ಅಯೋಧ್ಯೆಗೆ ₹30 ಕೋಟಿ ಮೌಲ್ಯದ ರಾಮಲಲ್ಲಾನ ವಿಗ್ರಹ ದೇಣಿಗೆ ನೀಡಿದ ಕರ್ನಾಟಕ ಮೂಲದ ವ್ಯಕ್ತಿ
ಅಯೋಧ್ಯೆ ರಾಮಮಂದಿರ ಅದೆಷ್ಟೋ ಹಿಂದೂಗಳ ಕನಸು. ಇದೀಗ ಅಯೋಧ್ಯೆಯ ರಾಮಮಂದಿರಕ್ಕೆ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರಿಂದ ಬಹುದೊಡ್ಡ ಕಾಣಿಕೆಯೊಂದು ದೊರಕಿದೆ. ಹೌದು..! ರಾಮನ ಪರಮಭಕ್ತರಾದ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ಬರೋಬ್ಬರಿ 30 ಕೋಟಿ ರೂಪಾಯಿ ಮೌಲ್ಯದ ವಜ್ರಖಚಿತ ರಾಮನ ವಿಗ್ರಹವನ್ನು ದೇಣಿಗೆ ರೂಪದಲ್ಲಿ ದೇಗುಲಕ್ಕೆ ಸರ್ಮಪಿಸಿದ್ದಾರೆ.
ವಜ್ರ, ಪಚ್ಚೆ, ಹವಳ ಸೇರಿದಂತೆ ಅಮೂಲ್ಯ ರತ್ನಗಳನ್ನು ಹೊಂದಿರುವ ರಾಮಲಲಾನ ಈ ಮೂರ್ತಿಯು 10 ಅಡಿ ಎತ್ತರ, 8 ಅಡಿ ಅಗಲವಿದೆ. ಇದನ್ನು ರಾಮಲಲ್ಲಾನ ದೇಗುಲದ ಆವರಣದಲ್ಲಿ ಪ್ರತಿಷ್ಠಾಪಿಸಲು ಸದ್ಯ ಸಿದ್ಧತೆ ನಡೆದಿದೆ. ಇದನ್ನು ದೇಣಿಗೆಯಾಗಿ ನೀಡಿರುವ ವ್ಯಕ್ತಿಯ ಹೆಸರು ಇನ್ನೂ ಬಹಿರಂಗಗೊಂಡಿಲ್ಲ.
ಈ ವಿಗ್ರಹವನ್ನು ಸಂಪೂರ್ಣವಾಗಿ ದಕ್ಷಿಣ ಭಾರತದ ವಾಸ್ತುಶಿಲ್ಪ ಬಳಕೆ ಮಾಡಿ ನಿರ್ಮಿಸಲಾಗಿದೆ. ಏನಿಲ್ಲವೆಂದರೂ ಈ ಪ್ರತಿಮೆಯ ಮೌಲ್ಯ 25 ರಿಂದ 30 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಪ್ರತಿಮೆಯು 5 ಕ್ವಿಂಟಾಲ್ ತೂಕ ಹೊಂದಿದೆ ಎನ್ನಲಾಗಿದೆ. ಪ್ರತಿಮೆಯ ಬಗ್ಗೆ ಶೀಘ್ರದಲ್ಲಿಯೇ ಮತ್ತಷ್ಟು ಮಾಹಿತಿ ನೀಡುತ್ತೇವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
ಇದನ್ನೂ ಓದಿ: Karungali Mala: ಯಾರಾದ್ರೂ ಗಿಫ್ಟ್ ಕೊಟ್ರು ಅಂತ ಈ ಮಾಲೆ ಹಾಕೋಬೇಡಿ! ಅಪಾಯ ಎದುರಾದೀತು!!
ಈ ಪ್ರತಿಮೆಯನ್ನು ಸಂತ ತುಳಸಿದಾಸ ದೇವಸ್ಥಾನದ ಬಳಿ ಇರುವ ಅಂಗದ್ ಟೀಲಾದಲ್ಲಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ. ತಾಂಜಾವೂರಿನ ನುರಿತ ಕುಶಲಕರ್ಮಿಗಳು ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ ಎನ್ನಲಾಗಿದೆ. ಸಂಪೂರ್ಣ ಚಿನ್ನ, ನೀಲಮಣಿ, ವಜ್ರ, ಪಚ್ಚೆ, ಹವಳಗಳಿಂದಲೇ ರಾಮಲಲಾ ಮಿನುಗುತ್ತಿರುವಂತೆ ಕಾಣುತ್ತಿದೆ.



