ಐಸಿಸಿ ಟಿ20 ವಿಶ್ವಕಪ್​ : ಭಾರತದೊಂದಿಗಿನ ಪಂದ್ಯ ಬಹಿಷ್ಕರಿಸಿದ ಪಾಕಿಸ್ತಾನ

ಇದೇ ತಿಂಗಳಿನಿಂದ ಐಸಿಸಿ ಟಿ 20 ವಿಶ್ವಕಪ್​ ಕ್ರಿಕೆಟ್​ ಟೂರ್ನಿ ಆರಂಭಗೊಳ್ಳಲಿದ್ದು ಈ ಪಂದ್ಯದಲ್ಲಿ ಭಾರತದ ವಿರುದ್ಧ ಯಾವುದೇ ಪಂದ್ಯಗಳನ್ನು ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಘೋಷಣೆ ಹೊರಡಿಸಿದೆ. ವಿಶ್ವಕಪ್​ನ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತೇವೆ. ಆದರೆ ಭಾರತದೊಂದಿಗಿನ ಪಂದ್ಯಗಳನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಹೇಳಿದೆ.
ಇದೇ ತಿಂಗಳ 7ನೇ ತಾರೀಖಿನಿಂದ ಐಸಿಸಿ ಟಿ 20 ಪಂದ್ಯಾವಳಿ ಆರಂಭಗೊಳ್ಳಲಿದ್ದು, ವೇಳಾಪಟ್ಟಿಯ ಪ್ರಕಾರ ಕೊಲಂಬೋದಲ್ಲಿ ಭಾರತ ಹಾಗೂ ಪಾಕ್​ ನಡುವೆ ಪಂದ್ಯ ನಿಗದಿಯಾಗಿದೆ. ಆದರೆ ಪಾಕಿಸ್ತಾನದ ಈ ನಿರ್ಧಾರದ ಬಳಿಕ ಐಸಿಸಿ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬ ಕುತೂಹಲ ಮನೆ ಮಾಡಿದೆ.

ಇದನ್ನೂ ಓದಿ: ಐಪಿಎಲ್ 2026ಕ್ಕೆ ಧೋನಿ ಭರ್ಜರಿ ತಯಾರಿ: ‘ಥಾಲಾ’ ಸಮರಾಭ್ಯಾಸ ಆರಂಭ!

ಐಸಿಸಿ ಟಿ 20 ವಿಶ್ವಕಪ್​ ಪಂದ್ಯಾವಳಿಯಿಂದ ಬಾಂಗ್ಲಾದೇಶವನ್ನು ದೂರ ಇಟ್ಟ ಹಿನ್ನೆಲೆಯಲ್ಲಿ ಈ ಕ್ರಮವನ್ನು ವಿರೋಧಿಸಿ ಪಾಕಿಸ್ತಾನವು ಈ ರೀತಿಯಾಗಿ ಪ್ರತಿಭಟಿಸಿದೆ . ಪಾಕಿಸ್ತಾನ ಪಂದ್ಯ ಬಹಿಷ್ಕರಿಸಿ ಇರುವುದರಿಂದ ಭಾರತಕ್ಕೆ ಈ ಪಂದ್ಯದ ಪೂರ್ಣ ಅಂಕ ಆಡದೆಯೇ ಒಲಿಯಲಿದೆ. ಇದರ ಜೊತೆಯಲ್ಲಿ ಐಸಿಸಿ ಪಾಕಿಸ್ತಾನದ ಕ್ರಿಕೆಟ್​ ತಂಡಕ್ಕೆ ದಂಡ ವಿಧಿಸುವ ಸಾಧ್ಯತೆ ಇದೆ. ಆದರೆ ಪಾಕಿಸ್ತಾನ ಹಾಗೂ ಭಾರತ ಪಂದ್ಯದಲ್ಲಿ ವೀಕ್ಷಕರ ಸಂಖ್ಯೆ ಅಪಾರ. ಹೀಗಾಗಿ ಪಾಕಿಸ್ತಾನದ ಈ ನಿರ್ಧಾರದಿಂದ ಜಾಹಿರಾತು ಕಂಪನಿಗಳ ಹೂಡಿಕೆಯಿಂದ ಬರುತ್ತಿದ್ದ ಆದಾಯಕ್ಕೆ ಪೆಟ್ಟು ಬಿದ್ದಂತಾಗಿದೆ. ಆರ್ಥಿಕ ನಷ್ಟದ ಹೊಣೆ ಯಾರು ಹೊರುತ್ತಾರೆ ಎಂಬ ಪ್ರಶ್ನೆ ಮನೆ ಮಾಡಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories