ರಾಜ್ಯದ ಕಾಲೇಜು ವಿದ್ಯಾರ್ಥಿನಿಯರಿಗೂ ಶೀಘ್ರದಲ್ಲೇ ಋತುಚಕ್ರದ ರಜೆ : ಮುಟ್ಟಿನ ರಜೆ ವಿರೋಧಿಸುವವರಿಗೆ ಭಾರೀ ಮೊತ್ತದ ಫೈನ್!
ರಾಜ್ಯದ ಎಲ್ಲಾ ಮಹಿಳಾ ನೌಕರರಿಗೆ ಋತುಚಕ್ರದ ರಜೆ ನೀಡುವ ಮಹತ್ವದ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ಇದೀಗ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರಿಗೂ ಈ ರಜೆಯನ್ನು ನೀಡುವ ಬಗ್ಗೆ ಚಿಂತನೆ ನಡೆಸಿದೆ. ಇಂದಿನ ಸಂಪುಟ ಸಭೆಯಲ್ಲಿ ಕರ್ನಾಟಕ ಮಹಿಳಾ ಯೋಗಕ್ಷೇಮ ಕಾಯ್ದೆ – 2025ನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಅನುಮೋದನೆ ಪಡೆದುಕೊಳ್ಳುವ ಸಾಧ್ಯತೆಯಿದೆ.
ಇನ್ನು ಋತುಚಕ್ರದ ಅವಧಿಯಲ್ಲಿ ರಜೆ ನೀಡಲು ನಿರಾಕರಿಸುವ,ತಾರತಮ್ಯ ಮಾಡುವವರಿಗೆ 5000 ರೂಪಾಯಿಗಳ ದಂಡ ವಿಧಿಸಲು ಈ ಕಾಯ್ದೆಯ ಅಡಿಯಲ್ಲಿ ಅವಕಾಶ ಒದಗಿಸಲಾಗಿದೆ. ಆದ್ದರಿಂದ ಯಾವುದೆ ಕಂಪನಿಗಳು ಅಥವಾ ಸಂಸ್ಥೆಗಳು ಮಹಿಳೆಯರಿಗೆ ಋತುಚಕ್ರದ ರಜೆ ನೀಡುವುದನ್ನು ನಿರಾಕರಿಸುವುದು ಭಾರೀ ಸಂಕಷ್ಟಕ್ಕೆ ನಾಂದಿ ಹಾಡಲಿದೆ. ಹೀಗಾಗಿ ಈ ಐತಿಹಾಸಿಕ ಕಾಯ್ದೆಯು ರಾಜ್ಯದ ಎಲ್ಲಾ ಮಹಿಳೆಯರಿಗೆ ವರದಾನವಾಗಿ ಪರಿಣಮಿಸುವುದು ಪಕ್ಕಾ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರಿಗರ ಹೊಸ ವರ್ಷಾಚರಣೆ ಸಂಭ್ರಮದ ಮೇಲೆ ಆರ್ ಸಿಬಿ ದುರಂತ ಕರಿನೆರಳು : ಎಂಜಿರೋಡ್ನಲ್ಲಿ ಸೆಬೇಷನ್ಗೆ ಬೀಳುತ್ತಾ ಬ್ರೇಕ್!
ಇನ್ನು ಈ ಋತುಚಕ್ರದ ರಜೆಗೆ ಲಿಂಗತ್ವ ಅಲ್ಪಸಂಖ್ಯಾತರನ್ನೂ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಟ್ರಾನ್ಸ್ಮೆನ್ ಹಾಗೂ ಟ್ರಾನ್ಸ್ವುಮೆನ್ ಇಬ್ಬರಿಗೂ ಈ ಸೌಲಭ್ಯಗಳು ಸಿಗಲಿದೆ. ಮುಟ್ಟಿನ ಅವಧಿ ಮುಗಿದ ಅಥವಾ 52 ವರ್ಷ ದಾಟಿದ ಮಹಿಳೆಯರು ಈ ರಜೆಯನ್ನು ಪಡೆದುಕೊಳ್ಳಲು ಅರ್ಹರಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.



