ಕೈಗೆ ಬಂದ ದುಡ್ಡು ನೀರಿನಂತೆ ಖರ್ಚಾಗ್ತಾ ಇದೆಯಾ? ಹಾಗಾದ್ರೆ ಈ ಸಲಹೆ ಪಾಲಿಸಿ
Vastu Tips For Money Problems: ಮನುಷ್ಯನ ಜೀವನದಲ್ಲಿ ಪ್ರತಿದಿನ ಅನೇಕ ಖರ್ಚು–ವೆಚ್ಚಗಳಿರುತ್ತವೆ. ಕೆಲವು ಅಗತ್ಯವಾಗಿದ್ದರೆ, ಇನ್ನು ಕೆಲವು ಅನಗತ್ಯವಾಗಿರುತ್ತದೆ.
ಆದ್ದರಿಂದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ದುಡಿಮೆ, ಹಣ ಬೇಕೇ ಬೇಕು. ಆದರೆ ಕೆಲವರು ಬೇರೆಯದೇ ಕಥೆ. ದುಡಿಮೆಯೇನೋ ಚೆನ್ನಾಗಿರುತ್ತದೆ. ಅದಕ್ಕೆ ತಕ್ಕಂತೆ ಹಣದ ಗಳಿಕೆಯೂ ಇರುತ್ತದೆ.
ಆದರೆ ಅದು ಹೇಗೆ ಖರ್ಚಾಗುತ್ತದೆ ಎನ್ನುವುದೇ ತಿಳಿಯುವುದಿಲ್ಲ. ಹೀಗೆ ಬಂದ ಹಣ, ಹೀಗೆ ಹೋಯಿತು ಎಂದು ಹೇಳುವುದನ್ನು ನೀವೂ ಕೇಳಿರಬಹುದು ಅಥವಾ ಸ್ವತಃ ಅನುಭವಕ್ಕೂ ಬಂದಿರಬಹುದು.
ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಿಸುತ್ತಿರಬಹುದು. ಹಾಗೆಂದು ಚಿಂತಿಸುತ್ತಾ ಕುಳಿತರೆ ಪರಿಹಾರ ಸಿಗುವುದಿಲ್ಲ. ವಾಸ್ತು ಶಾಸ್ತ್ರದಲ್ಲಿ ಈ ಸಮಸ್ಯೆಗೆ ಕೆಲವು ಉಪಾಯಗಳನ್ನು ಹೇಳಲಾಗಿದೆ.
ಅವುಗಳನ್ನು ಪಾಲಿಸುವುದರಿಂದ ಸಮಸ್ಯೆ ದೂರವಾಗುತ್ತದೆ. ಹಾಗಾದರೆ ಆ ಉಪಾಯಗಳೇನು ಇಲ್ಲಿದೆ ಓದಿ.
ಆಮೆಯ ಪ್ರತಿಮೆ
ಆಮೆಯನ್ನು ವಿಷ್ಣುವಿನ ಅವತಾರ ಎನ್ನಲಾಗಿದೆ. ವಾಸ್ತು ಪ್ರಕಾರ, ಮನೆಯಲ್ಲಿ ಲೋಹದ ಆಮೆಯನ್ನು ಇಡುವುದರಿಂದ ಆರ್ಥಿಕ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದನ್ನು ಯಾವಾಗಲೂ ಉತ್ತರ ದಿಕ್ಕಿನಲ್ಲಿ ಇಡಬೇಕು.
ಕಮಲದ ಬೀಜದ ಮಾಲೆ
ಕಮಲದ ಬೀಜದ ಮಾಲೆಯನ್ನು ಮನೆಯ ದೇವರ ಕೋಣೆಯಲ್ಲಿ ಇಡಿ. ಇದನ್ನು ಶುಭವೆಂದು ಪರಿಗಣಿಸಲಾಗುತ್ತದೆ ಇದು ಆರ್ಥಿಕ ಸಂಕಷ್ಟಗಳು ನಿಮ್ಮ ಕಡೆ ಬರದಂತೆ ತಡೆಯುತ್ತದೆ. ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ. ಆ ಮಾಲೆಯನ್ನು ಹಿಡಿದು 108 ಬಾರಿ ನಿಮ್ಮ ಇಷ್ಟದ ದೇವರನ್ನು ಜಪಿಸುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
ಇದನ್ನೂ ಓದಿ: ಕೆಟ್ಟ ದೃಷ್ಠಿಗಳು ನಿಮ್ಮನ್ನು ತಾಕುತ್ತಿದ್ದೆಯೇ : ಇದರಿಂದ ಪಾರಾಗಲು ವಾಸ್ತು ಶಾಸ್ತ್ರದಲ್ಲಿದೆ ಮಾರ್ಗ
ಶ್ರೀಫಲ
ಮನೆಯಲ್ಲಿ ಶ್ರೀಫಲ ಅಂದರೆ ಚಿಕ್ಕ ತೆಂಗಿನಕಾಯಿಯನ್ನು ಇಡಿ. ಸಾಮಾನ್ಯವಾಗಿ ಇದನ್ನು ದೇವರ ಮನೆ ಅಥವಾ ಮನೆಯ ಮುಖ್ಯ ದ್ವಾರದ ಬಳಿ ಇಡಲಾಗುತ್ತದೆ. ಹಾಗೆ ಇಡುವುದರಿಂದ ಧನ–ಧಾನ್ಯದ ಕೊರತೆಯಿರುವುದಿಲ್ಲ ಎಂದು ಶಾಸ್ತ್ರ ಹೇಳುತ್ತದೆ.
ಸ್ಪಟಿಕದ ಪಿರಾಮಿಡ್
ಮನೆಯಲ್ಲಿ ಸ್ಫಟಿಕದ ಪಿರಮಿಡ್ ಇಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಇದನ್ನು ಕುಟುಂಬ ಸದಸ್ಯರು ಹೆಚ್ಚಿನ ಸಮಯವನ್ನು ಕಳೆಯುವ ಸ್ಥಳದಲ್ಲಿ ಇಡಬೇಕು. ಇದು ಮನೆಯ ಪ್ರತಿಯೊಬ್ಬ ಸದಸ್ಯರ ಆದಾಯವನ್ನು ತ್ವರಿತವಾಗಿ ಹೆಚ್ಚಿಸುತ್ತದೆ ಆರ್ಥಿಕ ಸಮೃದ್ಧಿ ಮತ್ತು ಸ್ಥಿರತೆಯನ್ನು ಕಾಪಾಡುತ್ತದೆ.
ಗೋಮತಿ ಚಕ್ರ
ನಿಮ್ಮ ಜೀವನದಲ್ಲಿ ಬಹಳಷ್ಟು ಹಣದ ಸಮಸ್ಯೆ ಎದುರಿಸುತ್ತಿದ್ದರೆ ಗೋಮತಿ ಚಕ್ರವನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ತಿಜೋರಿಯಲ್ಲಿಡಿ. ಆಗ ನಿಮಗೆ ಹಣದ ಕೊರತೆ ಎಂದಿಗೂ ಬರುವುದಿಲ್ಲ. ಅಷ್ಟೇ ಅಲ್ಲದೇ ಇದು ದುಷ್ಟ ಕಣ್ಣು, ನಕಾರಾತ್ಮಕ ಶಕ್ತಿಯನ್ನು ದೂರಮಾಡುತ್ತದೆ.
ಇದನ್ನೂ ಓದಿ: ಪ್ರತಿದಿನ ಬೆಳಿಗ್ಗೆ ಇವಿಷ್ಟು ಕೆಲಸ ಮಾಡಿ ಸಾಕು: ನಿಮ್ಮ ಅದೃಷ್ಟವೇ ಬದಲಾಗುವುದನ್ನು ನೋಡಿ
(keep these things in your house according to Vastu Shastra to overcome money problems)



