಿಕೊಳ್ಳಲು ಕ್ಯೂ ನಿಂತಿವೆ.
ಲಂಡನ್ ನ ಯೂನಿವರ್ಸಿಟಿ ಕಾಲೇಜ್ ನಿಂದ ಕ್ಲಿನಿಕಲ್ ಆಂಡ್ ಪಬ್ಲಿಕ್ ಹೆಲ್ತ್ ನ್ಯೂಟ್ರಿಸಿಯನ್ ( Clinical and Public health nutrition) ನಲ್ಲಿ ಮಾಸ್ಟರ್ ಡಿಗ್ರಿ ಪಡೆದಿರುವ ಸಾರಾ ತಂದೆಯ ಟ್ರಸ್ಟ್ ಡೈರೈಕ್ಟರ್ ಆಗಿ ಮುನ್ನಡೆಸುತ್ತಿದ್ದಾರೆ.

ಮಾತ್ರವಲ್ಲ ಸಚಿನ್ ಮಕ್ಕಳ ವಿದ್ಯಾಭ್ಯಾಸ ಹಾಗೂ ಮಾರ್ಗದರ್ಶನಕ್ಕಾಗಿ ಸ್ಥಾಪಿಸಿರುವ ಸಂಸ್ಥೆಯಲ್ಲಿ ನ್ಯೂಟ್ರಿಸಿಯನ್ ಅಸೋಸಿಯೇಟ್ ಕೂಡ ಆಗಿದ್ದಾರೆ. ತಂದೆಯ ಪಬ್ಲಿಸಿಟಿಯನ್ನು ತಲೆಗೇರಿಸಿಕೊಳ್ಳದ ಸಾರಾ ತೆಂಡೂಲ್ಕರ್ ತಮ್ಮ ಸೌಂದರ್ಯ, ಬುದ್ಧಿವಂತಿಕೆ ಹಾಗೂ ಪ್ರಬುದ್ಧತೆಯಿಂದಲೇ ಗುರುತಿಸಿಕೊಂಡಿದ್ದಾರೆ.
ಸಾರಾ ಜಗತ್ತಿನ ಪ್ರತಿಷ್ಠಿತ ಬ್ರ್ಯಾಂಡ್ ಗಳಾದ Ajio luxe ಜೊತೆ ಅಂಬಾಸಿಡರ್ ಆಗಿ ಗುರುತಿಸಿಕೊಂಡಿದ್ದಾರೆ.ಮಾತ್ರವಲ್ಲ 2021 ರಿಂದ ಸಾರಾ ಮಾಡೆಲಿಂಗ್ ಲೋಕಕ್ಕೂ ಎಂಟ್ರಿ ನೀಡಿದ್ದಾರೆ. ಕೊರಿಯನ್ ಬ್ಯೂಟಿ ಬ್ರ್ಯಾಂಡ್ ಗಳಿಗೂ ಮಾಡೆಲ್ ಆಗಿರೋ ಸಾರಾ ಸಖತ್ ಮಿಂಚುತಿದ್ದಾರೆ.
ಒಂದು ಸಾವಿರ ಕೋಟಿ ಬೆಲೆ ಬಾಳುವ ಆಸ್ಟ್ರೇಲಿಯನ್ ಟೂರಿಸಂ ಕ್ಯಾಂಪೇನ್ come and say G,Day ಎಂಬ ಗ್ಲೋಬಲ್ ಪ್ರಾಜೆಕ್ಟ್ ಗೂ ಸಾರಾ ರಾಯಭಾರಿಯಾಗಿದ್ದಾರೆ.
ಸದ್ಯ ನ್ಯಾಷನಲ್ ಮೀಡಿಯಾದಲ್ಲಿ ಸಾರಾ ಸಾಧನೆಗಳ ಚರ್ಚೆ ಆರಂಭವಾಗಿದ್ದು ಮುಂದಿನ ದಿನದಲ್ಲಿ ಸಾರಾ ಬಾಲಿವುಡ್ ಸ್ಟಾರ್ ಗಳನ್ನು ಪಕ್ಕಕ್ಕೆ ಸರಿಸಿ ಸ್ಕ್ರಿನ್ ಆವರಿಸಿಕೊಂಡರೂ ಅಚ್ಚರಿಯೇನಿಲ್ಲ.
Sara Tendulkar Instagram earn : Sara earn on Instagram This is the achievement of Tendulkars daughter



