ಸಿಎ ಸೆಪ್ಟೆಂಬರ್ 2025 ಫಲಿತಾಂಶ ಪ್ರಕಟ: 11,466 ವಿದ್ಯಾರ್ಥಿಗಳು ಪಾಸ್!
CA September 2025 Result: ಭಾರತದ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಸಿಎ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ (ಐಸಿಎಐ) ಸೆಪ್ಟೆಂಬರ್ 2025 ರಲ್ಲಿ ನಡೆಸಿದ್ದ ಸಿಎ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದೆ.
ಎಲ್ಲಾ3 ಹಂತದ ಸಿಎ ಫೌಂಡೇಷನ್, ಇಂಟರ್‌ಮೀಡಿಯೇಟ್ ಮತ್ತು ಫೈನಲ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸುವುದರ ಮೂಲಕ ಅಭ್ಯರ್ಥಿಗಳ ಕಾಯುವಿಕೆ ಕೊನೆಗೊಳ್ಳುವಂತೆ ಮಾಡಿದೆ.
ಅಭ್ಯರ್ಥಿಗಳು ನವೆಂಬರ್ 3 ರಂದು ಪ್ರಕಟಿಸಿದ ಫಲಿತಾಂಶವನ್ನು ಐಸಿಎಐನ ಅಧಿಕೃತ ವೆಬ್‌ಸೈಟ್ icai.nic.in.ಗೆ ಹೋಗಿ ಪರೀಕ್ಷಿಸಬಹುದಾಗಿದೆ.
ಪರೀಕ್ಷಾ ಇಲಾಖೆಯ ಜಂಟಿ ಕಾರ್ಯದರ್ಶಿ ಆನಂದ್ ಕುಮಾರ್ ಚತುರ್ವೇದಿ ಬಿಡುಗಡೆ ಮಾಡಿದ ಐಸಿಎಐನ ಪತ್ರಿಕಾ ಪ್ರಕಟಣೆಯ ಪ್ರಕಾರ ಒಟ್ಟು 11,466 ಅಭ್ಯರ್ಥಿಗಳು ಸಿಎ ಅಂತಿಮ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ.
ಅಭ್ಯರ್ಥಿಗಳು ತಮ್ಮ ರೋಲ್ ನಂಬರ್ ಮತ್ತು ನೋಂದಣಿ ಸಂಖ್ಯೆಗಳನ್ನು ನಮೂದಿಸಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಿ ಕಾರ್ಯನಿರ್ವಹಿಸಲು ಅಭ್ಯರ್ಥಿಗಳು ಕೋರ್ಸ್‌ನ 3 ಹಂತಗಳಾದ ಸಿಎ ಫೌಂಡೇಶನ್, ಇಂಟರ್ಮೀಡಿಯೇಟ್ ಮತ್ತು ಫೈನಲ್ ನಲ್ಲಿ ಉತ್ತೀರ್ಣರಾಗಿರಬೇಕು.
ಇದರಲ್ಲಿ ಸಿಎ ಫೌಂಡೇಶನ್ ಪರೀಕ್ಷೆಯು ಪ್ರವೇಶ ಮಟ್ಟದ ಪರೀಕ್ಷೆಯಾಗಿರುತ್ತದೆ. ಪಿಯುಸಿ ಅಥವಾ 12ನೇ ತರಗತಿ ಪಾಸಾದ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.
ಅದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಿಎ ಇಂಟರ್ಮೀಡಿಯೇಟ್ ಪೂರ್ಣಗೊಳಿಸಬೇಕು. ನಂತರ ಸಿಎ ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಜೊತೆಗೆ ಕಡ್ಡಾಯವಾಗಿ ಆರ್ಟಿಕಲ್‌ಶಿಪ್ ತರಬೇತಿ ತೆಗೆದುಕೊಳ್ಳಬೇಕು.
ಸಿಎ ಫಲಿತಾಂಶ ಪರೀಕ್ಷಿಸುವುದು ಹೇಗೆ?
ಮೊದಲಿಗೆ ಐಸಿಎಐನ ಅಧಿಕೃತ ವೆಬ್‌ಸೈಟ್ icai.nic.in/caresult ಗೆ ಹೋಗಿ.
ಅಲ್ಲಿ ಹೋಮ್‌ಪೇಜ್‌ನಲ್ಲಿ ಕಾಣಿಸುವ ನಿಮಗೆ ಸಂಬಂಧಪಟ್ಟ ಅಂದರೆ ಫೌಂಡೇಶನ್, ಇಂಟರ್ಮೀಡಿಯೇಟ್, ಅಥವಾ ಫೈನಲ್ ಫಲಿತಾಂಶದ ಮೇಲೆ ಕ್ಲಿಕ್ಕಿಸಿ.
ಈಗ ನಿಮ್ಮ ರೋಲ್ ನಂಬರ್ ಮತ್ತು ರೆಜಿಸ್ಟ್ರೇಷನ್ ನಂಬರ್ ನಮೂದಿಸಿ.
ನಿಮ್ಮ ಫಲಿತಾಂಶ ಕಂಪ್ಯೂಟರ್ ಪರದೆಯ ಮೇಲೆ ಕಾಣಿಸುತ್ತದೆ.
ಭವಿಷ್ಯದ ಉಲ್ಲೇಖಕ್ಕಾಗಿ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ.
70% ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳಿಗೆ ಪಾಸ್ ವಿತ್ ಡಿಸ್ಟಿಂಕ್ಷನ್ ಎಂದು ನೀಡಲಾಗುತ್ತದೆ. ಒಂದು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಲ್ಲಿ ಫೇಲ್ ಆಗಿದ್ದರೆ ಅಂತಹವರು ಮುಂಬರುವ ಪರೀಕ್ಷೆಗಳಲ್ಲಿ ಭಾಗವಹಿಸಬಹುದಾಗಿದೆ.
ಇದನ್ನೂ ಓದಿ: JEE ಮೇನ್ಸ್ 2026 ಸೆಷನ್ 1 ರ ನೋಂದಣಿ ಪ್ರಾರಂಭ: ಪಠ್ಯಕ್ರಮ, ಪರೀಕ್ಷೆಯ ಮಾದರಿ ತಿಳಿಯಿರಿ
(icai declares CA September 2025 Result students can check their foundation inter and final result)



