ಜಮೆಯಾಗದ ಅಡಿಕೆ ವಿಮೆ.. ಸರ್ಕಾರಕ್ಕೆ ಪತ್ರ ಬರೆಯಲು ದಕ್ಷಿಣ ಕನ್ನಡ ರೈತರ ನಿರ್ಧಾರ

Arecanut insurance : ಕಳೆದ ಮಳೆಗಾಲದಲ್ಲಿ ಉಂಟಾದ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಾರರಿಗೆ ನಷ್ಟ ಉಂಟಾಗಿತ್ತು. ಹೀಗಾಗಿ ಈ ವರ್ಷ ಬೆಳೆ ವಿಮೆ ಶೀಘ್ರ ಜಮೆಯ ಕನಸು ಕಾಣುತ್ತಿದ್ದ ಕರಾವಳಿ ಭಾಗದ ರೈತರಿಗೆ ನಿರಾಶೆಯುಂಟಾಗಿದೆ.

ಇನ್ನೂ ರೈತರ ಖಾತೆಗಳಿಗೆ ಕಳೆದ ವರ್ಷದ ವಿಮಾ ಮೊತ್ತ ಪಾವತಿಯಾಗದೇ ಇರುವುದು ಅಡಿಕೆ ಬೆಳೆಗಾರರ ನಿರಾಶೆಗೆ ಕಾರಣವಾಗಿದೆ. ಕಳೆದ ವರ್ಷ ನವೆಂಬರ್​ 4ರಿಂದಲೇ ರಾಷ್ಟ್ರೀಕೃತ ಬ್ಯಾಂಕ್​ ಖಾತೆಗಳಿಗೆ ವಿಮಾ ಮೊತ್ತ ಪಾವತಿ ಮಾಡಲಾಗಿತ್ತು.

ಈ ವರ್ಷ ಇದಕ್ಕೂ ಬೇಗನೇ ವಿಮಾ ಮೊತ್ತ ತಮ್ಮ ಬ್ಯಾಂಕ್​ ಖಾತೆಗಳಿಗೆ ಜಮೆ ಆಗಬಹುದು ಎಂದು ರೈತರು ನಿರೀಕ್ಷಿಸಿದ್ದರು. ಆದರೆ ಈ ರೀತಿ ಆಗಲಿಲ್ಲ. ತೋಟಗಾರಿಕಾ ಇಲಾಖೆ ಹಾಗೂ ಸಹಕಾರಿ ಸಂಘಗಳಲ್ಲಿಯೂ ವಿಮಾ ಪಾವತಿ ವಿಚಾರವಾಗಿ ರೈತರಿಗೆ ಯಾವುದೇ ಮಾಹಿತಿ ಸಿಗದೇ ಹೋಗಿದ್ದು ಆತಂಕಕ್ಕೆ ಕಾರಣವಾಗಿದೆ.

Also Read : ಸಮಯಪ್ರಜ್ಞೆ ಮೆರೆದ ಮಂಗಳೂರು ಪೊಲೀಸರು : ಆತ್ಮಹ*ತ್ಯೆಗೆ ಯತ್ನಿಸಿದ್ದ ತಂದೆ ಮಗಳ ರಕ್ಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಹಾಗೂ ಕಾಳುಮೆಣಸು ಬೆಳೆದ ಬೆಳೆಗಾರರಿಗೆ ಈ ಬಾರಿ ಅಕ್ಟೋಬರ್ ಮೊದಲ ವಾರದಲ್ಲಿಯೇ ವಿಮಾ ಮೊತ್ತ ಜಮೆಯಾಗುವ ನಿರೀಕ್ಷೆ ಇತ್ತು. ಆದರೆ ಈಗ ನವೆಂಬರ್​ ಆರಂಭಗೊಂಡಿದ್ದರೂ ವಿಮಾ ಮೊತ್ತ ಬ್ಯಾಂಕ್​ ಖಾತೆಗಳಲ್ಲಿ ಜಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಭಾಗದ ಅಡಿಕೆ ಬೆಳೆಗಾರರು ಇದೀಗ ಸರ್ಕಾರಕ್ಕೆ ಪತ್ರ ಬರೆಯುವ ನಿರ್ಧಾರಕ್ಕೆ ಬಂದಿದ್ದಾರೆ.

ವಿಮೆ ಯೋಜನೆಯ ಅಡಿಯಲ್ಲಿ ಅಡಿಕೆ ಹೆಕ್ಟೇರ್​ಗೆ 6400 ರೂಪಾಯಿ ಹಾಗೂ ಕಾಳುಮೆಣಸು ಪ್ರತಿ ಹೆಕ್ಟೇರ್​ಗೆ 2350 ರೂಪಾಯಿ ವಿಮಾ ಪ್ರೀಮಿಯಂ ಸಹಕಾರಿ ಸಂಘ ಅಥವಾ ರಾಷ್ಟ್ರೀಕೃತ ಬ್ಯಾಂಕ್‌ ಮೂಲಕ ಸರಕಾರ ನಿಗದಿಗೊಳಿಸಿದ ದಿನದೊಳಗೆ ಪಾವತಿಸಿದರೆ, ಅಡಕೆ ಹೆಕ್ಟೇರ್‌ಗೆ ಗರಿಷ್ಠ 1,28,000 ರೂ. ಹಾಗೂ ಕಾಳುಮೆಣಸಿಗೆ ಪ್ರತಿ ಹೆಕ್ಟೇರ್‌ಗೆ 47,000 ರೂ. ತನಕ ವಿಮೆ ಮೊತ್ತ ರೈತರ ಖಾತೆಗಳಿಗೆ ಜಮೆಯಾಗುತ್ತದೆ.

Also Read : ದ್ವಿಚಕ್ರ ವಾಹನ ಓಡಿಸಿದ ಪುತ್ರ : ತಾಯಿಗೆ 26 ಸಾವಿರ ದಂಡ ವಿಧಿಸಿದ ಕೋರ್ಟ್‌

Puttur arecanut insurance Dakshina Kannada farmers decide to write a letter to the Karnataka government

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories