ಕನ್ನಡ ಕಿರುತೆರೆ ಟಿಆರ್​ಪಿ ಕಳ್ಳರಿಗೆ ಶಾಕಿಂಗ್​ ಸುದ್ದಿ : BARCನಿಂದ ಕಾರ್ಯಾಚರಣೆ ಚುರುಕು

TRP Scam: ಸುದ್ದಿ ಮಾಧ್ಯಮಗಳಲ್ಲಿ ಕೆಲ ವರ್ಷಗಳ ಹಿಂದೆ ಬಾರ್ಕ್ ರೇಟಿಂಗ್​​ನಲ್ಲಿ ಭಾರೀ ಅಕ್ರಮ ಎಸಗಿದ ಪ್ರಕರಣ ಬೆಳಕಿಗೆ ಬಂದಿತ್ತು. ಹೆಸರಾಂತ ಸುದ್ದಿ ಮಾಧ್ಯಮದ ಕಳ್ಳಾಟ ಬಟಾ ಬಯಲಾಗಿತ್ತು. ಇದೀಗ ಈ ಸಂಕಷ್ಟ ಕನ್ನಡ ಕಿರುತೆರೆಯಲ್ಲಿರುವ ಟಿಆರ್​ಪಿ ಕಳ್ಳರಿಗೂ ಕಾದಿದೆ. ಕನ್ನಡ ಕಿರುತೆರೆಯಲ್ಲಿ ಹೆಚ್ಚಿನ ಟಿಆರ್​ಪಿ ಪಡೆಯಲು ಡೀಲಿಂಗ್​ ಮಾಡಿಕೊಂಡಿರುವ ಕಳ್ಳರನ್ನು ಸೆದೆಬಡಿಯಲು ಬ್ರಾಡ್​ಕಾಸ್ಟ್​ ಆಡಿಯನ್ಸ್​ ರಿಸರ್ಚ್​ ಕೌನ್ಸಿಲ್​​​ ಕರ್ನಾಟಕ ವಿಭಾಗ ಮುಂದಾಗಿದೆ.

ಎಲ್ಲಾ ಧಾರವಾಹಿಗಳ ಟಿಆರ್​ಪಿಯನ್ನು ಸೂಕ್ಷ್ಮವಾಗಿ ಮಾನಿಟರ್​ ಮಾಡುತ್ತಿರುವ ಬಾರ್ಕ್​ ಕರ್ನಾಟಕ ವಿಭಾಗವು ಒಟಿಟಿ ಮೂಲಕವೂ ಧಾರವಾಹಿಗಳು ಎಷ್ಟು ವೀಕ್ಷಣೆ ಪಡೆಯುತ್ತಿದೆ ಎಂಬುದರ ಡೇಟಾವನ್ನು ಸೂಕ್ಷ್ಮವಾಗಿ ಸಂಗ್ರಹ ಮಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಡೇಟಾಗಳನ್ನು ಆಧರಿಸಿ ಯಾವೆಲ್ಲ ಧಾರವಾಹಿಗಳ ಪ್ರಾಡಕ್ಷನ್​ ತಂಡ ಬಾರ್ಕ್ ಅಕ್ರಮದಲ್ಲಿ ಭಾಗಿಯಾಗಿದೆ ಎಂಬುದನ್ನು ಪತ್ತೆ ಮಾಡಲಿದೆ. ಟಿಆರ್​ಪಿ ಕಳ್ಳರನ್ನು ಪತ್ತೆ ಮಾಡಿದ ಬಳಿಕ ಅವರಿಗೆ ಯಾವ ರೀತಿಯ ಶಿಕ್ಷೆ ವಿಧಿಸಬಹುದು ? ಕಿರುತೆರೆ ಲೋಕದಿಂದಲೇ ಅವರನ್ನು ಬ್ಯಾನ್​ ಮಾಡಬಹುದೇ ಎಂಬೆಲ್ಲ ಪ್ರಶ್ನೆಗಳು ಹರಿದಾಡುತ್ತಿದೆ.

ಇದನ್ನೂ ಓದಿ: New Serial: ಝೀ ಕನ್ನಡದಲ್ಲಿ ಹೊಸ ಧಾರಾವಾಹಿ; ಆದಿ ಲಕ್ಷ್ಮಿ ಪುರಾಣದಲ್ಲಿ ಕಲರ್ಸ್ ಪೂಜಾ ಮ್ಯಾಜಿಕ್

ಕೆಲ ವರ್ಷಗಳ ಹಿಂದೆ ಮಾಳಾವಿಕಾ ಅವಿನಾಶ್​ ಟಿಆರ್​ಪಿ ಕಳ್ಳಾಟ ನಡೆಸುತ್ತಿದ್ದ ನಿರ್ಮಾಪಕರ ಮೇಲೆ ಸಮರ ಸಾರಿದ್ದರು. ಇದೀಗ ಬಾರ್ಕ್​ ಕರ್ನಾಟಕ ವಿಭಾಗ ಕೂಡ ಟಿಆರ್​ಪಿ ಕಳ್ಳರ ಪತ್ತೆಗೆ ಫೀಲ್ಡಿಗೆ ಇಳಿದಿದ್ದು ಯಾವೆಲ್ಲ ಚಾನೆಲ್​ಗಳ ಬಣ್ಣ ಬೆಳಕಿಗೆ ಬರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories