ಕೋವಿಡ್ ಲಸಿಕೆಯಿಂದಲೇ ಹೃದಯಾಘಾತದ ಅಪಾಯ ಹೆಚ್ಚಳ : ಆರೋಪ ತಳ್ಳಿ ಹಾಕಿದ ಏಮ್ಸ್ ಅಧ್ಯಯನ

Covid vaccine heart attack : ದೇಶದಾದ್ಯಂತ ಕೋವಿಡ್ (Covid -19) ಸಾಂಕ್ರಾಮಿಕದ ಬಳಿಕ ಕಿರಿಯ ವಯಸ್ಸಿನವರಲ್ಲಿ ಹಠಾತ್ ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 18 ರಿಂದ 45 ವರ್ಷ ಪ್ರಾಯದ ಪುರುಷರಲ್ಲಿ ಹೆಚ್ಚು ಮರಣ ಸಂಭವಿಸುತ್ತಿತ್ತು.
ಕೋವಿಡ್ ಲಸಿಕೆಯಿಂದಾಗಿಯೇ ಈ ರೀತಿ ಕಿರಿಯ ವಯಸ್ಸಿನ ಪುರುಷರು ಮರಣವನ್ನುಪ್ಪುತ್ತಿದ್ದಾರೆ ಎಂಬ ಮಾತು ಪ್ರಬಲವಾಗಿ ಕೇಳಿ ಬರುತ್ತಿತ್ತು . ಆದರೆ ಇದೀಗ ಈ ವಿಚಾರವಾಗಿ ಏಮ್ಸ್ ಆಸ್ಪತ್ರೆ ಸಂಶೋಧಕರು ನಡೆಸಿದ ಮಹತ್ವದ ಸಂಶೋಧನೆಯಲ್ಲಿ ಪ್ರಮುಖ ವಿಚಾರವೊಂದು ಹೊರಬಿದ್ದಿದೆ.
ಕಳೆದ 1 ವರ್ಷಗಳಲ್ಲಿ ಈ ರೀತಿ ಹಠಾತ್ ಸಾವಿಗೆ ಒಳಗಾದ ಅನೇಕ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸುವ ಮೂಲಕ ಈ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಯುವಕರ ಹಠಾತ್ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ.
ಬದಲಾಗಿ ಹೃದಯ ರಕ್ತನಾಳದಲ್ಲಿ ಇರುವ ವೈದ್ಯಕೀಯ ಸಮಸ್ಯೆಯೇ ಇದಕ್ಕೆ ಕಾರಣ ಎಂಬ ವಿಚಾರ ಬಯಲಾಗಿದೆ. ಸರಿಸುಮಾರು 2,214 ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 180 ಹಠಾತ್ ಸಾವಿನಿಂದ ಮೃತಪಟ್ಟವರಾಗಿದ್ದರು.
ಇದರಲ್ಲಿ 57 ಪರ್ಸೆಂಟ್ ಜನರು ಯುವಕರಾಗಿದ್ದರೆ 42 ಪ್ರತಿಶತ ಜನರು ವಯಸ್ಕರಾಗಿದ್ದರು. ಇವರೆಲ್ಲರಿಗೂ ಹೃದಯ ಸಂಬಂಧಿ ಸಮಸ್ಯೆ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಪರಿಧಮಿನಿ ಕಾಯಿಲೆಗೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಇವರೆಲ್ಲ ಹಠಾತ್ ಸಾವಿಗೆ ಒಳಗಾಗಿದ್ದರು.
ಕೋವಿಡ್ ಲಸಿಕೆಯಿಂದ ಇವರ ದೇಹದಲ್ಲಿ ಯಾವುದೇ ನ್ಯೂನ್ಯತೆ ಕಂಡು ಬಂದಿರಲಿಲ್ಲ ಎಂದು ಈ ಅಧ್ಯಯನ ತಿಳಿಸಿದೆ. ಕೋವಿಡ್ ಸಂದರ್ಭದಲ್ಲಿ ದೇಶದಲ್ಲಿ ಮರಣ ಮೃದಂಗವೇ ಸಂಭವಿಸುತ್ತಿದ್ದ ಸಂದರ್ಭದಲ್ಲಿ ಕೋವಿಡ್ ಲಸಿಕೆಗಳು ಸಂಜೀವಿನಿಯಂತೆ ಕಾರ್ಯನಿರ್ವಹಿಸಿದ್ದವು.
ಭಾರತದಲ್ಲಿ ತಯಾರಾದ ಲಸಿಕೆಗಳನ್ನು ವಿದೇಶಗಳಿಗೂ ಕಳುಹಿಸಿಕೊಡಲಾಗಿತ್ತು. ಆದರೆ ಕೆಲವು ವರ್ಷಗಳ ಬಳಿಕ ಕೋವಿಡ್ ಲಸಿಕೆಯಿಂದ ಕಿರಿಯ ಪ್ರಾಯದ ಪುರುಷರಲ್ಲಿ ಹೃದಯಾಘಾತದ ಅಪಾಯ ಹೆಚ್ಚುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿದ್ದವು.
ಇದೀಗ ಏಮ್ಸ್ ತಜ್ಞರ ನೇತೃತ್ವದಲ್ಲಿ ನಡೆಸಲಾದ ಈ ಅಧ್ಯಯನದಲ್ಲಿ ಸತ್ಯಾಂಶ ಹೊರಬಿದ್ದಿದ್ದು ಕೋವಿಡ್ ಲಸಿಕೆಗಳು ಆರೋಪಮುಕ್ತವಾದಂತಾಗಿದೆ.
AIIMS study refutes claims that Covid vaccine increases risk of heart attack Kannada News



