kids Bedroom Vastu : ಮಕ್ಕಳು ಮಲಗುವ ಕೋಣೆಯಲ್ಲಿ ನೀವು ಮಾಡಲೇಬೇಕಾದ ವಾಸ್ತು ಬದಲಾವಣೆಗಳಿವು

kids Bedroom Vastu : ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆಂದೇ ಬೆಡ್​ರೂಮ್​ಗಳನ್ನು ವಿನ್ಯಾಸಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ರೀತಿ ಮಕ್ಕಳಿಗೆಂದೇ ಬೆಡ್​ರೂಮ್​ಗಳನ್ನು ವಿನ್ಯಾಸಗೊಳಿಸುವ ಸಂದರ್ಭದಲ್ಲಿ ನಾವು ವಾಸ್ತುಗಿಂತ ಹೆಚ್ಚಾಗಿ ಡಿಸೈನ್​ಗೆ ಮಹತ್ವ ನೀಡುತ್ತೇವೆ.

ಆದರೆ ನಿಮ್ಮ ಮಗುವಿನ ಮನೋಭಾವನೆಯಲ್ಲಿ ಸಕಾರಾತ್ಮಕತೆಯನ್ನು ಸೃಷ್ಟಿಸುವಲ್ಲಿ ಮನೆಯ ಕೋಣೆಯ ವಾಸ್ತು ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಮಗು ವಾಸವಿರುವ ಕೋಣೆಯು ಮಗುವಿನ ಮಾನಸಿಕತೆ, ನಡವಳಿಕೆ ಹಾಗೂ ದೈಹಿಕ ಬೆಳವಣಿಗೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ನಿಮ್ಮ ಮಕ್ಕಳ ಕೋಣೆಯಲ್ಲಿ ಸಕಾರಾತ್ಮಕತೆ , ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯ, ವಿದ್ಯೆಯಲ್ಲಿ ಶ್ರದ್ಧೆ ನೆಲೆಸಬೇಕು ಎಂದರೆ ವಾಸ್ತು ಶಾಸ್ತ್ರದ ಪ್ರಕಾರ ಈ ಕೆಳಗಂಡ ಅಂಶಗಳ ಕಡೆಗೆ ನೀವು ಗಮನ ಹರಿಸಲೇಬೇಕು.

ಮಗುವಿನ ಕೋಣೆಯ ದಿಕ್ಕು :

ಮಕ್ಕಳಿಗೆಂದೇ ನೀವು ಮೀಸಲಿರಿಸುವ ಕೋಣೆಯು ಪಶ್ಚಿಮ ದಿಕ್ಕಿನೆಡೆ ಮುಖ ಮಾಡಿರಬೇಕು. ಈ ದಿಕ್ಕಿನಲ್ಲಿ ಸಕಾರಾತ್ಮಕ ಶಕ್ತಿ, ಉತ್ತಮ ಆರೋಗ್ಯ, ಯಶಸ್ಸು ಮತ್ತು ಆಶಾವಾದ ಇರುತ್ತದೆ. ಹೀಗಾಗಿ ಪಶ್ಚಿಮ ದಿಕ್ಕು ಮಕ್ಕಳ ಕೋಣೆಗೆ ಶೋಭೆ ತರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳಿದೆ.

ಹಾಸಿಗೆ – ಮಂಚ ಇರಿಸುವ ಜಾಗ :

ಕೋಣೆಯ ಪಶ್ಚಿಮ ಅಥವಾ ನೈಋತ್ಯ ಮೂಲೆಯಲ್ಲಿ ಹಾಸಿಗೆಯನ್ನು ಇರಿಸಬೇಕು ಹಾಗೂ ಮಕ್ಕಳು ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗಬೇಕು ಎಂದು ವಾಸ್ತು ಶಾಸ್ತ್ರ ಹೇಳಿದೆ.

ಬಣ್ಣ ಹಾಗೂ ಲೈಟಿಂಗ್ಸ್​ :

ಮಕ್ಕಳು ಇರುವ ಕೋಣೆಗೆ ಬಿಳಿ , ಕ್ರೀಮ್​ ಅಥವಾ ನೀಲಿ ಬಣ್ಣವನ್ನು ಬಳಕೆ ಮಾಡಬೇಕು. ಕೋಣೆಯಲ್ಲಿ ನೈಸರ್ಗಿಕವಾಗಿ ಅಥವಾ ಕೃತಕವಾದ ಬೆಳಕು ಇರುವಂತೆ ನೋಡಿಕೊಳ್ಳಬೇಕು.

ಕನ್ನಡಿ ಹಾಗೂ ಬಾಗಿಲು :

ಕನ್ನಡಿಗಳು, ಬಾಗಿಲುಗಳು ಅಥವಾ ಕಿಟಕಿಗಳು ಹಾಸಿಗೆಯ ಎದುರು ನೇರವಾಗಿ ಇರಬಾರದು. ಸ್ನಾನಗೃಹದ ಬಾಗಿಲು , ಹಾಸಿಗೆಯ ಕಡೆಗೆ ಮುಖ ಮಾಡಬಾರದು. ಪೂರ್ವಕ್ಕೆ ಎದುರಾಗುವ ಬಾಗಿಲುಗಳು ಸಕಾರಾತ್ಮಕ ಶಕ್ತಿ ಮತ್ತು ಸಂತೋಷವನ್ನು ಉತ್ತೇಜಿಸುತ್ತದೆ ಎನ್ನಲಾಗಿದೆ.

Also Read : ಕೈಗೆ ಬಂದ ದುಡ್ಡು ನೀರಿನಂತೆ ಖರ್ಚಾಗ್ತಾ ಇದೆಯಾ ? ಹಾಗಾದ್ರೆ ಈ ಸಲಹೆ ಪಾಲಿಸಿ

ಪೀಠೋಪಕರಣಗಳು :

ಮಕ್ಕಳ ಮಾನಸಿಕ ಆರೋಗ್ಯ ಉತ್ತಮವಾಗಿ ಇರಲು ಲೋಹದ ಚೌಕಟ್ಟಿನ ಬದಲು ಮರದ ಚೌಕಟ್ಟಿನ ಮಂಚವನ್ನು ಆಯ್ಕೆಮಾಡಿಕೊಳ್ಳಬೇಕು. ಮಕ್ಕಳು ಅಧ್ಯಯನ ಮಾಡುವ ಮೇಜನ್ನು ಪೂರ್ವಕ್ಕೆ ಮುಖ ಮಾಡಿ ಇರಿಸಬೇಕು. ಈಶಾನ್ಯ ದಿಕ್ಕಿನಲ್ಲಿ ಮಕ್ಕಳ ಪುಸ್ತಕದ ಕಪಾಟನ್ನು ಇರಿಸಬೇಕು ಎಂದು ವಾಸ್ತು ಶಾಸ್ತ್ರ ಹೇಳಿದೆ.

ಮಕ್ಕಳ ಮಲಗುವ ಕೋಣೆಯ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಬೇಡಿ :

ಮಕ್ಕಳು ವಾಸವಿರುವ ಕೋಣೆಯಲ್ಲಿ ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ಆಟಿಕೆಗಳನ್ನು ಇರಿಸಬೇಡಿ. ಆಗ್ನೇಯ ಮೂಲೆಯಲ್ಲಿರುವ ಕೋಣೆಯಲ್ಲಿ ಮಕ್ಕಳನ್ನು ಇರಿಸಬೇಡಿ. ಏಕೆಂದರೆ ಇದು ಅಶಾಂತಿಗೆ ದಾರಿಮಾಡಿಕೊಡುತ್ತದೆ. ಮಕ್ಕಳಿಗೆ ಎಂದಿಗೂ ಹಾಸಿಗೆಯ ಮೇಲೆ ಊಟ ಮಾಡಲು ಅವಕಾಶ ಕೊಡಬೇಡಿ.

ಇದರಿಂದ ಮಕ್ಕಳಿಗೆ ಕೆಟ್ಟ ಕನಸುಗಳು ಬೀಳಲು ಆರಂಭವಾಗುತ್ತದೆ. ರಕ್ಷಣೆ ಮತ್ತು ಸಕಾರಾತ್ಮಕತೆಗಾಗಿ, ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಮತ್ತು ರಕ್ಷಣೆ ನೀಡುವ ಕಲ್ಲು ಉಪ್ಪನ್ನು ನೀವು ಕೋಣೆಯಲ್ಲಿ ಇಡಬಹುದು.

Must do Vastu Changes for kids Bedroom

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories