ವಿದ್ಯಾರ್ಥಿಗಳಿಗೆ 1.15 ಲಕ್ಷದವರೆಗೆ ಆರ್ಥಿಕ ನೆರವು: ಸಾಂದೀಪನಿ ಶಿಷ್ಯವೇತನದ ಬಗ್ಗೆ ತಿಳಿಯಿರಿ

Sandeepani Scholarship 2025: ಉನ್ನತ ಶಿಕ್ಷಣ ಪಡೆಯುತ್ತಿರುವ ಬ್ರಾಹ್ಮಣ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ‘ಸಾಂದೀಪನಿ ಶಿಷ್ಯವೇತನ’ ಯೋಜನೆಯ ಮೂಲಕ ಆಸರೆಯಾಗುತ್ತಿದೆ. ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳು ವಾರ್ಷಿಕವಾಗಿ ₹15,000 ರಿಂದ ₹1 ಲಕ್ಷದವರೆಗೆ ಆರ್ಥಿಕ ಸಹಾಯ ಪಡೆಯಬಹುದಾಗಿದೆ. ಶಿಷ್ಯವೇತನದ ವಿವರಗಳು: ಈ ಯೋಜನೆಯಲ್ಲಿ ಎರಡು ಹಂತದ ಹಣಕಾಸು ನೆರವು ಲಭ್ಯವಿದೆ:

ನಿರ್ವಹಣಾ ಭತ್ಯೆ: ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಸಾಮಾನ್ಯ ಪದವಿ (BA, BSc, BCom) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹1,500 ರಂತೆ ವರ್ಷಕ್ಕೆ ಒಟ್ಟು ₹15,000 ಸಹಾಯಧನ ನೀಡಲಾಗುತ್ತದೆ.

ಶುಲ್ಕ ಮರುಪಾವತಿ: ಸಿಇಟಿ (CET) ಅಥವಾ ನೀಟ್ (NEET) ಮೂಲಕ ಮೆರಿಟ್ ಸೀಟು ಪಡೆದು ಇಂಜಿನಿಯರಿಂಗ್ ಅಥವಾ ವೈದ್ಯಕೀಯದಂತಹ ವೃತ್ತಿಪರ ಕೋರ್ಸ್‌ಗಳನ್ನು ಓದುತ್ತಿರುವವರಿಗೆ ಅವರು ಪಾವತಿಸಿದ ಶೈಕ್ಷಣಿಕ ಶುಲ್ಕದಲ್ಲಿ ಗರಿಷ್ಠ ₹1 ಲಕ್ಷದವರೆಗೆ ಮರುಪಾವತಿ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು:

ಅರ್ಜಿದಾರರು ಕಡ್ಡಾಯವಾಗಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿರಬೇಕು ಮತ್ತು ಕರ್ನಾಟಕದ ನಿವಾಸಿಯಾಗಿರಬೇಕು.

ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇರಬೇಕು.

ಒಂದು ಕುಟುಂಬದ ಗರಿಷ್ಠ ಇಬ್ಬರು ಗಂಡು ಮಕ್ಕಳಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ಆದರೆ, ಹೆಣ್ಣು ಮಕ್ಕಳಿಗೆ ಇಂತಹ ಯಾವುದೇ ಮಿತಿಯಿಲ್ಲ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಅಭ್ಯರ್ಥಿಗಳು ಉತ್ತೀರ್ಣರಾಗಿರಬೇಕು.

ರಾಜ್ಯದ ಸರ್ಕಾರಿ ಶಾಲೆಗಳ ಹಾಜರಾತಿಗೆ ಹೈಟೆಕ್​ ಸ್ಪರ್ಶ : ಚಹರೆ ಗುರುತಿನ ಹಾಜರಾತಿ ಶೀಘ್ರದಲ್ಲೇ ಜಾರಿ

ಪ್ರಮುಖ ದಾಖಲೆಗಳು: ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಅಥವಾ EWS ಪ್ರಮಾಣ ಪತ್ರ), ಹಿಂದಿನ ವರ್ಷದ ಅಂಕಪಟ್ಟಿ ಹಾಗೂ ಪ್ರಸಕ್ತ ಸಾಲಿನ ಕಾಲೇಜು ಶುಲ್ಕ ಪಾವತಿಸಿದ ರಸೀದಿಗಳು ಅವಶ್ಯಕ.

ಅರ್ಜಿ ಸಲ್ಲಿಕೆ ಮತ್ತು ಕೊನೆಯ ದಿನಾಂಕ: ಆಸಕ್ತರು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (SSP) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories