ಅಲೆಮಾರಿ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಸಹಾಯ ಹಸ್ತ : ದಲಿತ ಮಠಗಳಿಗೆ ಸಿಗಲಿದೆ ಸರ್ಕಾರಿ ಜಾಗ
Karnataka government Good News ಬೆಂಗಳೂರು : : ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಜೊತೆಯಲ್ಲಿ ಹಿಂದುಳಿದ ಹಾಗೂ ದಲಿತ ವರ್ಗಗಳಿಗೆ ಸೇರಿದ ಮಠಗಳಿಗೂ ಶುಭ ಸುದ್ದಿ ದೊರಕಿದೆ.
ರಾಜ್ಯದಲ್ಲಿರುವ 22 ದಲಿತ ಹಾಗೂ ಹಿಂದುಳಿದ ಮಠಗಳಿಗೆ ಜಾಗ ಮಂಜೂರು ಮಾಡಲು ಕ್ಯಾಬಿನೆಟ್ ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ. ಈ ನಿರ್ಧಾರದ ಅನ್ವಯ ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಮಠಗಳು ಸರ್ಕಾರಿ ಜಾಗಗಳಲ್ಲಿ ನಿರ್ಮಾಣಗೊಳ್ಳಲಿವೆ.
ಈ ಮಠಗಳಿಗೆ ಬೆಂಗಳೂರು(Bengaluru) ಉತ್ತರ ತಾಲೂಕಿನ ದಾಸನಾಪುರ ಹೋಬಳಿಯಲ್ಲಿರುವ ಸರ್ಕಾರಿ ಜಮೀನನ್ನು ಮಂಜೂರು ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ರಾವುತ್ತನಹಳ್ಳಿ ಗ್ರಾಮದ ಸರ್ವೆ ನಂ. 57 ಮತ್ತು 58ರಲ್ಲಿರುವ ಸರ್ಕಾರಿ ಜಮೀನುಗಳನ್ನು ನೀಡಲು ಹಸಿರು ನಿಶಾನೆ ತೋರಲಾಗಿದೆ.
Also Read : ಮುಡಾ ಹಗರಣ: ಸಿಎಂ ಆಪ್ತ ಮರೀಗೌಡರ 20 ಕೋಟಿ ಮೌಲ್ಯದ 10 ಸ್ಥಿರ ಆಸ್ತಿಗಳು ಮುಟ್ಟುಗೋಲು
ಇನ್ನು ಇದರ ಜೊತೆಯಲ್ಲಿ ಅಲೆಮಾರಿ/ ಅರೆ ಅಲೆಮಾರಿ ಸಮುದಾಯಕ್ಕೆ ಸಿಹಿ ಸುದ್ದಿ ನೀಡಿರುವ ರಾಜ್ಯ ಸರ್ಕಾರ ಮನೆ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಲಿದೆ. 100 ಕೋಟಿ ಮೊತ್ತದಲ್ಲಿ, 1200 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ 600 ಚದರ ಅಡಿಗಳ ವಿಸ್ತೀರ್ಣದ ಮನೆಗಳ ನಿರ್ಮಾಣಕ್ಕೆ ಸಚಿವ ಸಂಪುಟ ಅಸ್ತು ಎಂದಿದೆ.
Also Read : ಈ 94 ಲಕ್ಷ ರೈತರ ಖಾತೆಗೆ ಫೆಬ್ರವರಿಯಲ್ಲಿ 4,000 ರೂಪಾಯಿ ಜಮಾ
Karnataka government extends helping hand to nomadic community Dalit monasteries will get government land Kannada News



