ಅನ್ನದಾತರಿಗೆ ಇಲ್ಲಿದೆ ಗುಡ್​ ನ್ಯೂಸ್​ : ಶೀಘ್ರದಲ್ಲೇ ನಿಮ್ಮ ಖಾತೆಗೆ ಬರಲಿದೆ ₹2000

Scheme: ಕೇಂದ್ರ ಸರ್ಕಾರವು ದೇಶದ ರೈತರಿಗೆ ವಾರ್ಷಿಕವಾಗಿ 6000 ರೂಪಾಯಿಗಳನ್ನು ನೀಡುವ ಮಹತ್ವದ ಯೋಜನೆಯನ್ನು ಕಳೆದ ಕೆಲ ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಮೂರು ಸಮಾನ ಕಂತುಗಳಲ್ಲಿ ತಲಾ 2000 ರೂಪಾಯಿಯನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಯೋಜನೆಯನ್ನು ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ ಯೋಜನೆ ಎಂದು ಕರೆಯಲಾಗುತ್ತದೆ.

ಈ ಯೋಜನೆಯ 21ನೇ ಕಂತಿಗಾಗಿ ಕಾಯುತ್ತಿರುವ ರೈತರಿಗೆ ಶುಭ ಸುದ್ದಿ ಕಾದಿದೆ. ದೀಪಾವಳಿಯಂದು 2000 ರೂಪಾಯಿ ಖಾತೆಗೆ ಜಮೆ ಆಗಬಹುದು ಎಂದು ರೈತರು ನಿರೀಕ್ಷಿಸಿದ್ದರು. ಆದರೆ ಅದು ಆಗಿರಲಿಲ್ಲ. ಈ ಯೋಜನೆ 2019 ರಿಂದ ಚಾಲನೆಯಲ್ಲಿದೆ ಮತ್ತು ಲಕ್ಷಾಂತರ ರೈತರ ಖಾತೆಗಳಿಗೆ ಹಣವನ್ನು ಈಗಾಗಲೇ ಜಮಾ ಮಾಡಲಾಗಿದೆ.

ಯಾವಾಗ ಬರಲಿದೆ ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆಯ 21ನೇ ಕಂತು ?

ಕೇಂದ್ರ ಸರ್ಕಾರವು 21ನೇ ಕಂತಿನ ಪಾವತಿ ದಿನಾಂಕವನ್ನು ಈವರೆಗೆ ಘೋಷಣೆ ಮಾಡಿಲ್ಲ. ಆದರೆ ಫೈನಾನ್ಶಿಯಲ್​ ಎಕ್ಸ್​ಪ್ರೆಸ್​ ನೀಡಿರುವ ವರದಿಯ ಪ್ರಕಾರ ರೈತರ ಖಾತೆಗೆ ಪ್ರಧಾನ್​ ಮಂತ್ರಿ ಕಿಸಾನ್​ ಸಮ್ಮಾನ್​ ನಿಧಿಯ 21ನೇ ಕಂತು ನವೆಂಬರ್​ ತಿಂಗಳ ಮೊದಲನೇ ವಾರದಲ್ಲಿ ಜಮೆ ಆಗಲಿದೆ ಎನ್ನಲಾಗಿದೆ.

21ನೇ ಕಂತು ಜಮೆಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ರೈತರ ನೋಂದಣಿ ರದ್ದುಗೊಂಡಿರುವ ಸಾಧ್ಯತೆ ಕೂಡ ಇರುತ್ತದೆ. ಆದ್ದರಿಂದ ರೈತರು ಕಿಸಾನ್​ ಸಮ್ಮಾನ್​ ಯೋಜನೆಯಲ್ಲಿ ತಮ್ಮ ಹೆಸರು ಇದೆಯೇ ಅಥವಾ ಅಳಿಸಿ ಹೋಗಿದೆಯೇ ಎಂಬುದನ್ನು ತ್ವರಿತವಾಗಿ ಪರಿಶೀಲಿಸಿಕೊಳ್ಳಬೇಕು ಎಂದು ಕೇಂದ್ರ ಕೃಷಿ ಸಚಿವಾಲಯ ಎಚ್ಚರಿಕೆ ನೀಡಿದೆ.

ನೇರ ಲಾಭ ವರ್ಗಾವಣೆಯ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗುತ್ತದೆ ಮತ್ತು ಇದಕ್ಕಾಗಿ ಆಧಾರ್ ಲಿಂಕ್ ಮಾಡುವ ಅಗತ್ಯವಿದೆ.

Also Read: ರೇಷನ್‌ ಕಾರ್ಡ್‌- ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವುದು ಹೇಗೆ ?

21ನೇ ಕಂತು ಯಾವ ರೈತರಿಗೆಲ್ಲ ಸಿಗುವುದಿಲ್ಲ ?

ಈ ಯೋಜನೆಗೆ ಸ್ಪಷ್ಟವಾದ ನಿಯಮಗಳನ್ನು ನೀಡಲಾಗಿದೆ. ಈ ಹಣವು ಈ ಹಣವು 2 ಹೆಕ್ಟೇರ್‌ವರೆಗೆ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ. ನೀವು ಅದಕ್ಕಿಂತ ಹೆಚ್ಚಿನ ಭೂಮಿಯನ್ನು ಹೊಂದಿದ್ದರೆ, ನೀವು ಈ ಯೋಜನೆಗೆ ಅರ್ಹರಲ್ಲ.

ಇದನ್ನು ಹೊರತುಪಡಿಸಿ ನೀವು ಹಾಗೂ ನಿಮ್ಮ ಕುಟುಂಬ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗದಲ್ಲಿದ್ದರೆ ಆಗ ಕೂಡ ನಿಮಗೆ ಸರ್ಕಾರದಿಂದ ಹಣ ಪಾವತಿ ಆಗುವುದಿಲ್ಲ. ಇದರ ಜೊತೆಯಲ್ಲಿ ಈಗಾಲೇ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಸರ್ಕಾರಿ ನೌಕರರನ್ನೂ ಈ ಯೋಜನೆಯಿಂದ ಹೊರಗಿಡಲಾಗಿದೆ.

ಖಾಸಗಿಯಾಗಿ ಅಭ್ಯಾಸ ಮಾಡುವ ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಅಥವಾ ವಾಸ್ತುಶಿಲ್ಪಿಗಳಂತಹ ವೃತ್ತಿಪರರ ಕುಟುಂಬಗಳಿಗೂ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

ತೆರಿಗೆ ಪಾವತಿಗೆ ಅರ್ಹರಾಗಿರುವ ವ್ಯಾಪಾರಿಗಳು ಹಾಗೂ ಉದ್ಯಮಿಗಳನ್ನೂ ಸಹ ಈ ಪಟ್ಟಿಯಿಂದ ಹೊರಗಿಡಲಾಗಿದೆ. ನಿಮ್ಮ ಹೆಸರಿನಲ್ಲಿ ಯಾವುದೇ ಸಂಸ್ಥೆ ಅಥವಾ ಸೊಸೈಟಿಗಳಿದ್ದರೆ ನಿಮಗೆ ಪಿಎಂ ಕಿಸಾನ್​ ಯೋಜನೆಯ ಹಣ ಪಾವತಿಯಾಗುವುದಿಲ್ಲ.

Also Read: ಅಮೆಜಾನ್‌, ಫ್ಲಿಪ್‌ಕಾರ್ಟ್‌ನಲ್ಲಿ ವರ್ಷದ ಅತಿದೊಡ್ಡ ಹಬ್ಬದ ಮಾರಾಟ ಪ್ರಾರಂಭ

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories