Drug addict: ಮಾದಕ ವ್ಯಸನಿಗಳಿಗೆ ಪೊಲೀಸರ ಶಾಕ್: ಗಾಂಜಾ ಸೇವಿಸಿದ ಮೂವರ ಬಂಧನ

ಭಟ್ಕಳ: Drug addict: ಸಾರ್ವಜನಿಕ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಭಟ್ಕಳ(Bhatkal) ಗ್ರಾಮೀಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ವೆಂಕಟಾಪುರ ಮೈದಾನ ಮತ್ತು ಇಬ್ರಾಹಿಂ ಪೆಟ್ರೋಲ್ ಬಂಕ್ ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ, ಅಮಲಿನಲ್ಲಿದ್ದ ಮೂವರು ಯುವಕರನ್ನು ವಶಕ್ಕೆ ಪಡೆಯಲಾಯಿತು.

  • ಅಸ್ಲಾಂ ಬೆಟಗೇರಿ (30) ಶಿರಕುಳಿ ಹೊಂಡ ಜಾಲಿ, ಭಟ್ಕಳ) – ವೆಂಕಟಾಪುರ ಮೈದಾನದ ಬಳಿ ಗಾಂಜಾ ಸೇವಿಸಿರುವುದು ಪತ್ತೆ.
  • ಜಾವಿದ್ ಸುರುಳೇಶ್ವರ (35) ಜಾಲಿ ಕ್ವಾರ್ಟಸ್, ಭಟ್ಕಳ) – ವೆಂಕಟಾಪುರ ಮೈದಾನದ ಬಳಿ ಮಾದಕ ವಸ್ತು ಸೇವಿಸಿ ಅಮಲಿನಲ್ಲಿದ್ದ.
  • ಮೊಹಮ್ಮದ್ ಆಬೀದ (19) ಬಿಳಾಲಖಂಡ, ಭಟ್ಕಳ) – ಇಬ್ರಾಹಿಂ ಪೆಟ್ರೋಲ್ ಬಂಕ್ ಸಮೀಪದ ರಸ್ತೆಯಲ್ಲಿ ಸಿಕ್ಕಿಬಿದ್ದಿದ್ದಾನೆ.

Also Read: Karwar check post: ಕಾರವಾರ ಚೆಕ್‌ಪೋಸ್ಟ್‌ನಲ್ಲಿ ಒಂದು ಕೋಟಿ ರೂ. ದಾಖಲೆ ರಹಿತ ನಗದು ವಶ

ಬಂಧಿತ ಮೂವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಅವರು ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ.ಈ ಸಂಬಂಧ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಐ. ಮಂಜುನಾಥ ಲಿಂಗಾರೆಡ್ಡಿ ಮತ್ತು ಪಿ.ಎಸ್.ಐ. ಭರಮಪ್ಪ ಬೆಳಗಲಿ ಅವರು ಆರೋಪಿಗಳ ವಿರುದ್ಧ ದೂರು ದಾಖಲಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವ್ಯಸನ ಹಾವಳಿಯನ್ನು ನಿಯಂತ್ರಿಸಲು ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

Also Read: Cyclone Montha: ಮೋಂಥಾ ಚಂಡಮಾರುತ : 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌, ಕರಾವಳಿಯಲ್ಲಿ ಕಟ್ಟೆಚ್ಚರ

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories