ಸಾಲಗಾರರಿಗೆ ವರ್ಷಾಂತ್ಯದ ಗಿಫ್ಟ್​ ನೀಡಿದ ಆರ್​ಬಿಐ : ರೆಪೋ ದರದಲ್ಲಿ ಕಡಿತ

Reduction in repo rate of RBI: ಜನಸಾಮಾನ್ಯರಿಗೆ ಭಾರತೀಯ ರಿಸರ್ವ್ ಬ್ಯಾಂಕ್​ ವರ್ಷಾಂತ್ಯದ ಗಿಫ್ಟ್​ ನೀಡಿದೆ.ಎಲ್ಲರ ನಿರೀಕ್ಷೆಯಂತೆಯೇ ಆರ್​ಬಿಐ ರೆಪೋ ದರವನ್ನು 0.25 ಶೇಕಡಾ ಕಡಿತಗೊಳಿಸಿದ್ದು ಈ ಮೂಲಕ ರೆಪೋ ದರ 5.50 ಪ್ರತಿಶತದಿಂದ 5.25 ಪ್ರತಿಶತಕ್ಕೆ ಇಳಿಕೆ ಕಂಡಿದೆ.

ಈ ಸಂಬಂಧ ಮಾಹಿತಿ ನೀಡಿದ ಗವರ್ನರ್​​ ಸಂಜಯ್​ ಮಲ್ಹೋತ್ರಾ, ಹಣಕಾಸು ನೀತಿ ಸಮಿತಿ ಅಲ್ಪಾವಧಿಯ ಸಾಲ ದರ ಅಥವಾ ರೆಪೋ ದರದಲ್ಲಿ 25 ಮೂಲಾಂಶದಷ್ಟು ತಗ್ಗಿಸಲು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಗರಿಷ್ಠ ಶೇ. 8.2ಕ್ಕೆ ಏರಿಕೆ ಕಂಡಿದೆ. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರವು ಕಳೆದ 3 ತಿಂಗಳುಗಳಿಂದ ಶೇ. 2ಕ್ಕಿಂತ ಕಡಿಮೆ ಆಗಿರುವುದರಿಂದ ರೆಪೋ ದರ ಕಡಿತ ಸಾಧ್ಯವಾಗಿದೆ. ಅಕ್ಟೋಬರ್‌ನಲ್ಲಿ ದೇಶದ ಚಿಲ್ಲರೆ ಹಣದುಬ್ಬರವು ಐತಿಹಾಸಿಕ ಕನಿಷ್ಠ ಮಟ್ಟವಾದ ಶೇ. 0.25ಕ್ಕೆ ಇಳಿದಿದೆ.

ಈ ಹಿನ್ನೆಲೆಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ವಸತಿ, ವಾಹನ ಮತ್ತು ವಾಣಿಜ್ಯ ಸಾಲಗಳು ಅಗ್ಗವಾಗುವ ನಿರೀಕ್ಷೆ ಇದೆ.

Also Read: ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಹೈಕೋರ್ಟ್‌ನಿಂದ ನಿರಾಕರಣೆ

ರೆಪೋ ದರ ಕಡಿತದಿಂದ ಎಲ್ಲಾ ಸಾಲಗಾರರಿಗೆ ಲಾಭವಾಗುವುದಿಲ್ಲ.ಈಗಾಗಲೇ ಸಾಲ ತೆಗೆದುಕೊಂಡ ಅಥವಾ ಹೊಸದಾಗಿ ಸಾಲ ಮಾಡಿದರಿಗೆ ತಕ್ಷಣವೇ ರೆಪೋ ದರದ ಲಾಭ ವರ್ಗಾವಣೆ ಮಾಡಲಾಗುವುದಿಲ್ಲ. ಬ್ಯಾಂಕುಗಳು ಬಡ್ಡಿ ದರ ಇಳಿಕೆ ನಿರ್ಧಾರ ಮಾಡಿದ ಬಳಿಕ ಇಎಂಐ ಇಳಿಕೆ ಆಗಲಿದೆ. ರೆಫೋ ಆದಾರಿತ ಬಡ್ಡಿ ವ್ಯವಸ್ಥೆ ಹೊಂದಿದ ಸಾಲ ತೆಗೆದುಕೊಂಡವರಿಗೆ ಮಾತ್ರ ಈ ವರದಾನ ಸಿಗಲಿದೆ. ಆದರೆ ಸರಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾದಿಂದ ತಕ್ಷಣವೇ ಬಡ್ಡಿ ದರ ಇಳಿಕೆ ಮಾಡಿದೆ.

ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕ್​ನಿಂದ ಹಣವನ್ನು ಪಡೆದು ವಿಧಿಸುವ ಬಡ್ಡಿದರವೇ ರೆಪೋ ದರ. ರೆಪೋ ದರದಲ್ಲಿ ಇಳಿಕೆ ಕಂಡು ಬಂದಾಗ ಬ್ಯಾಂಕುಗಳಿಗೆ ಕಡಿಮೆ ಬಡ್ಡಿದರದಲ್ಲಿ ಹೆಚ್ಚು ಹಣ ಸಿಗುತ್ತದೆ. ಇದರಿಂದ ಬ್ಯಾಂಕುಗಳಿಂದ ಸಾಲ ಪಡೆಯುವ ಗ್ರಾಹಕರಿಗೂ ಬಡ್ಡಿದರದಲ್ಲಿ ಇಳಿಕೆ ಕಂಡು ಬರುತ್ತದೆ. ಹಾಗೂ ಬ್ಯಾಂಕುಗಳಲ್ಲಿ ಸಾಲಕ್ಕೆ ಬೇಡಿಕೆ ಹೆಚ್ಚುತ್ತದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories