ಬಿಗ್ ಬಾಸ್ ಜಾನ್ವಿ-ಅಶ್ವಿನಿ ಗೌಡ ಗೆಳೆತನಕ್ಕೆ ಬ್ರೇಕ್! ದೊಡ್ಡವ್ವ-ಚಿಕ್ಕವ್ವ ದೂರ ಆದ್ರಾ?
ಸದ್ಯ ಸುದ್ದಿಯಲ್ಲಿರೋ ವಿಚಾರ ಅಂದ್ರೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಬಿಸ್ ಬಾಸ್ ರಿಯಾಲಿಟಿ ಶೋ. ಬಿಗ್ ಬಾಸ್ ಸೀಸನ್ 12 ಶುರುವಾಗಿ ಒಂದು ತಿಂಗಳಾಯ್ತು. 11 ಸೀಸನ್ ಬೇರೆ, ಈ 12ನೇ ಸೀಸನ್ ಬೇರೆ. ಎಲ್ಲವೂ ವಿಭಿನ್ನವಾಗಿದೆ. ಈಗಾಗಲೇ ಒಂದು ಫಿನಾಲೆ ಮುಗಿದಿದೆ. ಬಂದಾಗಿನಿಂದ ಅಶ್ವಿನಿ ಗೌಡ ಸದಾ ಒಂದಲ್ಲ ಒಂದು ಕಿರಿಕ್ ಮಾಡಿಕೊಂಡು ಸುದ್ದಿಯಲ್ಲಿ ಇರ್ತಾರೆ. ಕಳೆದ ಒಂದು ವಾರದ ಹಿಂದೆ ತಮ್ಮ ಸಹ ಸ್ಪರ್ಧಿ ರಕ್ಷಿತಾ ಅವರಿಗೆ ಅವಮಾನ ಮಾಡಿ, ರಾಜ್ಯದ ಜನರ ಮುಂದೆ ಚಿಕ್ಕವರಾಗಿದ್ರು. ಕಿಚ್ಚ ಸುದೀಪ್ ಪಂಚಾಯಿತಿ ಮಾಡಿ ಹೋದ ಮೇಲೆ ಕ್ಷಮೆ ಕೇಳಿ ಸರಿ ಹೋದ್ರು. ಈಗ ಸದಾ ಜೊತೆಯಲ್ಲೇ ಇರುತ್ತಿದ್ದ ಜಾನ್ವಿ ಮತ್ತು ಅಶ್ವಿನಿ ಗೌಡ ಮಧ್ಯೆ ಮನಸ್ತಾಪ ಉಂಟಾಗಿದೆ. ಜೋಡೆತ್ತಿನ ರೀತಿ ಇದ್ದ ಇಬ್ಬರ ಸ್ನೇಹ ಬ್ರೇಕ್ ಆಗಿದೆ.
ಮೊದಲಿನಿಂದಲೂ ಬೆಸ್ಟ್ ಫ್ರೆಂಡ್ಸ್
ಅಶ್ವಿನಿ-ಗೌಡ ಮತ್ತು ಜಾನ್ವಿ ಅವರು ಬಿಗ್ ಬಾಸ್ ಶೋ ಶುರುವಾದಾಗಿನಿಂದ ಜೊತೆಗೆ ಇದ್ದಾರೆ. ಇಬ್ಬರು ಒಂಟಿಯಾಗಿ ಮನೆಯೊಳಗೆ ಪ್ರವೇಶ ಮಾಡಿದ್ರೂ ಜಂಟಿ ಅನ್ನೋ ರೀತಿ ಇದ್ರು. ಜಾನ್ವಿ ಸಹ ಅಶ್ವಿನಿ ಗೌಡ ಏನೇ ಹೇಳಿದ್ರು ಮಾಡ್ತಾರೆ ಅನ್ನೋ ತರ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಮನೆಯವರು ಜಾನ್ವಿ ಅವರಿಗೆ ಅಶ್ವಿನಿ ಗೌಡ ಅವರ ಬಕೆಟ್ ನೀವು ಅಂತ ಹೇಳಿದ್ದು ಇದೆ.
ಸುದ್ದಿ ಮಾಡಿದ್ದ ಗೆಜ್ಜೆ ಸದ್ದು
ಇನ್ನು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸುದ್ದಿ ಮಾಡಿದ್ದು ಗೆಜ್ಜೆ ಸದ್ದು. ಅದಕ್ಕೂ ಕಾರಣ ಜಾನ್ವಿ ಮತ್ತು ಅಶ್ವಿನಿ ಅವರು. ಇಬ್ಬರು ಸೇರಿ ಮನೆಯವರಿಗೆ ರೇಗಿಸೋಣ ಅಂತ ಗೆಜ್ಜೆ ಸೌಂಡ್ ಮಾಡಿ ಸುದ್ದಿಯಲ್ಲಿದ್ರು. ಅದು ತಮಾಷೆ ಹೋಗಿ ರಕ್ಷಿತಾಗೆ ಅವಮಾನ ಮಾಡುವ ಲೆವೆಲ್ವರಗೂ ಹೋಯ್ತು. ಇಬ್ಬರಿಗೂ ಕಿಚ್ಚನ ಸರಿಯಾಗಿ ಕ್ಲಾಸ್ ತೆಗೆದುಕೊಂಡ್ರು. ನಂತರ ರಕ್ಷಿತಾಗೆ ಕ್ಷಮೆ ಕೇಳಿ ಸರಿ ಹೋದ್ರು.
ರಾಘ ವಿರುದ್ಧವೂ ನಿಂತಿದ್ದ ಇಬ್ಬರು
ಇನ್ನು ಕಳೆದ ವಾರ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ರಾಘು ಅವರು ಏಕವಚನದಲ್ಲಿ ಮಾತನಾಡಿದ್ರು. ಇಂಗ್ಲಿಷ್ ಮಾತನಾಡಿದ್ರು ಅಂತ ಜಾನ್ವಿ ಮತ್ತು ಅಶ್ವಿನಿ ರಾಘು ವಿರುದ್ಧ ನಿಂತಿದ್ರು. ಇಬ್ಬರೂ ಒಟ್ಟಾಗಿ ಇರ್ತಿದ್ರು. ಯಾವಾಗಲೂ ಜೊತೆಯಾಗಿ ಇರ್ತಿದ್ದ ಇವರು. ಈಗ ದೂರವಾಗು ಲಕ್ಷಣಗಳು ಕಾಣ್ತಿವೆ.
ದೂರವಾದ್ರಾ ಗೆಳತಿಯರು
ಅಶ್ವಿನಿ ಗೌಡ ಮತ್ತು ಜಾನ್ವಿ ನಡುವೆ ಬಿರುಕು ಮೂಡಿದೆ. ಹೌದು ಜಾನ್ವಿ ನಾನು ನಿಮ್ಮನ್ನು ಆಟಕ್ಕೆ ಬಳಸಿಕೊಂಡೆ ಎಂದಿದ್ದಾರೆ. ಅಲ್ಲದೇ ನೀವೂ ರೇಸ್ನಲ್ಲಿ ಮುಂದಿರಬಹುದು. ಆದ್ರೆ ನಾನು ಆಮೆ ತರ ರೇಸ್ ಗೆಲ್ತೀನಿ ಎಂದು ಜಾನ್ವಿ ಅವರು ಹೇಳಿದ್ದಾರೆ. ಅದಕ್ಕೆ ಅಶ್ವಿನಿ ನಮ್ಮ ಸ್ನೇಹ ಕಟ್ ಮಾಡೋಣ ಎಂದಿದ್ದಾರೆ.
ಒಟ್ಟಾರೆ ಇವರ ಸ್ನೇಹ ಇಲ್ಲಿಗೆ ಬ್ರೇಕ್ ಆಗುತ್ತಾ ಮುಂದುವರೆಯುತ್ತಾ ಅಂತ ಮುಂದಿನ ದಿನಗಳಲ್ಲಿ ಕಾದು ನೋಡೋಣ.



