ಯಾವಾಗಲೂ ಫಿಟ್ ಆ್ಯಂಡ್ ಫೈನ್ ಆಗಿರ್ಬೇಕಾ? ಹಾಗಾದ್ರೆ ಈ ಸೂಪರ್‌ಫುಡ್‌ಗಳನ್ನು ತಿನ್ನಿ
Winter Superfoods: ಋತುಮಾನಗಳ ಬದಲಾವಣೆಯ ಕಾಲದಲ್ಲಿ ಅನೇಕ ಸಣ್ಣ ಪುಟ್ಟ ಕಾಯಿಲೆಗಳು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತವೆ. ಅದರಲ್ಲೂ ಚಳಿಗಾಲ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುವಂತೆ ಮಾಡುತ್ತದೆ.
ಶೀತಗಾಳಿ, ಚಳಿಯಿಂದ ದೇಹ ಬಳಲುತ್ತದೆ. ಹಾಗಾಗಿ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಅದೇ ದೇಹ ಫಿಟ್ ಆಗಿದ್ರೆ ಋತುಮಾನದ ಕಾಯಿಲೆಗಳು ಹೆಚ್ಚಾಗಿ ಬಾಧಿಸುವುದಿಲ್ಲ.
ದೇಹ ಫಿಟ್ ಆಗಿರಬೇಕೆಂದ್ರೆ ಶಕ್ತಿ ಒದಗಿಸುವ ಉತ್ತಮ ಆಹಾರಗಳನ್ನು ಸೇವಿಸುವುದು ಬಹಳ ಅಗತ್ಯ. ಅವು ದೇಹವನ್ನು ಫಿಟ್ ಆಗಿರುವಂತೆ ನೋಡಿಕೊಳ್ಳುವುದರ ಜೊತೆಗೆ ರೋಗಗಳಿಂದಲೂ ಕಾಪಾಡುತ್ತವೆ.
ಸಣ್ಣ ಪುಟ್ಟ ಕಾಯಿಲೆಗಳಿಗೆ ಔಷಧ ತೆಗೆದುಕೊಳ್ಳುವುದು ತಪ್ಪುತ್ತದೆ. ವಿಟಮಿನ್, ಪ್ರೋಟೀನ್ ಹಾಗೂ ಖನಿಜಗಳಿಂದ ಕೂಡಿರುವ ಸೂಪರ್‌ಫುಡ್‌ಗಳನ್ನು ವಿವಿಧ ರೀತಿಯಲ್ಲಿ ಸೇವಿಸಬಹುದು.
ಹೇಗೆ ತಿಂದರೂ ಅವು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. ಯಾವಾಗಲೂ ಫಿಟ್ ಆಗಿರುವಂತೆ ನೋಡಿಕೊಳ್ಳುತ್ತವೆ. ಹಾಗಾದ್ರೆ ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಲೇ ಬೇಕಾದ ಸೂಪರ್‌ಫುಡ್‌ಗಳು ಯಾವುವು ಎಂದು ನೋಡೋಣ.
ಅಗಸೆ ಬೀಜ
ಒಮೆಗಾ–3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಅಗಸೆ ಬೀಜ ಒಂದು ಅತ್ಯುತ್ತಮ ಸೂಪರ್ ಫೂಡ್. ಇದು ದೇಹದಲ್ಲಿ ತೈಲದ ಅಂಶವನ್ನು ಹೆಚ್ಚಿಸ ಸಹಾಯ ಮಾಡುತ್ತದೆ. ಚರ್ಮ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ.
ಕೊಲೆಸ್ಟ್ರಾಲ್ ನಿಂದ ಮುಕ್ತಿ ಪಡೆಯಲು ಅಗಸೆ ಬೀಜ ಬೆಸ್ಟ್. ಇದು ತೂಕ ಇಳಿಕೆಗೂ ಉತ್ತಮವಾಗಿದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಜೊತಗೆ ಕೂದಲು ಉದುರುವುದನ್ನು ತಡೆದು ಹೊಸ ಕೂದಲು ಬರಲು ಸಹಾಯ ಮಾಡುತ್ತದೆ.
ಪಪ್ಪಾಯಿ ಹಣ್ಣು
ಪಪ್ಪಾಯಿ ಎಲ್ಲಾ ಋತುವಿನಲ್ಲಿಯೂ ಸೇವಿಸಬಹುದಾದ ಹಣ್ಣು. ಇದು ವಿಟಮಿನ್ ಎ, ಸಿ ಮತ್ತು ಯಿಂದ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮವಾಗಿದೆ.
ಈ ಹಣ್ಣನ್ನು ಮಧುಮೇಹ ಮತ್ತು ಹೃದ್ರೋಗ ಸಮಸ್ಯೆ ಇರುವವರೂ ಸಹ ತಿನ್ನಬಹುದಾಗಿದೆ. ಪಪ್ಪಾಯಿಯು ಮಹಿಳೆಯರಿಗೆ ಬಹಳ ಉತ್ತಮವಾಗಿದೆ. ಅನಿಯಮಿತ ಋತುಚಕ್ರದ ಸಮಸ್ಯೆಯನ್ನು ಹೊಂದಿರುವ ಮಹಿಳೆಯರಿಗೆ ಪಪ್ಪಾಯಿ ವರದಾನವಾಗಿದೆ.
ಇದನ್ನೂ ಓದಿ: ಕೋವಿಡ್ ಲಸಿಕೆಯಿಂದಲೇ ಹೃದಯಾಘಾತದ ಅಪಾಯ ಹೆಚ್ಚಳ : ಆರೋಪ ತಳ್ಳಿ ಹಾಕಿದ ಏಮ್ಸ್ ಅಧ್ಯಯನ
ತೆಂಗಿನಕಾಯಿ
ತೆಂಗಿನಕಾಯಿ ಒಂದು ಸೂಪರ್‌ಫುಡ್. ಅಡುಗೆಯಿಂದ ಹಿಡಿದು ಸೌಂದರ್ಯದವರೆಗೂ ಇದರ ಉಪಯೋಗ ಕಾಣಬಹುದು. ಜೀವಸತ್ವ, ಖನಿಜ ಹಾಗೂ ನಾರಿನಾಂಶದಿಂದ ಸಮೃದ್ಧವಾಗಿರುವ ತೆಂಗನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಋತುಮಾನದ ಕಾಯಿಲೆಗಳನ್ನು ದೂರವಿಡಬಹುದು. ಉತ್ತಮ ಮಾಯಿಶ್ಚರೈಸರ್ ಆಗಿರುವ ಇದು ಕೋಶಗಳ ದುರಸ್ತಿಗೂ ಸಹಾಯಮಾಡುತ್ತದೆ.
ಅಲೋವೆರಾ
ಚರ್ಮದ ಸಮಸ್ಯೆಗಳು, ಮೊಡವೆಗಳು, ಚರ್ಮದ ಟ್ಯಾನ್ ಮುಂತಾದ ಸಮಸ್ಯೆಗಳಿಗೆ ಚಿಕಿತ್ಸೆಗೆ ಅಲೋವೆರಾ ಬೆಸ್ಟ್. ಚರ್ಮದ ರಚನೆಯನ್ನು ಸುಧಾರಿಸಲು ಮತ್ತು ವಯಸ್ಸಾಗುವಿಕೆಯನ್ನು ನಿಧಾನಗೊಳಿಸಲು ಅಲೋವೆರಾ ಜೆಲ್ ಬಳಸಲಾಗುತ್ತದೆ.
ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಮಲಬದ್ಧತೆ ಮತ್ತು ಎದೆಯುರಿ ಶಮನವಾಗುತ್ತದೆ.



