Vastu Tips: ಫ್ಯಾನ್, ಲೈಟ್ ಅಳವಡಿಸುವಾಗ ಮಾಡುವ ಈ ತಪ್ಪುಗಳು ಮನೆಯ ಸಂತೋಷ ಕಸಿದುಕೊಳ್ಳಬಹುದು ಎಚ್ಚರ!
Vastu For Fan And Light: ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಸಲಹೆಗಳು ಕೇವಲ ಮನೆ ಕಟ್ಟುವುದಕ್ಕಷ್ಟೇ ಅಲ್ಲ. ಮನೆಯ ಸುತ್ತ ಗಿಡ–ಮರಗಳನ್ನು ನೆಡಲು, ಪೀಠೋಪಕರಣಗಳನ್ನು ಜೋಡಿಸಲು, ಅಲಂಕಾರಿಕ ವಸ್ತುಗಳನ್ನು ಇಡಲು ಹೀಗೆ ಎಲ್ಲ ಸಂದರ್ಭಕ್ಕೂ ವಾಸ್ತು ಎನ್ನುವುದು ಪ್ರಮುಖವಾಗಿದೆ.
ಅವೆಲ್ಲವೂ ನಮ್ಮ ಜೀವನದಲ್ಲಿ ಸುಖ, ಸಮೃದ್ಧಿಯನ್ನು ಹೆಚ್ಚಿಸುವ ಉಪಾಯಗಳಾಗಿವೆ. ಮನೆಯಲ್ಲಿ ತಪ್ಪಾಗಿ ಅಳವಡಿಸಿದ ಚಿಕ್ಕ ಪುಟ್ಟ ವಸ್ತುಗಳಿಂದಲೂ ಮನೆಯ ಸಂತೋಷ ದೂರವಾಗುತ್ತದೆ ಎಂಬುದು ಬಹಳ ಯೋಚಿಸುವ ಸಂಗತಿಯಾಗಿದೆ.
ಆದ್ದರಿಂದ ಮನೆಯಲ್ಲಿ ಏನೇ ಚಿಕ್ಕ ಪುಟ್ಟ ವಸ್ತುಗಳನ್ನು ಅಳವಡಿಸುವುದಿದ್ದರೂ ವಾಸ್ತು ಸಲಹೆ ಪಾಲಿಸುವುದು ಉತ್ತಮ. ಅದರಿಂದ ಮನೆಯಲ್ಲಿ ಸಂತೋಷ ನೆಲೆಸುತ್ತದೆ.
ಅಂದಹಾಗೆ ಮನೆಯಲ್ಲಿ ಫ್ಯಾನ್, ಲೈಟ್‌ಗಳನ್ನು ಅಳವಡಿಸುವಾಗ ಯಾರೂ ಹೆಚ್ಚು ಗಮನ ಕೊಡುವುದಿಲ್ಲ. ಅವುಗಳನ್ನು ಯಾವುದೋ ದಿಕ್ಕಿಗೆ ಹಾಕುವುದರಿಂದಲೂ ನಷ್ಟ ಆಗುತ್ತದೆ. ನಿಮ್ಮ ಮನೆಯಲ್ಲಿ ಸದಾ ಸಂತೋಷ, ಸಮೃದ್ಧಿ ತುಂಬಿರಬೇಕೆಂದರೆ ಈ ಫ್ಯಾನ್, ಲೈಟ್‌ಗಳನ್ನು ಅಳವಡಿಸಲು ಇರುವ ವಾಸ್ತು ನಿಯಮಗಳನ್ನು ಪಾಲಿಸಿ.
