Brahmavara: ಕರವೇ ಮುಖಂಡ ಪ್ರವೀಣ್​ ವಿರುದ್ಧ ಹಲ್ಲೆ ಆರೋಪ : ಸುಷ್ಮಾ ಗೌಡ ವಿಚಾರಕ್ಕೆ ನಡೀತಾ ಡೆಡ್ಲಿ ಫೈಟ್​ !

Brahmavara: ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರೋರ್ವರಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಂತಹ ಘಟನೆಯೊಂದು ಉಡುಪಿ(Udupi) ಜಿಲ್ಲೆ ಬ್ರಹ್ಮಾವರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ತಪ್ಪು ಆರೋಪಗಳ ವಿಚಾರವಾಗಿ ಮಾತನಾಡಲು ಕರೆಸಿ ಸ್ಟೀಲ್​ ರಾಡಿನಿಂದ ಹಲ್ಲೆ ನಡೆಸಿದ ಆರೋಪ ಬ್ರಹ್ಮಾವರದ ಕರವೇ ಅಧ್ಯಕ್ಷ ಪ್ರವೀಣ್​ ಮೇಲೆ ಎದುರಾಗಿದೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಏನಿದು ಪ್ರಕರಣ ?

ತೆಂಕನಿಡಿಯೂರು ನಿವಾಸಿ ಕಿರಣ್​ ಪಿಂಟೋ ಎಂಬವರ ಮೇಲೆ ಹಲ್ಲೆ ನಡೆದಿದ್ದು , ಹಲ್ಲೆ ನಡೆಸಿದ ಆರೋಪ ಪ್ರವೀಣ್​ ಮೇಲೆ ಎದುರಾಗಿದೆ. ಈ ಪ್ರಕರಣದ ಆರೋಪಿ ಎನಿಸಿರುವ ಪ್ರವೀಣ್​ ದೂರವಾಣಿ ಮೂಲ ಸುಷ್ಮಾ ಗೌಡ ಬಗ್ಗೆ ತಪ್ಪು ಆರೋಪ ಮಾಡಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಸ್ಪಷ್ಟನೆ ನೀಡಲು ದೈವದ ಮುಂದೆ ಪ್ರಮಾಣ ಮಾಡುವುದಾಗಿ ಕಿರಣ್​ ಪಿಂಟೋ ತಿಳಿಸಿದ್ದರು.

Also Read: ಪರ್ಯಾಯ ಸಂಭ್ರಮದಲ್ಲಿ ಕೃಷ್ಣನಗರಿ ಉಡುಪಿ: ರವಿವಾರ ಸರ್ವಜ್ಞಪೀಠ ಏರಲಿರುವ ಶೀರೂರು ಶ್ರೀಗಳು

ರಾತ್ರಿ ಸುಮಾರು 8:30ರ ಸುಮಾರಿಗೆ ಬ್ರಹ್ಮಾವರದ ಶಾಂತರು ಗ್ರಾಮದ ಕುಬೇರ ಬಾರ್​ ಬಳಿ ಕಿರಣ್​ ಆಗಮಿಸಿದ್ದ ಸಂದರ್ಭದಲ್ಲಿ ಕಾರಿನಿಂದ ಬಂದಿಳಿದ ಕರವೇ ಬ್ರಹ್ಮಾವರ ತಾಲೂಕು ಅಧ್ಯಕ್ಷ ಪ್ರವೀಣ್​, ಸುಜಿತ್ ಡಿಸೋಜ, ಉಡುಪಿ ಜಿಲ್ಲಾ ಸಂಚಾಲಕಿ ಸುಷ್ಮಾ ಗೌಡ, ಜಿಲ್ಲಾ ಉಪಾಧ್ಯಕ್ಷ ಅಶ್ವಿನಿ ನಾಯ್ಕ ಕಿರಣ್​ ಮೇಲೆ ಹಲ್ಲೆ ನಡೆಸಿದ್ದಾರೆ.

ಸುಜಿತ್​ ಡಿಸೋಜಾ ಹಾಗೂ ಸುಷ್ಮಾ ಗೌಡ ಕಿರಣ್​ ಪಿಂಟೋವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರೆ ಪ್ರವೀಣ್​ ಕಾರಿನಲ್ಲಿದ್ದ ಸ್ಟೀಲ್​ ರಾಡ್​ ತೆಗೆದು ಹಲ್ಲೆ ಮಾಡಿದ್ದಾರೆ. ಇದರಿಂದ ಕಿರಣ್​ ಪಿಂಟೋ ಎಡಭುಜಕ್ಕೆ ಬಲವಾದ ಪೆಟ್ಟಾಗಿದ್ದು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಇದೀಗ ಬ್ರಹ್ಮಾವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories