PM Kisan Samman Nidhi: 2ರಿಂದ 4ಸಾವಿರಕ್ಕೆ ಹೆಚ್ಚುತ್ತಾ ಕಿಸಾನ್ ಸಮ್ಮಾನ್ ನಿಧಿ ಹಣ?

PM Kisan Samman Nidhi Increase: ನವದೆಹಲಿ: ದೇಶದ ಕೋಟ್ಯಂತರ ಅನ್ನದಾತರಿಗೆ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲು ಸಜ್ಜಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ ಅಡಿಯಲ್ಲಿ ಅರ್ಹ ರೈತರು ತಮ್ಮ 22ನೇ ಕಂತಿನ ಹಣವನ್ನು ಪಡೆಯುವ ಸಮಯ ಹತ್ತಿರವಾಗುತ್ತಿದೆ.
ಕಳೆದ ನವೆಂಬರ್‌ನಲ್ಲಿ 21ನೇ ಕಂತಿನ ಹಣ ಯಶಸ್ವಿಯಾಗಿ ವಿತರಣೆಯಾದ ಬೆನ್ನಲ್ಲೇ, ಇದೀಗ ಮುಂದಿನ ಕಂತಿನ ₹2,000 ಹಣವನ್ನು ಫೆಬ್ರವರಿ ತಿಂಗಳ ದ್ವಿತೀಯಾರ್ಧದಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಜಮೆ ಮಾಡಲು ಕೃಷಿ ಇಲಾಖೆ ಸಿದ್ಧತೆ ನಡೆಸುತ್ತಿದೆ.
ಈ ಬಾರಿಯ ಕಂತು ರೈತರಿಗೆ ವಿಶೇಷ ಕುತೂಹಲ ಮೂಡಿಸಿದೆ. ಫೆಬ್ರವರಿ 1ರಂದು ಮಂಡನೆಯಾಗಲಿರುವ 2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ, ಪ್ರಸ್ತುತ ನೀಡಲಾಗುತ್ತಿರುವ ವಾರ್ಷಿಕ ₹6,000 ಆರ್ಥಿಕ ನೆರವನ್ನು ₹4,000ಕ್ಕೆ ಏರಿಕೆ ಮಾಡಬಹುದೆಂಬ ಬಲವಾದ ನಿರೀಕ್ಷೆ ಇದೆ.
ಕೃಷಿ ವೆಚ್ಚಗಳ ಏರಿಕೆ ಮತ್ತು ರೈತರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಒಂದು ವೇಳೆ ಮೊತ್ತ ಏರಿಕೆಯಾದಲ್ಲಿ, ರೈತರು ಪ್ರತಿ ಕಂತಿನಲ್ಲಿ ಪಡೆಯುವ ಹಣವು ₹2,000 ರಿಂದ ₹4,000 ಕ್ಕೆ ಏರಿಕೆಯಾಗಲಿದೆ.
ಆದರೆ, ಈ ಯೋಜನೆಯ ಲಾಭವನ್ನು ನಿರಂತರವಾಗಿ ಪಡೆಯಲು ರೈತರು ಕೆಲವು ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಮುಖ್ಯವಾಗಿ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಂಡಿರದ ರೈತರಿಗೆ ಮುಂದಿನ ಕಂತಿನ ಹಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
Udupi Varahi Irrigation Project : ವಾರಾಹಿ ಯೋಜನೆ ರದ್ದು : ಕರಾವಳಿಯಲ್ಲಿ ಬುಗಿಲೆದ್ದ ಆಕ್ರೋಶ, ಏನಿದು ವಿವಾದ ?
ಇದರೊಂದಿಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮತ್ತು ಭೂದಾಖಲೆಗಳ ಪರಿಶೀಲನೆ (Land Seeding) ಪ್ರಕ್ರಿಯೆಯೂ ಯಶಸ್ವಿಯಾಗಿರಬೇಕು. ಅರ್ಹ ರೈತರು ಅಧಿಕೃತ ಪಿಎಂ ಕಿಸಾನ್ ಪೋರ್ಟಲ್ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಸ್ಟೇಟಸ್ ಪರಿಶೀಲಿಸಿಕೊಳ್ಳಲು ಸೂಚಿಸಲಾಗಿದೆ. ಸರ್ಕಾರದ ಈ ಕ್ರಮವು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ನಿಲ್ಲುವುದರ ಜೊತೆಗೆ, ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಅರ್ಹರಿಗೆ ತಲುಪುತ್ತಿದೆ ಎಂಬುದು ಗಮನಾರ್ಹ.



