ಕರ್ನಾಟಕಕ್ಕೆ ಬರುತ್ತಿದೆ ಮೂರು ನೂತನ ವಂದೇ ಭಾರತ್ ರೈಲು : ಕರಾವಳಿ ಜನತೆಗೂ ಗುಡ್ ನ್ಯೂಸ್
ಕರ್ನಾಟಕದಲ್ಲಿ ಮೂರು ಹೊಸ ವಂದೇ ಭಾರತ್ ರೈಲು ಆರಂಭಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ಈ ಮೂರು ರೈಲುಗಳ ಪೈಕಿ 2 ರೈಲು ಕರ್ನಾಟಕ ಹಾಗೂ ಕೇರಳ ನಡುವೆ ಸಂಚರಿಸಲಿದ್ದು ಬೆಂಗಳೂರು ಹಾಗೂ ಮಂಗಳೂರಿನ ಜನತೆಗೆ ಅನುಕೂಲವಾಗಲಿದೆ.
ಮೂರು ಪ್ರಮುಖ ಮಾರ್ಗಗಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸಲಿದ್ದು , ಪ್ರಯಾಣಿಕರಿಗೆ ಅತ್ಯಂತ ಆರಾಮದಾಯಕ ಪ್ರಯಾಣದ ಅನುಭವ ನೀಡಲಿದೆ.
ಈ ವಂದೇ ಭಾರತ್ ಸ್ಲೀಪರ್ ರೈಲುಗಳು ತಿರುವನಂತಪುರದಿಂದ ಬೆಂಗಳೂರು, ಮಂಗಳೂರು ಹಾಗೂ ಚೆನ್ನೈ ಮಾರ್ಗವಾಗಿ ಸಂಚರಿಸಲಿವೆ. ಕೇರಳದಲ್ಲಿ ಸಂಚರಿಸುತ್ತಿರುವ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ, ತಿರುವನಂತಪುರಂ -ಮಂಗಳೂರು ಮಾರ್ಗದ ರೈಲು ಹೆಚ್ಚು ಆದಾಯವನ್ನು ಗಳಿಸುತ್ತಿದೆ. 2023ರ ಏಪ್ರಿಲ್‌ನಲ್ಲಿ ಕೇರಳದಲ್ಲಿ ಮೊದಲ ವಂದೇ ಭಾರತ್ ಸೇವೆ ಆರಂಭಗೊಂಡು ಭರ್ಜರಿ ಯಶಸ್ಸು ಸಂಪಾದಿಸಿದೆ.