ವಾಯುವ್ಯ ದಿಕ್ಕಿನಲ್ಲಿ ಫ್ಯಾನ್ ಅಳವಡಿಸುವುದರಿಂದ ಕಿರಿಕಿರಿಯೇ ಹೆಚ್ಚು
ಯಾವಾಗಲೂ ಕೋಣೆಯ ಮಧ್ಯಭಾಗದಲ್ಲಿ ಸೀಲಿಂಗ್ ಫ್ಯಾನ್ ಅಳವಡಿಸಬೇಕು ಎಂದು ಶಾಸ್ತ್ರ ಹೇಳುತ್ತದೆ. ವಾಯುವ್ಯ ದಿಕ್ಕಿನಲ್ಲಿ ಫ್ಯಾನ್ ಅಳವಡಿಸುವುದರಿಂದ ಮಾನಸಿಕ ಒತ್ತಡ, ಕಿರಿಕಿರಿ ಹೆಚ್ಚಾಗುತ್ತದೆ.
ಆದರೆ ಆಗ್ನೇಯ ಅಥವಾ ಈಶಾನ್ಯ ದಿಕ್ಕಿನಲ್ಲಿ ಫ್ಯಾನ್ ಅಳವಡಿಸುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ.
ಲೈಟ್ ಅನ್ನು ಕೋಣೆಯ ಈ ಭಾಗದಲ್ಲಿ ಅಳವಡಿಸಿ
ಫ್ಯಾನ್ ಅಷ್ಟೇ ಅಲ್ಲದೇ ಬಲ್ಬ್ ಅಳವಡಿಸಲೂ ವಾಸ್ತು ನಿಯಮ ಹೇಳಿದ್ದಾರೆ. ಕೋಣೆಯಲ್ಲಿನ ಬೆಳಕು ಕೂಡ ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.
ಆದಕಾರಣ ವಾಸ್ತು ತಜ್ಞರು ಯಾವಾಗಲೂ ಕೋಣೆಯ ಮಧ್ಯಭಾಗದಿಂದ ಸ್ವಲ್ಪ ಈಶಾನ್ಯ ದಿಕ್ಕಿಗೆ ಮುಖ ಮಾಡಿ ಬಲ್ಬ್ ಅಳವಡಿಸಲು ಶಿಫಾರಸು ಮಾಡುತ್ತಾರೆ.
ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಕೈಗೆ ಬಂದ ದುಡ್ಡು ನೀರಿನಂತೆ ಖರ್ಚಾಗ್ತಾ ಇದೆಯಾ? ಹಾಗಾದ್ರೆ ಈ ಸಲಹೆ ಪಾಲಿಸಿ
ಫ್ಯಾನ್, ಲೈಟ್ ಅನ್ನು ವಾಸ್ತು ಪ್ರಕಾರ ಅಳವಡಿಸುವುದರಿಂದ ಸಿಗುವ ಪ್ರಯೋಜನಗಳು
- ಫ್ಯಾನ್ ಅನ್ನು ಸರಿಯಾಗಿ ಅಳವಡಿಸದಿದ್ದರೆ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
- ಕೋಣೆಯಲ್ಲಿ ಅತಿ ಹೆಚ್ಚು ಬೆಳಕು ಅಥವಾ ಮಂದ ಬೆಳಕು ಇದ್ದರೆ ಅದು ಸಕಾರಾತ್ಮಕ ಶಕ್ತಿಯನ್ನು ಕುಗ್ಗಿಸಬಹುದು.
- ಸರಿಯಾದ ದಿಕ್ಕಿನಲ್ಲಿ ಫ್ಯಾನ್‌ಗಳನ್ನು ಮತ್ತು ದೀಪಗಳನ್ನು ಅಳವಡಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ.
- ಮನೆಯಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವಾಗುತ್ತದೆ.
ಇದನ್ನೂ ಓದಿ: kids Bedroom Vastu : ಮಕ್ಕಳು ಮಲಗುವ ಕೋಣೆಯಲ್ಲಿ ನೀವು ಮಾಡಲೇಬೇಕಾದ ವಾಸ್ತು ಬದಲಾವಣೆಗಳಿವು
(Do not do these mistakes while fixing the fan and light in home vastu for Fan and Light)



