ಉಡುಪಿ : ನಿಶ್ಚಿತಾರ್ಥಕ್ಕೆ ಹಾಜರಾಗಲು ಸಿಗದ ರಜೆ : ಆನ್​ಲೈನ್​ನಲ್ಲೇ ಉಂಗುರ ವಿನಿಮಯ

ನಿಶ್ಚಿತಾರ್ಥದ ಬಗ್ಗೆ ಅನೇಕರಿಗೆ ತಮ್ಮದೇ ಆದ ಕನಸುಗಳಿರುತ್ತವೆ. ಆದರೆ ಉಡುಪಿಯಲ್ಲೊಂದು ವಿಭಿನ್ನವಾದ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ಮನೆಯವರು ಕುಟುಂಬಸ್ಥರಿಗೆಲ್ಲ ನಿಮ್ಮೆಲ್ಲ ಕೆಲಸಗಳಿಗೆ ರಜೆ ಹಾಕಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಆಹ್ವಾನ ನೀಡಿದ್ರು. ಆದರೆ ವಿಚಿತ್ರ ಏನು ಅಂದ್ರೆ.. ತಮ್ಮದೇ ನಿಶ್ಚಿತಾರ್ಥಕ್ಕೆ ಹಾಜರಾಗಲು ವರನಿಗೆ ರಜೆ ದೊರಕಿರಲಿಲ್ಲ…!
ಕಚೇರಿಯಲ್ಲಿ ತಮ್ಮದೇ ನಿಶ್ಚಿತಾರ್ಥಕ್ಕೆ ತೆರಳಲು ರಜೆ ದೊರಕದ ಹಿನ್ನೆಲೆಯಲ್ಲಿ ಯುವಕ ಹಾಗೂ ಯುವತಿ ಆನ್​ಲೈನ್​ ವಿಡಿಯೋ ಮೂಲಕ ಬ್ರಾಹ್ಮಣ ಸಂಪ್ರದಾಯದಂತೆ ಉಂಗುರ ವಿನಿಮಯ ಮಾಡಿಕೊಂಡಿದ್ದಾರೆ. ಉಡುಪಿಯಲ್ಲಿ ಈ ವಿಭಿನ್ನವಾದ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದ್ದು ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ಸುಹಾಸ್​ ಹಾಗೂ ಉಡುಪಿಯ ಕಾತ್ಯಾಯಿನಿ ನಡುವೆ ವರ್ಚುವಲ್​ ಎಂಗೇಜ್ಮೆಂಟ್​ ನಡೆದಿದೆ. ಕಾತ್ಯಾಯಿನಿ ವೇದಿಕೆಯಲ್ಲಿದ್ದರೆ ಸುಹಾಸ್​ ವಿದೇಶದಲ್ಲಿದ್ದುಕೊಂಡು ಎಂಗೇಜ್ಮೇಂಟ್​ ಶಾಸ್ತ್ರ ನೆರವೇರಿಸಿದ್ದಾರೆ.

ಇದನ್ನೂ ಓದಿ: ಭಾರತದ ಅಡುಗೆಗೆ ಟೇಸ್ಟ್‌ಅಟ್ಲಾಸ್ ಗರಿ: ಟಾಪ್ 15ರಲ್ಲಿ ಎಷ್ಟನೇ ಸ್ಥಾನ?

ಬೆಂಗಳೂರಿನಲ್ಲಿ ಬಿ.ಇ ವ್ಯಾಸಂಗ ಮುಗಿಸಿ ಸದ್ಯ ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಸುಹಾಸ್​ ಮದುವೆ ದಿನಾಂಕ ಜನವರಿ 7 ಹಾಗೂ 8ರಂದು ನಿಗದಿಯಾಗಿತ್ತು. ಮದುವೆಗೆ ರಜೆ ಕೊರತೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತಮ್ಮದೇ ನಿಶ್ಚಿತಾರ್ಥಕ್ಕೆ ಬಾರದೇ ಇರಲು ಸುಹಾಸ್​ ನಿರ್ಧರಿಸಿದ್ದಾರೆ. ಹೀಗಾಗಿ ಉಡುಪಿಯ ಸರಸ್ವತಿ ಸಭಾಭವನದಲ್ಲಿ ವಿಭಿನ್ನವಾದ ನಿಶ್ಚಿತಾರ್ಥ ನಡೆದಿದೆ.
ಕುಟುಂಬಸ್ಥರೆಲ್ಲ ಈ ನಿಶ್ಚಿತಾರ್ಥ ಸಮಾರಂಭಕ್ಕೆ ಹಾಜರಾಗಿ ವಧು ವರರನ್ನು ಆಶೀರ್ವದಿಸಿದ್ದಾರೆ. ಉಡುಪಿಯಲ್ಲಿ ಬೆಳಗಿನ ಸಮಯದಲ್ಲಿ ಕೆನಡಾದಲ್ಲಿ ಮಧ್ಯರಾತ್ರಿಯಾಗಿತ್ತು.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories