ಸಂಚಾರ ಉಲ್ಲಂಘನೆ ದಂಡ ಪಾವತಿಗೆ ರಿಯಾಯಿತಿ ಬೆನ್ನಲ್ಲೇ ಜಲಮಂಡಳಿಯಿಂದ ಹೊಸ ಆಫರ್​ : ಗ್ರಾಹಕರಿಗೆ ಸುವರ್ಣಾವಕಾಶ

ಕೆಲವು ದಿನಗಳ ಹಿಂದೆಯಷ್ಟೇ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಬಾಕಿ ಇರುವವರಿಗೆ ಭರ್ಜರಿ ಆಫರ್​ ನೀಡಲಾಗಿತ್ತು. ದಂಡ ಪಾವತಿಗೆ 50 ಪರ್ಸೆಂಟ್​ ರಿಯಾಯಿತಿ ನೀಡಿದ ಕಾರಣ ಜನರು ಸಾಗರೋಪಾದಿಯಲ್ಲಿ ಟ್ರಾಫಿಕ್​ ಫೈನ್​ ಪಾವತಿ ಮಾಡಿದ್ದರು. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೇ ಆದಾಯ ಹರಿದು ಬಂದಿತ್ತು.

ಇದೀಗ ಇಂತಹದ್ದೇ ಒಂದು ಪ್ಲಾನ್​ನ್ನು ಬೆಂಗಳೂರಿನ ಜಲಮಂಡಳಿ ಮಾಡಿದೆ. ಬಾಕಿ ಇರುವ ಬಿಲ್​ ಪಾವತಿಗೆ ಗ್ರಾಹಕರಿಗೆ ಹೊಸದೊಂದು ಸುವರ್ಣಾವಕಾಶ ನೀಡಿದೆ. ಆದರೆ ಟ್ರಾಫಿಕ್​ ಫೈನ್​ನಂತೆ 50 ಪರ್ಸೆಂಟ್​ ರಿಯಾಯಿತಿ ನೀಡಲಾಗಿಲ್ಲ. ಬದಲಿಗೆ ವರ್ಷಗಟ್ಟಲೇ ನೀರಿನ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡವರಿಗೆ ಅದರ ಮೇಲೆ ಹೇರಲಾದ ಬಡ್ಡಿ ಹಾಗೂ ದಂಡವನ್ನು ಮನ್ನಾ ಮಾಡುವುದಾಗಿ ಜಲಮಂಡಳಿ ಮಾಹಿತಿ ನೀಡಿದೆ.
ಈ ರೀತಿ ಒನ್​ ಟೈಮ್​ ಸೆಟಲ್​ಮೆಂಟ್​ಗೆ ರಾಜ್ಯ ಸರ್ಕಾರ ಕೂಡ ಒಪ್ಪಿಗೆ ನೀಡಿದೆ ಎನ್ನಲಾಗಿದ್ದು, ಜನವರಿ ಆರಂಭದಿಂದಲೇ ಈ ಆಫರ್​ ಜಾರಿಗೆ ಬರಲಿದೆ. ಆದರೆ ಇಲ್ಲಿ ಅಸಲು ಪೂರ್ತಿ ಕಟ್ಟಬೇಕು. ಇದರಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ಬಿಲ್​ ಪಾವತಿ ಮಾಡದೇ ಇರುವುದಕ್ಕೆ ವಿಧಿಸಲಾದ ದಂಡ ಹಾಗೂ ಬಡ್ಡಿ ಇದು ಮಾತ್ರ ಸಂಪೂರ್ಣವಾಗಿ ಮನ್ನಾ ಆಗಲಿದೆ.

ಇದನ್ನೂ ಓದಿ: ಬೀದಿ ನಾಯಿಗಳಿಗೆ ಶೀಘ್ರದಲ್ಲೇ ಬಿರಿಯಾನಿ ಭಾಗ್ಯ : ಜಿಬಿಎ ಶ್ವಾನಗಳ ನಿರ್ವಹಣೆಗೆ ಪ್ರಾಣಿದಯಾ ಸಂಘ ಅಸಮಾಧಾನ

ಅನೇಕರಿಗೆ ನೀರಿನ ಬಾಕಿ ಬಿಲ್​ಗಿಂತ ಅದರ ಮೇಲೆ ಹಾಕಲಾದ ಬಡ್ಡಿ ಮೊತ್ತವೇ ಜಾಸ್ತಿಯಾಗಿತ್ತು. ಈ ರೀತಿಯ ಸಂಕಷ್ಟದಲ್ಲಿ ಇದ್ದವರಿಗೆ ಜಲಮಂಡಳಿ ನೀಡಿರುವ ಈ ಆಫರ್​ ಖಂಡಿತ ವರದಾನವಾಗಲಿದೆ. ಕೇವಲ ಮೂರು ತಿಂಗಳ ಅವಧಿಗೆ ಮಾತ್ರ ಈ ಆಫರ್​ ನೀಡಲಾಗಿದ್ದು ಗ್ರಾಹಕರಿಗೆ ಹೆಚ್ಚಿನ ಲಾಭ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಸದ್ಯಕ್ಕೆ ಈ ಸುವರ್ಣಾವಕಾಶ ಕೇವಲ ಬೆಂಗಳೂರಿಗರಿಗೆ ಮಾತ್ರ ಸೀಮಿತವಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಜಾರಿಗೆ ಬರುವ ನಿರೀಕ್ಷೆ ಇದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories