ಗಿಲ್ಲಿಗೆ ಪ್ರೀತಿಯಿಂದ 10 ಲಕ್ಷ ಬಹುಮಾನ ಘೋಷಿಸಿದ ಸುದೀಪ್, ಹಳ್ಳಿ ಪ್ರತಿಭೆ ಬೆಳೆಯಬೇಕು ಎಂದ ಕಿಚ್ಚ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಬಿಗ್ ಬಾಸ್ ಸೀಸನ್ 12 ಮುಕ್ತಾಯವಾಗಿದೆ. ಬಿಗ್ ಬಾಸ್ ಗೆದ್ದು ಗಿಲ್ಲಿ ನಟ ಖುಷಿಯಾಗಿದ್ದಾರೆ. ಅವರ ಖುಷಿಯನ್ನು ಮತ್ತಷ್ಟು ಡಬಲ್ ಮಾಡಿದ್ದು ಕಿಚ್ಚ ಸುದೀಪ್. ಹೌದು ವೇದಿಯಲ್ಲೇ ಗಿಲ್ಲಿಗೆ ನನ್ನ ಕಡೆಯಿಂದ 10 ಲಕ್ಷ ಕೊಡುತ್ತೇನೆ ಎಂದು ಘೋಷಿಸಿದ್ದಾರೆ.
ಕೋಟಿ ಕೋಟಿ ಮತ
ಈ ಬಾರಿ ಗಿಲ್ಲಿ ಕ್ರೇಜ್ ಹೆಚ್ಚಾಗಿತ್ತು. ಗಿಲ್ಲಿಗೆ ಕೋಟಿ ಕೋಟಿ ಮತಗಳು ಬಂದಿವೆ. ಅಭಿಮಾನಿಗಳ ಮತದಿಂದ ಗಿಲ್ಲಿ ನಟ ಅವರು ಗೆದ್ದು ಟ್ರೋಪಿಗೆ ಮುತ್ತಿಕ್ಕಿದ್ದಾರೆ. ತುಂಬಾ ಸಂತೋಷವಾಗಿ ಗಿಲ್ಲಿ ಮನೆಯಿಂದ ಹೊರ ನಡೆದಿದ್ದಾರೆ.
50 ಲಕ್ಷ ಗೆದ್ದ ಮಂಡ್ಯ ಹುಡುಗ
ಗಿಲ್ಲಿ ನಟ ಬಿಗ್ ಬಾಸ್ ವಿನ್ ಆಗಿದ್ದಾರೆ. ಟ್ರೋಪಿ ಜೊತೆ 50 ಲಕ್ಷ ಹಣವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ಬೇರೆ ಬೇರೆ ಬಹುಮಾನಗಳು ಬಂದಿವೆ. ಅಲ್ಲದೇ ಕಾರ್ ಸಹ ಗಿಲ್ಲಿಗೆ ಗಿಫ್ಟ್ ಆಗಿ ಸಿಕ್ಕಿದೆ.
ಒಟ್ಟು 60 ಲಕ್ಷ
ಗಿಲ್ಲಿ ಬಹುಮಾನವಾಗಿ ಪಡೆದ 50 ಲಕ್ಷದ ಜೊತೆ ನಟ ಸುದೀಪ್ ಅವರು ತಮ್ಮ ಕಡೆಯಿಂದ 10 ಲಕ್ಷ ಕೊಟ್ಟಿದ್ದಾರೆ. ಒಟ್ಟು 60 ಲಕ್ಷ ಹಣ ಸಿಗಲಿದೆ.
ಇದನ್ನೂ ಓದಿ: https://kannada.newsnext.live/cinema/the-gili-nata-win-the-bigg-boss-12-trophy/
ರಕ್ಷಿತಾ ಶೆಟ್ಟಿ ರನ್ನರ್ ಅಪ್
ಬಿಗ್ ಬಾಸ್ 12ರಲ್ಲಿ ಗಿಲ್ಲಿ ವಿನ್ನರ್ ಆದ್ರೆ. ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದಾರೆ. ಅಶ್ವಿನಿ ಗೌಡ ಅವರು 3 ನೇ ಸ್ಥಾನಕ್ಕೆ ತೃಪಪ್ತಿ ಪಟ್ಟುಕೊಂಡಿದ್ದಾರೆ.



