ಅರಣ್ಯ ಇಲಾಖೆ ಉದ್ಯೋಗದ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

ಶಿರಸಿ: Forest Department job: ಅರಣ್ಯ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಾಲ್ವರು ಮಹಿಳೆಯರ ಬಳಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಬ್ಯೂಟಿ ಪಾರ್ಲರ್‌ ಮಾಲಕಿ ಸೇರಿದಂತೆ ಇಬ್ಬರ ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ.

ಕುಳವೆ ನಿವಾಸಿ ಶಾಂತಲಾ ಅನಿರುದ್ಧ ಹೆಗಡೆ ಅವರು ನೀಡಿರುವ ದೂರಿನ ಪ್ರಕಾರ, ಸೆಪ್ಟೆಂಬರ್ 2023 ರಲ್ಲಿ ಅವರು ಶಿರಸಿಯ ‘ಶ್ರೇಯಾ ಬ್ಯೂಟಿ ಪಾರ್ಲರ್’ಗೆ ಭೇಟಿ ನೀಡಿದ್ದಾಗ ಪಾರ್ಲರ್ ಮಾಲೀಕಳು ಶ್ರೇಯಾ ಸಂತೋಷ ವೇರ್ಣೆಕರ್ ಪರಿಚಯವಾಗಿದ್ದಾಳೆ.

ಶ್ರೇಯಾ, ಅರಣ್ಯ ಇಲಾಖೆಯಲ್ಲಿ ಕ್ಲರ್ಕ್ ಹುದ್ದೆ ಖಾಲಿ ಇದ್ದು, ಧಾರವಾಡದ ಫಾತಿಮಾ @ ಜಾಸ್ಮಿನ್ ಶೇಖ್ ಎಂಬುವವರು ಕೆಲಸ ಕೊಡಿಸುವುದಾಗಿ ನಂಬಿಸಿದ್ದಾಳೆ. ಈ ಫಾತಿಮಾ ಅರಣ್ಯ ಇಲಾಖೆಯ ಫೀಲ್ಡ್ ಆಫೀಸರ್ ಎಂದು ಪರಿಚಯಿಸಿದ್ದಾಳೆ.

Also Read: Areca nut: 70,000 ರೂಪಾಯಿ ಗಡಿದಾಟಿದ ರಾಶಿ ಅಡಿಕೆ : ಅಡಿಕೆ ಬೆಳೆಗಾರರಿಗೆ ಬಂಪರ್‌

ಶ್ರೇಯಾಳ ಮಾತು ನಂಬಿದ ದೂರುದಾರರು, ನವೆಂಬರ್ 2023 ರಲ್ಲಿ ಹಂತ ಹಂತವಾಗಿ ಫೋನ್‌ ಪೇ (PhonePe) ಮೂಲಕ ಫಾತಿಮಾ ಖಾತೆಗೆ ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿದ್ದಾರೆ.

ಆರೋಪಿತರಲ್ಲಿ ಕೇವಲ ಶಾಂತಲಾ ಮಾತ್ರವಲ್ಲದೆ, ಅವರ ತಂಗಿ ಶೀತಲ್, ಶೀತಲ್ ಅವರ ಸ್ನೇಹಿತೆ ಕೀರ್ತಿ ಮತ್ತು ಯಶೋಧಾ ರಾಘವೇಂದ್ರ ರಾಯ್ಕರ್ ಸೇರಿದಂತೆ ಒಟ್ಟು ನಾಲ್ವರು ಮಹಿಳೆಯರಿಗೆ ಉದ್ಯೋಗದ ಆಮಿಷವೊಡ್ಡಿ ಹಣ ವಸೂಲಿ ಮಾಡಿದ್ದಾರೆ. ವಸೂಲಿ ಮಾಡಿದ ಹಣದಲ್ಲಿ ಅಲ್ಪ ಮೊತ್ತವನ್ನು ಮಾತ್ರ ಹಿಂದಿರುಗಿಸಿ, ಉಳಿದ ಹಣವನ್ನು ವಂಚಿಸಿದ್ದಾರೆ.

ಮೋಸ ಮಾಡುವ ಉದ್ದೇಶದಿಂದಲೇ ಹಣ ಪಡೆದು ವಂಚನೆ ಮಾಡಿರುವುದಾಗಿ ದೂರುದಾರರು ದೂರಿದ್ದು, ಪೊಲೀಸರು ಶ್ರೇಯಾ ವೇರ್ಣೆಕರ್ ಮತ್ತು ಫಾತಿಮಾ @ ಜಾಸ್ಮಿನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Also Read: Drug addict: ಮಾದಕ ವ್ಯಸನಿಗಳಿಗೆ ಪೊಲೀಸರ ಶಾಕ್: ಗಾಂಜಾ ಸೇವಿಸಿದ ಮೂವರ ಬಂಧನ

ಸಾರ್ವಜನಿಕರಲ್ಲಿ ಜಾಗೃತಿ

ಸರ್ಕಾರಿ ಉದ್ಯೋಗಗಳು ಯಾವಾಗಲೂ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ನಿಯಮಗಳ ಮೂಲಕವೇ ನಡೆಯುವುದರಿಂದ, ಕೆಲಸ ಕೊಡಿಸುವ ಆಮಿಷವೊಡ್ಡಿ ಹಣ ಕೇಳುವ ಮಧ್ಯವರ್ತಿಗಳ ಬಗ್ಗೆ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories