India test squad: ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಮಹಿಳಾ ಟೆಸ್ಟ್ ತಂಡ ಪ್ರಕಟ
India vs Australia: ಮುಂಬೈ: ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಬಹುನಿರೀಕ್ಷಿತ ಕ್ರಿಕೆಟ್ ಸರಣಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶನಿವಾರ ಭಾರತೀಯ ಮಹಿಳಾ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಪ್ರತಿಕಾ ರಾವಲ್ ಪುನರಾಗಮನ
ಈ ತಂಡದ ಪ್ರಮುಖ ಆಕರ್ಷಣೆ ಎಂದರೆ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದ ಪ್ರತಿಭಾನ್ವಿತ ಬ್ಯಾಟರ್ ಪ್ರತಿಕಾ ರಾವಲ್ ಅವರ ಪುನರಾಗಮನ. ಏಕದಿನ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ರಾವಲ್ (24 ಪಂದ್ಯಗಳಲ್ಲಿ 1,110 ರನ್, ಸರಾಸರಿ 50.45), ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಆದರೆ, ಇವರು ಸರಣಿಯ ಏಕದಿನ ಮತ್ತು ಟಿ20 ತಂಡಗಳಲ್ಲಿ ಸ್ಥಾನ ಪಡೆದಿಲ್ಲ ಎಂಬುದು ಗಮನಾರ್ಹ.
ಕಮಲಿನಿ ಔಟ್, ಉಮಾ ಚೆಟ್ರಿ ಇನ್
ಗಾಯದ ಸಮಸ್ಯೆಯಿಂದಾಗಿ ವಿಕೆಟ್ ಕೀಪರ್ ಜಿ. ಕಮಲಿನಿ ಅವರು ಇಡೀ ಪ್ರವಾಸದಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಉಮಾ ಚೆಟ್ರಿ ಅವರನ್ನು ಏಕದಿನ ಮತ್ತು ಟಿ20 ತಂಡಗಳಿಗೆ ಸೇರಿಸಿಕೊಳ್ಳಲಾಗಿದೆ.
ಸರಣಿಯ ವೇಳಾಪಟ್ಟಿ
ಫೆಬ್ರವರಿ 15 ರಿಂದ ಮಾರ್ಚ್ 9, 2026 ರವರೆಗೆ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಪ್ರವಾಸ ಕೈಗೊಳ್ಳಲಿದೆ. ಸರಣಿಯು ಒಟ್ಟು ಮೂರು ಟಿ20, ಮೂರು ಏಕದಿನ ಮತ್ತು ಒಂದು ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಒಳಗೊಂಡಿದೆ. ಸರಣಿಯ ಮೊದಲ ಟಿ20 ಪಂದ್ಯವು ಫೆಬ್ರವರಿ 15ರಂದು ಸಿಡ್ನಿಯಲ್ಲಿ ನಡೆಯಲಿದೆ.
ಜಿಯೋ, ಏರ್ಟೆಲ್ ಬಳಕೆದಾರರಿಗೆ ಬಿಗ್ ಶಾಕ್ : ರೀಚಾರ್ಜ್ ದರ ಶೀಘ್ರದಲ್ಲೇ ಮತ್ತಷ್ಟು ಏರಿಕೆ
ಭಾರತ ಮಹಿಳಾ ಟೆಸ್ಟ್ ತಂಡ ಇಂತಿದೆ:
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಅಮನ್‌ಜೋತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಪ್ರತಿ ಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರೇಣುಕಾ ಠಾಕೂರ್, ಸ್ನೇಹ ರಾಣಾ, ಕ್ರಾಂತಿ ಗೌಡ್, ವೈಷ್ಣವಿ ಶರ್ಮಾ ಮತ್ತು ಸಯಾಲಿ ಸತ್ಘರೆ.
ಇಂಡಿಯಾ ‘ಎ’ ತಂಡ ಪ್ರಕಟ
ಇದೇ ವೇಳೆ ಥೈಲ್ಯಾಂಡ್‌ನಲ್ಲಿ ಫೆಬ್ರವರಿ 13 ರಿಂದ 22 ರವರೆಗೆ ನಡೆಯಲಿರುವ ‘ಎಸಿಸಿ ರೈಸಿಂಗ್ ಸ್ಟಾರ್ ಏಷ್ಯಾ ಕಪ್’ ಟೂರ್ನಿಗಾಗಿ ‘ಇಂಡಿಯಾ ಎ’ ತಂಡವನ್ನೂ ಬಿಸಿಸಿಐ ಪ್ರಕಟಿಸಿದೆ. ಅನುಭವಿ ಸ್ಪಿನ್ನರ್ ರಾಧಾ ಯಾದವ್ ಈ ತಂಡವನ್ನು ಮುನ್ನಡೆಸಲಿದ್ದಾರೆ.



