Today Gold Rate : ಆಭರಣ ಪ್ರಿಯರಿಗೆ ಸಿಹಿಸುದ್ದಿ: ಪಾತಾಳಕ್ಕೆ ಕುಸಿದ ಚಿನ್ನದ ದರ, ಬೆಲೆ ಎಷ್ಟು ಗೊತ್ತಾ ?

Today Gold Rate : ಬೆಂಗಳೂರು: ಕಳೆದ ಕೆಲವು ತಿಂಗಳಿನಿಂದ ಏರಿಕೆ ಕಾಣುತ್ತಿದ್ದ ಚಿನ್ನ ಇದೀಗ ಆಭರಣ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ. ಆದರೆ ಬೆಳ್ಳಿಯ ದರದಲ್ಲಿ ಏರಿಕೆ ಕಂಡಿದೆ. ಹಾಗಾದ್ರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ ?
ಹಬ್ಬ-ಹರಿದಿನ,ವಿವಾಹ ಸಮಾರಂಭಗಳ ಸೀಸನ್ ಆರಂಭ ಆಗುತ್ತಿರುವ ಸಂದರ್ಭದಲ್ಲಿ ಆಭರಣ ಪ್ರಿಯರಿಗೆ ಮತ್ತು ಖರೀದಿದಾರರಿಗೆ ಕೊಂಚ ನೆಮ್ಮದಿ ತರುವ ಸುದ್ದಿಯಿದೆ.
ಕಳೆದ ಕೆಲವು ದಿನಗಳಿಂದ ಸತತ ಏರಿಕೆ ಕಾಣುತ್ತಿದ್ದ ಚಿನ್ನದ ದರವು ದಿಢೀರ್ ಇಳಿಕೆ ಕಂಡಿದೆ. ಆದರೆ, ಇದರ ಜೊತೆಗೆ ಬೆಳ್ಳಿಯ ಬೆಲೆಯಲ್ಲಿ ಮತ್ತಷ್ಟು ಏರಿಕೆ ದಾಖಲಾಗಿದೆ.
ಇಂದು (ನವೆಂಬರ್ 2, 2025) ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದೆ. ಇದರ ಪರಿಣಾಮವಾಗಿ, 24 ಕ್ಯಾರೆಟ್ ಶುದ್ಧ ಚಿನ್ನದ (10 ಗ್ರಾಂ) ಬೆಲೆಯು ₹280 ಇಳಿಕೆಯಾಗಿ ₹1,23,000/- ಗೆ ತಲುಪಿದೆ.
ಅದೇ ರೀತಿ, ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆಯು ₹250 ಕುಸಿತ ಕಂಡು ₹1,12,750/- ರಷ್ಟಿದೆ. ಕಳೆದ ವಾರದಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದ ಕಾರಣ, ಈ ಇಳಿಕೆಯು ಗ್ರಾಹಕರಿಗೆ ದೊಡ್ಡ ಸಮಾಧಾನ ತಂದಿದೆ.
ಇದನ್ನೂ ಓದಿ : ಅನ್ನದಾತರಿಗೆ ಇಲ್ಲಿದೆ ಗುಡ್‌ನ್ಯೂಸ್: ಶೀಘ್ರದಲ್ಲೇ ನಿಮ್ಮ ಖಾತೆಗೆ ಬರಲಿದೆ 2000 ರೂಪಾಯಿ
ಜಾಗತಿಕ ಮಾರುಕಟ್ಟೆಯಲ್ಲಿನ ಸ್ಥಿರತೆ, ಅಮೆರಿಕನ್ ಡಾಲರ್ ಮೌಲ್ಯ ಮತ್ತು ಹೂಡಿಕೆದಾರರ ಮನೋಭಾವದ ಬದಲಾವಣೆಗಳೇ ಈ ಬೆಲೆ ಇಳಿಕೆಗೆ ಮುಖ್ಯ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಆದರೆ, ಚಿನ್ನದ ದರ ಇಳಿಕೆಯಾದ ಬೆನ್ನಲ್ಲೇ, ಕೈಗಾರಿಕಾ ಬೇಡಿಕೆ ಹೆಚ್ಚಳದಿಂದಾಗಿ ಬೆಳ್ಳಿಯ ದರವು ಮತ್ತಷ್ಟು ಏರಿಕೆ ಕಂಡಿದೆ. ಇಂದು ಪ್ರತಿ ಕೆಜಿ ಬೆಳ್ಳಿಯ ಬೆಲೆ ₹1,000 ವರೆಗೆ ಹೆಚ್ಚಳ ಕಂಡಿದ್ದು, ಸದ್ಯ ₹1,52,000/- ಆಸುಪಾಸಿನಲ್ಲಿದೆ.
ಇದನ್ನೂ ಓದಿ : ರೇಷನ್ ಕಾರ್ಡ್- ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ?
ಚಿನ್ನದ ಬೆಲೆ ಇಳಿದಿರುವುದು ಆಭರಣ ಖರೀದಿಗೆ ಉತ್ತಮ ಸಮಯವಾಗಿದೆ. ಆದರೆ, ಖರೀದಿಸುವ ಮುನ್ನ ಪ್ರತಿ ಗ್ರಾಂಗೆ ತೆರಿಗೆ ಮತ್ತು ತಯಾರಿಕಾ ಶುಲ್ಕಗಳನ್ನು ಪರಿಶೀಲಿಸಿಕೊಳ್ಳುವುದು ಮುಖ್ಯ.
Good news Gold Price down Silver Price Up Today Gold Rate



