ಬಿಪಿಎಲ್​ ಕಾರ್ಡ್​ ನಿಯಮಾವಳಿಗಳಲ್ಲಿ ಮತ್ತಷ್ಟು ಕಠಿಣತೆ : ಈ ದಾಖಲೆಗಳನ್ನು ಸಲ್ಲಿಸಿದರೆ ಮಾತ್ರ ಹೆಸರು ಸೇರ್ಪಡೆಗೆ ಅವಕಾಶ

ರಾಜ್ಯದಲ್ಲಿ ಅನರ್ಹ ಬಿಪಿಎಲ್​ ಕಾರ್ಡ್​ ಫಲಾನುಭವಿಗಳ ವಿರುದ್ಧ ಸಮರ ಸಾರಿರುವ ರಾಜ್ಯ ಆಹಾರ ಇಲಾಖೆ ಈಗಾಗಲೇ ಲಕ್ಷಾಂತರ ಬಿಪಿಎಲ್​ ಕಾರ್ಡ್​ಗಳನ್ನು ರದ್ದುಗೊಳಿಸಿದೆ. ಅರ್ಹ ಫಲಾನುಭವಿಗಳಿಗೆ ಆಹಾರ ಭದ್ರತೆ ದೊರಕಲಿ ಎಂಬ ಉದ್ದೇಶದಿಂದ ಬಿಪಿಎಲ್​ ಕಾರ್ಡ್ ನಿಯಮಾವಳಿಗಳನ್ನು ಮತ್ತಷ್ಟು ಕಠಿಣಗೊಳಿಸಲಾಗುತ್ತಿದೆ. ಇದೀಗ ಬಿಪಿಎಲ್​ ಕಾರ್ಡ್​ಗೆ ಹೊಸ ಸದಸ್ಯರ ಸೇರ್ಪಡೆಗೂ ಹಲವು ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಬಿಪಿಎಲ್​ ಪಡಿತರ ಚೀಟಿಯಲ್ಲಿ ಇನ್ಮುಂದೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು, ಜಾತಿ, ಆದಾಯ, ಆಧಾರ್​ ಹಾಗೂ ವಿವಾಹ ನೋಂದಣಿ ಪ್ರಮಾಣ ಪತ್ರ ಸೇರಿದಂತೆ ಇನ್ನೂ ಅನೇಕ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಇನ್ನು ಆರು ವರ್ಷ ಮೇಲ್ಪಟ್ಟವರನ್ನು ಪಡಿತರ ಕಾರ್ಡ್​ಗೆ ಸೇರ್ಪಡೆ ಮಾಡಲು ಮಕ್ಕಳ ಜನನಪ್ರಮಾಣ ಪತ್ರ, ಆಧಾರ್​ ಕಾರ್ಡ್, ಪೋಷಕರ ಆಧಾರ್​ ಕಾರ್ಡ್ ಹಾಗೂ ತಂದೆ – ತಾಯಿ ಪಡಿತರ ಚೀಟಿಯ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಆಹಾರ ಇಲಾಖೆ ಮಾಹಿತಿ ನೀಡಿದೆ.
ಇನ್ನು ಬೇರೆಡೆಗೆ ಮದುವೆಯಾಗಿ ಬರುವ ಮಹಿಳೆಯರು ಈ ಎಲ್ಲಾ ದಾಖಲೆಗಳ ಜೊತೆಗೆ ಹಳೆಯ ಕಾರ್ಡ್​ನಿಂದ ತಮ್ಮ ಹೆಸರನ್ನು ತೆಗೆಸಿರುವ ದಾಖಲೆಯನ್ನು ಸಲ್ಲಿಸುವುದು ಕೂಡ ಕಡ್ಡಾಯವಾಗಿರಲಿದೆ. ಬೆಂಗಳೂರು ಒನ್​, ಅಥವಾ ಸೈಬರ್​ ಸೆಂಟರ್​ಗಳಲ್ಲಿ ಸೂಕ್ತ ದಾಖಲೆಗಳನ್ನು ಸಲ್ಲಿಸುವ ಮೂಲಕ ಸ್ವಯಂ ಅರ್ಜಿ ಸಲ್ಲಿಕೆಗೂ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಮನುಷ್ಯರಂತೆ ಪ್ರಾಣಿಗಳಿಗೂ ಇನ್ಮುಂದೆ ಆಧಾರ್ ಕಾರ್ಡ್‌ : ಕ್ಯೂಆರ್ ಕೋಡ್‌ನಲ್ಲಿರಲಿದೆ ಸಂಪೂರ್ಣ ಮಾಹಿತಿ

ಅನರ್ಹ ಬಿಪಿಎಲ್​ ಕಾರ್ಡ್​ದಾರರನ್ನು ಪತ್ತೆ ಮಾಡುವ ಕ್ರಮವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅರ್ಹರಿಗೆ ಸರ್ಕಾರದ ಸೌಲಭ್ಯಗಳು, ಆಹಾರ ಭದ್ರತೆ ದೊರಕಬೇಕು ಎಂದು ಆಹಾರ ಇಲಾಖೆ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಬಿಪಿಎಲ್​ ಕಾರ್ಡ್ ನಿಯಮಾವಳಿಗಳಲ್ಲಿ ದಿನದಿಂದ ದಿನಕ್ಕೆ ಕಠಿಣತೆ ತರಲಾಗುತ್ತಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories