ಬಿಗ್ ಬಾಸ್ 12ರ ಟ್ರೋಫಿಗೆ ಮುತ್ತಿಟ್ಟ ಗಿಲ್ಲಿ ನಟ, ಕೋಟಿ ಕೋಟಿ ಮತಗಳ ಜೊತೆ ಕರುನಾಡ ಮನಸ್ಸು ಗೆದ್ದ ಕಿಲಾಡಿ!
ಕರುನಾಡು ಕಾಯ್ತಾ ಇದ್ದ ಕನಸು ನನಸಾಗಿದೆ. ಹೌದು ಬಿಗ್ ಬಾಸ್ ಸೀಸನ್ 12 ರ ಟ್ರೋಫಿಗೆ ಮುತ್ತಿಟ್ಟಿದ್ದಾರೆ ಗಿಲ್ಲಿ ನಟ ಅವರು. ಹೌದು ಕಳೆದ ಒಂದು ವಾರದಿಂದ ಎಲ್ಲೆಡೆ ಗಿಲ್ಲಿ ಅವರ ಹವಾ ಜೋರಾಗಿತ್ತು. ಗಿಲ್ಲಿಗೆ ಮತ ಹಾಕಿ ಎಂದು ಗಲ್ಲಿ ಗಲ್ಲಿಯಲ್ಲೂ ಪ್ರಚಾರ ನಡೆಸಿದ್ದರು. ಅಭಿಮಾನಿಗಳ ಆಸೆ ಈಡೇರಿದೆ. ಬಿಗ್ ಬಾಸ್ 12 ವಿನ್ನರ್ ಆಗಿ ಗಿಲ್ಲಿ ನಟ ಹೊರ ಹೊಮ್ಮಿದ್ದಾರೆ.
ಬಿಗ್ ಬಾಸ್ ವಿನ್ನರ್
ಬಿಗ್ ಬಾಸ್ 12 ಶುರುವಾದಗಿನಿಂದ ಹವಾ ಕ್ರಿಯೇಟ್ ಮಾಡಿದ್ದು ಗಿಲ್ಲಿ ನಟ ಅಂದ್ರೆ ತಪ್ಪಾಗಲಾರದು. ಅವರ ರೀತಿ ಈ ಮನೆಯಲ್ಲಿ ಜೀವಿಸಿದ್ದು ಯಾರು ಇಲ್ಲ. ಹಾಸ್ಯ ಮಾಡಿ ಎಲ್ಲರನ್ನೂ ನಗಿಸಿದ್ದಾರೆ. ಹಾಸ್ಯದಿಂದಲೇ ಎದುರಾಳಿಗಳಿಗೆ ಠಕ್ಕರ್ ಕೊಟ್ಟಿದ್ದಾರೆ. ನಗುವಿನ ಮೂಲಕ ಬಿಸ್ ಬಾಸ್ ವಿನ್ನರ್ ಆಗಿದ್ದಾರೆ.
ಹೊಸ ಕ್ರೇಜ್ ಹುಟ್ಟಿಸಿದ ಗಿಲ್ಲಿ
ಈ ಬಾರಿ ಗಿಲ್ಲಿ ನಟ ಹೊಸ ಕ್ರೇಜ್ ಹುಟ್ಟಿಸಿದ್ದಾರೆ ಎಂದ್ರೆ ತಪ್ಪಾಗಲಾರದು. ಹೌದು ಗಿಲ್ಲಿ ಮನೆಯೊಳಗೆ ಇದ್ದರೂ, ಹೊರಗೆ ಭಾರೀ ಸೌಂಡ್ ಮಾಡಿದ್ದಾರೆ. ಎಲ್ಲೆಲ್ಲೂ ತಮ್ಮ ಕ್ರೇಜ್ ಹುಟ್ಟಿಸಿದ್ದಾರೆ. ಫಾಲೋವರ್ಸ್ ಕೂಡ ಹೆಚ್ಚಾಗಿದ್ದಾರೆ. ಅಭಿಮಾನಿಗಳು ತುಂಬಾ ಇಷ್ಟ ಪಡ್ತಾರೆ.
ಕೋಟಿ ಕೋಟಿ ಮತ
ಈ ಬಾರಿ ಗಿಲ್ಲಿ ಕ್ರೇಜ್ ಹೆಚ್ಚಾಗಿದೆ. ಗಿಲ್ಲಿಗೆ ಕೋಟಿ ಕೋಟಿ ಮತಗಳು ಬಂದಿವೆ. ಅಭಿಮಾನಿಗಳ ಮತದಿಂದ ಗಿಲ್ಲಿ ನಟ ಅವರು ಗೆದ್ದು ಟ್ರೋಪಿ ಎತ್ತಿದ್ದಾರೆ.
50 ಲಕ್ಷ ಗೆದ್ದ ಮಂಡ್ಯ ಹುಡುಗ
ಗಿಲ್ಲಿ ನಟ ಬಿಗ್ ಬಾಸ್ ವಿನ್ ಆಗಿದ್ದಾರೆ. ಟ್ರೋಪಿ ಜೊತೆ 50 ಲಕ್ಷ ಹಣವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ಬೇರೆ ಬೇರೆ ಬಹುಮಾನಗಳು ಬಂದಿವೆ.
ಜನಪ್ರಿಯ ಹಾಸ್ಯ ನಟ
ಗಿಲ್ಲಿ ನಟ ಕನ್ನಡದ ಜನಪ್ರಿಯ ಹಾಸ್ಯ ನಟ. ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದು, ಅವರ ಕಾಮಿಡಿ ಮತ್ತು ನಟನೆಗೆ ಹೆಸರಾಗಿದ್ದಾರೆ. ಗಿಲ್ಲಿ ನಟ ಅವರು ‘ಕ್ವಾಟ್ಲೆ ಕಿಚನ್’ ಮತ್ತು ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದರು.
ಇದನ್ನೂ ಓದಿ: https://kannada.newsnext.live/cinema/kavya-out-from-bigg-boss-house-see-detail/
ಪ್ರೇಕ್ಷಕರ ಮನ ಗೆದ್ದ ಗಿಲ್ಲಿ
ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಶೈವ ಅವರೊಂದಿಗೆ ತಮಾಷೆಯ ಲವ್ ಸ್ಟೋರಿ ನಡೆಸ್ತಾ ಇದ್ದಾರೆ.ಗಿಲ್ಲಿ ನಟ ಅವರ ಹಾಸ್ಯ ಮತ್ತು ನಟನೆಯಿಂದ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ.



