‘ಕೋಳಿ ಅಂಕದಲ್ಲಿ ಪೆಟ್ಟು ಕೊಡಲು ಅವರಪ್ಪನ ಜಾಗವಾ?’ : ಪೊಲೀಸರ ವಿರುದ್ಧ ನಾಲಗೆ ಹರಿಬಿಟ್ಟ ಶಾಸಕ ಅಶೋಕ್​ ರೈ

ಕೋಳಿ ಅಂಕದ ವಿಚಾರವಾಗಿ ಶಾಸಕ ಅಶೋಕ್​ ರೈ ಹಾಗೂ ಪೊಲೀಸರ ನಡುವಿನ ಜಿದ್ದಾಜಿದ್ದು ಯಾಕೋ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ವಿಟ್ಲ ತಾಲೂಕಿನ ಕೇಪುವಿನಲ್ಲಿ ಕೋಳಿ ಅಂಕ ನಡೆಸಲು ಪೊಲೀಸರ ನಿರ್ಬಂಧದ ನಡುವೆಯೂ ಅಶೋಕ್​ ರೈ ಮುಂದೆ ನಿಂತು ಕೋಳಿ ಕಾಳಗ ನಡೆಸುವ ಮೂಲಕ ಎಫ್​ಐಆರ್​ ಹಾಕಿಸಿಕೊಂಡಿದ್ದರು. ಇದೀಗ ಕಡಬದಲ್ಲಿ ನಡೆದ ತುಳುಕೂಟ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್​ ರೈ ಭಾಷಣದ ಸಂದರ್ಭದಲ್ಲಿ ಪೊಲೀಸರನ್ನು ಕಳ್ಳರೆಂದು ಸಂಭೋಧಿಸಿದ ವಿಡಿಯೋ ವೈರಲ್​ ಆಗಿದೆ.
ತುಳುಕೂಟದಲ್ಲಿ ಮಾತನಾಡಿದ ಶಾಸಕ ಅಶೋಕ್​ ರೈ, ಕೋಳಿ ಅಂಕದಲ್ಲಿ ಪೆಟ್ಟು ಕೊಡೋಕೆ ಅದೇನು ಅವರಪ್ಪನ ಜಾಗವಾ ? ಪೊಲೀಸರು ಅಂದರೆ ಅದೇನು ಅವರದ್ದೇ ದರ್ಬಾರು ಅಂದುಕೊಂಡಿದ್ದಾರಾ ? ಕೇಪುವಿನಲ್ಲಿ ಕೋಳಿ ಕಟ್ಟದ ನೆಪದಲ್ಲಿ ಜೂಜು ನಡೆಸುವುದಿಲ್ಲ. ಸಂಪ್ರದಾಯಕ್ಕಾಗಿ ಕೋಳಿ ಅಂಕ ನಡೆಸಲಾಗುತ್ತದೆ. ಅಲ್ಲಿಗೆ ಬಂದು ಲಾಠಿ ಚಾರ್ಜ್ ಮಾಡ್ತೇವೆ ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸದನದಲ್ಲಿ ಪೇಚಿಗೆ ಸಿಲುಕಿದ ಲಕ್ಷ್ಮೀ ಹೆಬ್ಬಾಳ್ಳ‌ರ್ ಬೆಂಬಲಕ್ಕೆ ನಿಂತ ಡಿ.ಕೆ ಶಿವಕುಮಾರ್ : ಸಿಎಂ ಇಲಾಖೆ ಮೇಲೆ ಆರೋಪ

ಇವರಿಗೆ ಯಾರದ್ದೂ ಹೆದರಿಕೆ ಇಲ್ಲ, ಕಳ್ಳರಿಗೆ..! ಎಂದು ಹೇಳುವ ಮೂಲಕ ಪೊಲೀಸರನ್ನೇ ಕಳ್ಳರು ಎಂದು ಶಾಸಕ ಅಶೋಕ್​ ರೈ ಜರಿದಿದ್ದಾರೆ . ನಿನ್ನೆ ಅಲ್ಲಿ ಸಂಜೆವರೆಗೆ ನಿಂತು ಕೋಳಿ ಕಟ್ಟ ಮಾಡಿಕೊಂಡು ಬಂದಿದ್ದೆ.ಕೋಳಿ ಅಂಕ ಅಧಿಕೃತ ಮಾಡುವುದಕ್ಕೇನು ತೊಂದರೆ ಇಲ್ಲ.ಆದರೆ ಇಲ್ಲಿ ಹೆಂಗಸರು ನಮಗೆ ಬೈತಾರಲ್ವಾ..? ಕೋಳಿ ಕಟ್ಟ ಎಂದು ಮನೆಯಲ್ಲಿ ಹೆಂಗಸರ ಬಂಗಾರ ಎತ್ತಿಕೊಂಡು ಹೋಗುವವರೂ ಇದ್ದಾರೆ. ಹೀಗಾಗಿ ನಮಗೆ ಕೋಳಿ ಕಟ್ಟದ ಪರವಾಗಿ ನಿಲ್ಲೋದಕ್ಕೂ ಆಗ್ತಿಲ್ಲ. ಹಾಗೆ ನಿಂತರೆ ಮಹಿಳೆಯರೇ ಮುಂದೆ ನಮ್ಮನ್ನು ಸೋಲಿಸಿಯಾರು ಎಂದು ಶಾಸಕ ಅಶೋಕ್​ ರೈ ಹೇಳಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories